ಎಂ. ಯೋಗೇಂದ್ರಗೆ 2 ಚಿನ್ನದ ಪದಕ

| Published : Jan 08 2024, 01:45 AM IST

ಸಾರಾಂಶ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್

ಫೋಟೋ- 7ಎಂವೈಎಸ್40

----

ಮೈಸೂರು

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಕಾರ್ಯದರ್ಶಿ ಎಂ. ಯೋಗೇಂದ್ರ ಅವರು 5000 ಮೀಟರ್ಸ್ ಮತ್ತು 10000 ಮೀಟರ್ ಓಟದಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದಾರೆ. ಇವರಿಗೆ ಪದಕಗಳನ್ನು ಅಥ್ಲೆಟಿಕ್ ಮುಖ್ಯಾಧಿಕಾರಿಗಳಾದ ಅಂಜನೇಯ, ಅಜೇಯ, ಆದಾಯ ತೆರಿಗೆ ಅಧಿಕಾರಿ ಮಹದೇವಯ್ಯ ವಿತರಿಸಿ ಶುಭ ಕೋರಿದರು. ಹಾಗೆಯೇ ಪೂನಾದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಎಂ. ಯೋಗೇಂದ್ರ ಆಯ್ಕೆಯಾಗಿದ್ದಾರೆ.