ಸಾರಾಂಶ
ಬಿಜೆಪಿ ಕೆ.ಆರ್. ನಗರ ಮಂಡಲ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮವು ಶನಿವಾರ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮೈಸೂರುಬಿಜೆಪಿ ಕೆ.ಆರ್. ನಗರ ಮಂಡಲ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮವು ಶನಿವಾರ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಪಕ್ಷದ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ಕೆ.ಆರ್. ನಗರ ತಾಲೂಕು ಕಾಮೇನಹಳ್ಳಿ ನಿವಾಸಿ, ಗ್ರಾಪಂ ಮಾಜಿ ಸದಸ್ಯ ಕೆ.ಎಂ. ಶಂಭುಲಿಂಗಪ್ಪ, ಅವರು ಕಾಂಗ್ರೆಸ್ ತ್ಯಜಿಸಿ, ಬಿಜೆಪಿ ಸೇರ್ಪಡೆಯಾದರು. ಕೆ.ಆರ್. ನಗರ ಮಂಡಲ ಅಧ್ಯಕ್ಷ ಹೊಸೂರು ಶ್ರೀ ಧರ್ಮ ಅವರು ಜಿಲ್ಲಾ ಕಚೇರಿ ಕಾರ್ಯಾಲಯ ಕಾರ್ಯದರ್ಶಿ ಪಾಪಣ್ಣ, ಕಚೇರಿ ಕಾರ್ಯಾಲಯದ ಕಾರ್ಯದರ್ಶಿ ಶಿವಕುಮಾರ್, ಪುರಸಭೆ ಸದಸ್ಯ ವೃಷಭೇಂದ್ರ, ಸಾಮಾಜಿಕ ಜಾಲತಾಣದ ಸಿ. ಪುರುಷೋತ್ತಮ್, ಜಿಲ್ಲಾ ಕಚೇರಿ ಸಿಬ್ಬಂದಿ ಸೋಮಣ್ಣ ಇದ್ದರು.