ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಪುರಸಭೆಗೆ ಅಧ್ಯಕ್ಷರಾಗಿದ್ದ ಯಶೋಧಮ್ಮ ಅವರ ಅನಾರೋಗ್ಯದ ಹಿನ್ನೆಲೆ ಉಪಾಧ್ಯಕ್ಷರಾಗಿದ್ದ ಎಂ.ಎಲ್.ದಿನೇಶ್ ಅವರು ಪ್ರಭಾರ ಅಧ್ಯಕ್ಷರಾಗಿ ನೇಮಕಗೊಂಡರು.ಅಧ್ಯಕ್ಷೆ ಯಶೋಧಮ್ಮ ಅನಾರೋಗ್ಯದ ಕಾರಣದಿಂದ ಪುರಸಭೆ ಕಾರ್ಯ ಚಟುವಟಿಕೆಗಳ ವಿಳಂಬ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಪಟ್ಟಣ ಪುರಸಭೆಯಲ್ಲಿ ವಿವಿಧ ಕೆಲಸ ಕಾರ್ಯಚಟುವಟಿಕೆಗಳಿಗೆ ಹಿನ್ನೆಡೆಯಾಗುವ ದೃಷ್ಟಿಯಿಂದ ಅವುಗಳನ್ನು ಮುಂದುವರೆಸಿಕೊಂಡು ಹೋಗಲು ಉಪಾಧ್ಯಕ್ಷ ಸ್ಥಾನದಲ್ಲಿದ್ದ ಎಂ.ಎಲ್.ದಿನೇಶ್ ಅವರನ್ನು ಪ್ರಭಾರಿಯಾಗಿ ಮಾಡಲಾಗಿದೆ ಎನ್ನಲಾಗಿದೆ. ನೂತನ ಪ್ರಭಾರ ಅಧ್ಯಕ್ಷ ಎಂ.ಎಲ್. ದಿನೇಶ್ ಅವರನ್ನ ಪುರಸಭಾ ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದಿಸಿದರು.
ರೋಟರಿ ಸಂಸ್ಥೆಯಿಂದ ಸರ್ಕಾರಿ ಶಾಲೆಗೆ ವಿವಿಧ ಕೊಡುಗೆಮಂಡ್ಯ: ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆಯವರು ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ (ವಾಟರ್ ಫಿಲ್ಟರ್), 210 ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ 25 ಡೆಸ್ಕ್, 5 ಕಂಪ್ಯೂಟರ್ ಗಳನ್ನು ವಿತರಿಸಿದರು. ಗ್ರಂಥಾಲಯ ಕೊಠಡಿ ನಿರ್ಮಾಣಕ್ಕೆ ಧನ ಸಹಾಯ ಮಾಡಿದರು.
ಈ ವೇಳೆ ದೊಡ್ಡ ಮುದ್ದೇಗೌಡರು ಸುಸಜ್ಜಿತ ಶೌಚಾಗೃಹ ನಿರ್ಮಾಣ ಸೇರಿದಂತೆ ಮಕ್ಕಳ ಆಟದ ಸಾಮಗ್ರಿಗಳು, ಜೋಕಾಲಿ, ಜಾರುಗುಪ್ಪೆ ಜೊತೆಗೆ ಸಿಸಿ ಕ್ಯಾಮರಾ ಅಳವಡಿಕೆಗೆ ನೆರವು ನೀಡಿದರು. ಗ್ರಾಪಂ ವತಿಯಿಂದ ಕಾಂಪೌಂಡ್ ನಿರ್ಮಾಣಕ್ಕೆ ಧನ ಸಹಾಯ ನೀಡಲಾಯಿತು.ಈ ವೇಳೆ ಗ್ರಾಪಂ ಅಧ್ಯಕ್ಷ ಶಿವಶಂಕರ್, ಸದಸ್ಯರಾದ ರಮೇಶ್, ಶ್ರೀಧರ್, ಲಯನ್ಸ್ ಚಂದ್ರಮೌಳಿ, ಮುಖಂಡರಾದ ಕೆ.ಟಿ ವೀರಪ್ಪ, ಜಯರಾಮ್, ಗೀತಾ, ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಬೂದನೂರು ರಘು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ದೇಗುಲದ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕರಿಂದ ಸಹಾಯಧನಪಾಂಡವಪುರ:
ಪಟ್ಟಣದ ಹಾರೋಹಳ್ಳಿ ಮಾರಿಯಮ್ಮನ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಧನ ಸಹಾಯ ಮಾಡಿದರು.ಗ್ರಾಮದ ಶ್ರೀಲಕ್ಷ್ಮಿನಾರಾಯಣಸ್ವಾಮಿ ಕಲ್ಯಾಣ ಮಂಟಪ ಸಮಿತಿ ಅಧ್ಯಕ್ಷ ಎಚ್.ಎನ್.ರಮೇಶ್ ಅವರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚೆಕ್ ಹಸ್ತಾಂತರ ಮಾಡಿ ಮಾರಿಯಮ್ಮನ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ನೆರವು ನೀಡಿದರು.
ಈ ವೇಳೆ ಶ್ರೀಲಕ್ಷ್ಮಿ ನಾರಾಯಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗರಡಿ ಮನೆ ಚಂದ್ರಶೇಖರ್, ಯಜಮಾನರಾದ ಲೋಕೇಶ್, ಲಕ್ಷ್ಮೇಗೌಡ, ಪುರಸಭೆ ಸದಸ್ಯರಾದ ಪಟೇಲ್ ರಮೇಶ್, ಲಕ್ಷ್ಮೇಗೌಡ, ಗ್ರಾಮದ ಮುಖಂಡರಾದ ಪರಮೇಶ್, ರಾಮಕೃಷ್ಣ, ಲಕ್ಷ್ಮೇಗೌಡ, ಬಸವರಾಜು, ವಿಷಕಂಠ, ಬಾಲ್ಕ, ಡಿ.ರಮೇಶ್, ಪವನ್, ರಘು, ಕೊನಾರಿ ಮಂಜು, ಸುಬ್ಬ ಹಾಗೂ ಗ್ರಾಮಸ್ಥರು, ಯುವಕರು ಹಾಜರಿದ್ದರು.