ಮೇಲುಕೋಟೆ: ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಾಡಿನ ಪ್ರಖ್ಯಾತ ಚೆಲುವನಾರಾಯಣಸ್ವಾಮಿ ದೇವಾಲಯವನ್ನು ಮುಚ್ಚಲಾಗಿತ್ತು. ದೇವಾಲಯದಲ್ಲಿ ಭಕ್ತರಿಗೆ ದರ್ಶನ ಮುಗಿದ ನಂತರ ಮಧ್ಯಾಹ್ನ 12-30ಕ್ಕೆ ಬಾಗಿಲು ಬಂದ್ ಮಾಡಲಾಗಿತ್ತು. ಕೇತುಗ್ರಸ್ಥ ಚಂದ್ರಗ್ರಹಣ ಮುಕ್ತಾಯವಾದ ನಂತರ ರಾತ್ರಿ 7.30ರ ವೇಳೆಗೆ ದೇವಾಲಯವನ್ನು ತೆರೆದು ಶುಚಿಗೊಳಿಸಲಾಯಿತು. ನಂತರ ಚೆಲುವನಾರಾಯಣಸ್ವಾಮಿಗೆ ಗ್ರಹಣದ ಶಾಂತಿಗಾಗಿ ಅಭಿಷೇಕ ನೆರವೇರಿಸಿ ಲೋಕ ಕಲ್ಯಾಣಾರ್ಥಕ್ಕಾಗಿ ಸಂಕಲ್ಪ ನೆರವೇರಿಸಲಾಯಿತು. ಅಭಿಷೇಕ, ಶುಚಿಯ ಕೈಂಕರ್ಯಗಳು ನಡೆದ ನಂತರ ದೇವಾಲಯದಲ್ಲಿ ಸಂಧ್ಯಾಕಾಲ ಮತ್ತು ರಾತ್ರಿಯ ಪೂಜೆ ನೆರವೇರಿತು. ಗ್ರಹಣದ ಹಿನ್ನೆಲೆಯಲ್ಲಿ ಭಕ್ತರಿಗೆ ಸಂಜೆ 4 ರಿಂದ 6ರವರೆಗೆ ಮೀಸಲಿದ್ದ ದರ್ಶನವನ್ನು ರದ್ದುಪಡಿಸಲಾಗಿತ್ತು . ಚಂದ್ರಗ್ರಹಣದ ಪರಿಣಾಮ ರಾಶಿಯಲ್ಲಿ ದೋಷವಿರುವ ಭಕ್ತರು ಜ್ಯೋತಿಷಿಗಳ ಸಲಹೆಯಂತೆ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ದೇವಾಲಯದ ಸ್ಥಾನೀಕ ಪರಿಚಾರಕ ಅರ್ಚಕ ಹಾಗೂ ಕೈಂಕರ್ಯಪರರು ಕಲ್ಯಾಣಿ ಹಾಗೂ ವಿವಿಧ ಕೊಳಗಳಲ್ಲಿ ಗ್ರಹಣದವೇಳೆ ಜಪ-ತಪಾದಿಗಳನ್ನು ಆಚರಿಸಿ ಮೋಕ್ಷ ಸ್ಥಾನಮಾಡಿ ಚೆಲುವನಾರಾಯಣಸ್ವಾಮಿಯ ಕೈಂಕರ್ಯದಲ್ಲಿ ಭಾಗಿಯಾದರು.
ಚಂದ್ರಗ್ರಹಣ ಚೆಲುವನಾರಾಯಣಸ್ವಾಮಿ ದೇಗುಲ ಬಂದ್
ಕೇತುಗ್ರಸ್ಥ ಚಂದ್ರಗ್ರಹಣ ಮುಕ್ತಾಯವಾದ ನಂತರ ರಾತ್ರಿ 7.30ರ ವೇಳೆಗೆ ದೇವಾಲಯವನ್ನು ತೆರೆದು ಶುಚಿಗೊಳಿಸಲಾಯಿತು. ನಂತರ ಚೆಲುವನಾರಾಯಣಸ್ವಾಮಿಗೆ ಗ್ರಹಣದ ಶಾಂತಿಗಾಗಿ ಅಭಿಷೇಕ ನೆರವೇರಿಸಿ ಲೋಕ ಕಲ್ಯಾಣಾರ್ಥಕ್ಕಾಗಿ ಸಂಕಲ್ಪ ನೆರವೇರಿಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.