ಹೊಸಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ 2.11 ಲಕ್ಷ ರು. ಲಾಭ

| Published : Sep 24 2024, 01:56 AM IST

ಹೊಸಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ 2.11 ಲಕ್ಷ ರು. ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ಅನುದಾನ ಬಿಡುಗೆಯಾಗಿದ್ದು, ಶೀಘ್ರದಲ್ಲಿಯೆ ಕಟ್ಟಡ ಕಾಮಗಾರಿ ಆರಂಬಿ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರತಾಲೂಕಿನ ಹೊಸಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಪ್ರಸಕ್ತ ಆರ್ಥಿಕ ವರ್ಷದಲ್ಲಿ 2.11 ಲಕ್ಷ ಲಾಭ ಗಳಿಸಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಅಧ್ಯಕ್ಷೆ ಎಂ.ಜೆ. ಗೀತಾ ಮಂಜುಗೌಡ ಹೇಳಿದರು.ಸಂಘದ ಆವರಣದಲ್ಲಿ ಶನಿವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಾಲಿನಿಂದ ಮರಣ ನಿಧಿ ಆರಂಭಿಸಿ ಸಂಘದ ಸದಸ್ಯರಾಗಿದ್ದವರು ಆಕಸ್ಮಿಕವಾಗ ನಿಧನರಾದರೆ ಅವರ ಕುಟುಂಬಕ್ಕೆ 5 ಸಾವಿರ ನೀಡಲಾಗುತ್ತದೆ ಎಂದರು.ಇದರ ಜತೆಗೆ ಸಂಘದ ವತಿಯಿಂದ ಮೈಮುಲ್ ಸಹಕಾರದೊಂದಿಗೆ ಬಿಎಂಸಿ ಕೇಂದ್ರ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕೆ ಸರ್ವರೂ ಸಹಕಾರ ನೀಡಬೇಕೆಂದು ಕೋರಿದರು.ಸಂಘದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ಅನುದಾನ ಬಿಡುಗೆಯಾಗಿದ್ದು, ಶೀಘ್ರದಲ್ಲಿಯೆ ಕಟ್ಟಡ ಕಾಮಗಾರಿ ಆರಂಬಿಸಲಾಗುತ್ತದೆ ಎಂದು ತಿಳಿಸಿದ ಅವರು, ಸರ್ವ ಸದಸ್ಯರು ಅಭಿವೃದ್ದಿ ವಿಚಾರದಲ್ಲಿ ಆಡಳಿತ ಮಂಡಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದರು.ಗ್ರಾಮದ ಭೋವಿ ಸಮಾಜದ ಬಾಂಧವರು ನಿರ್ಮಾಣ ಮಾಡುತ್ತಿರುವ ದುರ್ಗಮ್ಮ ತಾಯಿ ದೇವಾಲಯದ ನಿರ್ಮಾಣ ಕಾಮಗಾರಿಗೆ ಅಧ್ಯಕ್ಷರು 25 ಸಾವಿರ ರು. ಗಳ ವೈಯಕ್ತಿಕ ಧನ ಸಹಾಯ ನೀಡಿದರು.ಸಂಘದ ಉಪಾಧ್ಯಕ್ಷೆ ಮೀನಾಕ್ಷಿ, ಮರಿಸಿದ್ದಮ್ಮ, ನಾಗಮ್ಮ, ಶಾಂತಮ್ಮ, ಪ್ರೇಮ, ಕೋಮಲಾಕ್ಷಿ, ಮೀನಾಕ್ಷಿ, ಸರೋಜ, ಕೋಮಲ, ಸಿಇಒ ಎ.ಎಚ್. ಮಮತ, ಸಿಬ್ಬಂದಿಗಳಾದ ನಾಗಮಣಿ, ಮಂಗಳ, ಮುಖಂಡರಾದ ಮಂಜುಗೌಡ, ಪ್ರಭಾಕರ, ಲೋಕೇಶ್, ವಿಷಕಂಠಪ್ಪ, ವಿಜಯ್ ಇದ್ದರು.