ಸಾರಾಂಶ
ಮೀಣ ಭಾಗದಲ್ಲಿ ಜಾನಪದ ಸಾಂಸ್ಕೃತಿಕ ಕಲಾ ತಂಡಗಳಿಗೆ ಹೆಚ್ಚು ಒತ್ತು ನೀಡಬೇಕು
ಕನ್ನಡಪ್ರಭ ವಾರ್ತೆ ಮಲ್ಕುಂಡಿಗ್ರಾಮೀಣ ಭಾಗದಲ್ಲಿ ಜಾನಪದ ಸಾಂಸ್ಕೃತಿಕ ಕಲಾ ತಂಡಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಗ್ರಾಪಂ ಸದಸ್ಯ ಶಂಕರ್ ಹೇಳಿದರು.ಎಂ. ಕೊಂಗಳ್ಳಿ ಗ್ರಾಮದಲ್ಲಿ ಜಿ.ಎಂ. ತಂದಾನಿ ಸಾಂಸ್ಕೃತಿಕ ಟ್ರಸ್ಟ್ ನಿಂದ ಮೈಸೂರಿನ ಗುರುರಾಜ್ ಅವರ ತಂಡದಿಂದ ಅಯೋಜಿಸಿದ್ದ ಜಾನಪದ ಮಹಾಕಾವ್ಯ ಶೀರ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕಲಾ ತಂಡಗಳು ಕಾರ್ಯನಿರ್ವಾಹಿಸುತ್ತಿದ್ದು, ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಕಲಾವಿದರಿದ್ದಾರೆ, ಅವರಿಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಕಲಾವಿದರಿಗೆ ಹೆಚ್ಚಿನ ಬಲ ಸಿಗುವಂತಾಗುತ್ತದೆ ಎಂದು ತಿಳಿಸಿದರು.ಎಂ.ಎಸ್. ಡೆವೆಲಪರಸ್ ಎಂ. ಮಂಜು, ಕನಕ ನೌಕರರ ಸಂಘದ ಅಧ್ಯಕ್ಷ ಜವರೇಗೌಡ, ಬ್ರಾಹ್ಮಣ ಪರಿವಾರದ ಅಧ್ಯಕ್ಷ ಗಣೇಶ್ ರಾವ್, ಕಾಂಗ್ರೆಸ್ ನ ತಗಡೂರು ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಗ್ರಾಮದ ಮುಖಂಡ ಸುರೇಶ್ ಇದ್ದರು.