ಗದಗ: ಜಿಲ್ಲೆಯಲ್ಲಿ ಎಲ್‌ಪಿಜಿ(ಅಡುಗೆ ಅನಿಲ) ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗುವ ವಿಳಂಬ, ಹೆಚ್ಚುವರಿ ಹಣ ವಸೂಲಿ, ಬುಕ್ಕಿಂಗ್ ಮಾಡಿದ ಬಳಿಕ ಸಮಯಕ್ಕೆ ಸಿಲಿಂಡರ್ ದೊರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತವು ವಿಶೇಷ ದೂರವಾಣಿ ಸಂಪರ್ಕ ವ್ಯವಸ್ಥೆ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದ್ದಾರೆ.ನಗರದ ಜಿಲ್ಲಾಡಳಿತದಲ್ಲಿ ಇತ್ತೀಚೆಗೆ ನಡೆದ ಅಡುಗೆ ಅನಿಲ ಸಮರ್ಪಕ ಸರಬರಾಜು ಕುರಿತು ಗ್ಯಾಸ್ ವಿತರಣಾ ಏಜೆನ್ಸಿಗಳ ಮಾಲೀಕರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲ ಎಲ್‌ಪಿಜಿ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿ ತ್ವರಿತ ಪರಿಹಾರ ಪಡೆಯಬಹುದು. ಸರ್ಕಾರದ ನಿಯಮಾನುಸಾರ ಎಲ್‌ಪಿಜಿ ಸಿಲಿಂಡರ್ ಪೂರೈಕೆ ನಡೆಯಬೇಕು. ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಜಿಲ್ಲಾಡಳಿತದಿಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಜಿಲ್ಲೆಯ ವಿವಿಧ ತಾಲೂಕು ಹಾಗೂ ನಗರ ಪ್ರದೇಶಗಳ ಗ್ರಾಹಕರು ತಮ್ಮ ಸಮಸ್ಯೆಗಳ ಕುರಿತು ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಜಿಲ್ಲೆಯ ಉಪನಿರ್ದೇಶಕರ ಕಚೇರಿ ದೂ. 08372- 239443 ಆಗಿದೆ. ಗದಗ ನಗರ ಪ್ರದೇಶದ ಗ್ರಾಹಕರು ಸಹಾಯಕ ನಿರ್ದೇಶಕರು(ಆಹಾರ) ಅವರನ್ನು ಮೊ. 9481241607 ಅಥವಾ 9972956834 ಮೂಲಕ ಸಂಪರ್ಕಿಸಬಹುದು. ಗದಗ ಗ್ರಾಮೀಣ ಪ್ರದೇಶದ ಗ್ರಾಹಕರು ಆಹಾರ ನಿರೀಕ್ಷಕರು ಮೊ. 9916763033 ಅಥವಾ 9606301190ಕ್ಕೆ ಕರೆ ಮಾಡಿ ಅಹವಾಲು ಸಲ್ಲಿಸಬಹುದು.ರೋಣ ತಾಲೂಕಿನ ಗ್ರಾಹಕರು ಮೊ. 9916890282 ಅಥವಾ 6364381607 ಸಂಪರ್ಕಿಸಬಹುದು. ನರಗುಂದ ತಾಲೂಕಿನವರು ಮೊ. 9606281029ಕ್ಕೆ ಕರೆ ಮಾಡಬಹುದು. ಗಜೇಂದ್ರಗಡ ಪ್ರದೇಶದ ಗ್ರಾಹಕರು ಮೊ. 9916890282 ಅಥವಾ 8105201560, ಮುಂಡರಗಿ ತಾಲೂಕಿನವರು ಮೊ. 9980252047, ಶಿರಹಟ್ಟಿ ತಾಲೂಕಿನವರು ಮೊ. 7829960469 ಮೂಲಕ ಸಂಪರ್ಕಿಸಿ ಅಡುಗೆ ಅನಿಲ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಎಂದರು.ಸಭೆಯಲ್ಲಿ ಗ್ಯಾಸ್ ವಿತರಣಾ ಏಜೆನ್ಸಿಗಳ ಮಾಲೀಕರು, ಪ್ರತಿನಿಧಿಗಳು, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.