ಸಾರಾಂಶ
ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ಎಕೆ-47 ಕ್ರಿಕೆಟ್ ಕ್ಲಬ್ ವತಿಯಿಂದ ಬುಧವಾರ ನಡೆದ ಕಬ್ಬಳ ಕ್ರಿಕೆಟ್ ಹಬ್ಬ- ಸೀಸನ್ 11ರ ಟೂರ್ನಿಯಲ್ಲಿ ಲಾಯಲ್ ಆರ್‌ಸಿಬಿಯನ್ಸ್ ತಂಡವು ಎಸ್.ಎಸ್. ಐಕಾನ್ ತಂಡವನ್ನು ಸೋಲಿಸಿ, ಚಾಂಪಿಯನ್‌ಶಿಪ್ ಮತ್ತು ನಗದು ಬಹುಮಾನ ₹33 ಸಾವಿರ ಗಳಿಸಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ಎಕೆ-47 ಕ್ರಿಕೆಟ್ ಕ್ಲಬ್ ವತಿಯಿಂದ ಬುಧವಾರ ನಡೆದ ಕಬ್ಬಳ ಕ್ರಿಕೆಟ್ ಹಬ್ಬ- ಸೀಸನ್ 11ರ ಟೂರ್ನಿಯಲ್ಲಿ ಲಾಯಲ್ ಆರ್‌ಸಿಬಿಯನ್ಸ್ ತಂಡವು ಎಸ್.ಎಸ್. ಐಕಾನ್ ತಂಡವನ್ನು ಸೋಲಿಸಿ, ಚಾಂಪಿಯನ್‌ಶಿಪ್ ಮತ್ತು ನಗದು ಬಹುಮಾನ ₹33 ಸಾವಿರ ಗಳಿಸಿತು.ದ್ವಿತೀಯ ಬಹುಮಾನ ಪಡೆದ ಎಸ್.ಎಸ್. ಐಕಾನ್ ತಂಡಕ್ಕೆ ಪಾರಿತೋಷಕ ಮತ್ತು ₹22 ಸಾವಿರ ನಗದು ಬಹುಮಾನ ನೀಡಲಾಯಿತು. ರಿಷಿ ಭುವಿ ಕ್ರಿಕೆಟರ್ಸ್ ತಂಡ ಮೂರನೇ ಸ್ಥಾನ ಪಡೆಯುತು.
ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದು ವಿಶೇಷ. ಈ ಸೌಹಾರ್ದಯುತ ಪಂದ್ಯಾವಳಿಯಲ್ಲಿ 8 ತಂಡಗಳು ಭಾಗವಹಿಸಿದ್ದವು. ಕಬ್ಬಳ ಕ್ರಿಕೆಟ್ ಹಬ್ಬದ ಮೂಲ ಧ್ಯೇಯವಾಕ್ಯವಾದ "ಕ್ರೀಡೆ ಸ್ನೇಹಕ್ಕಾಗಿ ಹೊರತು ಸಮರಕ್ಕಾಗಿ ಅಲ್ಲ " ಹೆಸರಿನಡಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಸ್ಥಳೀಯರೇ ಬಹುಮಾನಗಳನ್ನು ಪ್ರಾಯೋಜಿಸಿದ್ದು ವಿಶೇಷ. 3 ದಿನಗಳ ಕಾಲ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯಿತು.ಗ್ರಾಮದ ಮುಖಂಡರಾದ ಮನೋಹರ್ ನಾಯ್ಕ, ಬಿಜೆಪಿ ಶಿವ ನಾಯ್ಕ, ಸತೀಶ್ ನಾಯ್ಕ, ಹಿರಿಯ ಆಟಗಾರರಾದ ಸುಧೀರ್, ಸ್ವಾಮಿ, ಲಾಕೇಶ್, ಲೋಕೇಶ್, ಸುಪ್ರೀತ್, ದಾಗಿ ಚೇತನ್, ಅವಿನಾಶ್ ಗೌಡ, ಧನರಾಜ್, ಕೇಶವ, ಹನುಮಂತ, ಶರತ್, ಕಾರ್ತಿಕ್, ನಿಖಿಲ್, ನಟರಾಜ್, ಮಧು, ತಂಡಗಳ ಪ್ರಾಂಚೈಸಿಗಳು, ಆಟಗಾರರು ಹಾಗೂ ಕ್ರೀಡಾಪ್ರೇಮಿಗಳು ಹಾಜರಿದ್ದರು.
- - --17ಕೆಡಿವಿಜಿ31:
ಚನ್ನಗಿರಿಯ ಕಬ್ಬಳ ಗ್ರಾಮದಲ್ಲಿ ನಡೆದ ಕ್ರಿಕೆಟ್ ಹಬ್ಬದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಲಾಯಲ್ ಆರ್‌ಸಿಬಿಯನ್ಸ್ ತಂಡಕ್ಕೆ ಬಹುಮಾನ ವಿತರಿಸಲಾಯಿತು.