ಗಿನ್ನಿಸ್ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ನಲ್ಲಿ ಎಂ.ಎನ್‌. ಯದುಗಿರಿ ಗೋಪಾಲನ್‌

| Published : Apr 24 2025, 11:47 PM IST

ಗಿನ್ನಿಸ್ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ನಲ್ಲಿ ಎಂ.ಎನ್‌. ಯದುಗಿರಿ ಗೋಪಾಲನ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಂ.ಎನ್‌. ಯದುಗಿರಿ ಗೋಪಾಲನ್‌ ಅವರು ಸಂಗೀತ ಮತ್ತು ನಾಟ್ಯ ಕಲೆಯಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ, ಇವರು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂ ಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಎನ್‌. ಯದುಗಿರಿ ಗೋಪಾಲನ್‌ ಅವರು ವಿಶ್ವ ಗಿನ್ನಿಸ್‌ ರೆಕಾರ್ಡ್‌ ಪ್ರಮಾಣಪತ್ರ ಸ್ವೀಕರಿಸಿದರು. ಮೈಸೂರಿನ ಜಾನಕಮ್ಮ ಮತ್ತು ಕೃಷ್ಣಯ್ಯಂಗಾರ್‌ ಅವರ ಪುತ್ರಿ 75 ವರ್ಷ ವಯಸ್ಸಿನ ನೃತ್ಯಪಟು ಎಂ.ಎನ್‌. ಯದುಗಿರಿ ಗೋಪಾಲನ್‌ ಅವರು ಸುಮಾರು 25 ವರ್ಷಗಳಿಂದಲೂ ನೃತ್ಯಪಟುವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಹಲವಾರು ವಿದ್ಯಾರ್ಥಿಗಳಿಗೆ ನೃತ್ಯಗಳ ತರಬೇತಿ ನೀಡುತ್ತಿದ್ದಾರೆ. ಇವರ ಶ್ಲಾಘನೆ ಗುರುತಿಸಿ ವಿಶ್ವ ಗಿನ್ನಿಸ್‌ ದಾಖಲೆಯಲ್ಲಿ ಇವರು ಹೆಸರು ಸೇರ್ಪಡೆಯಾಗಿದೆ. ಎಂ.ಎನ್‌. ಯದುಗಿರಿ ಗೋಪಾಲನ್‌ ಅವರು ಸಂಗೀತ ಮತ್ತು ನಾಟ್ಯ ಕಲೆಯಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ, ಇವರು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂ ಡಿದ್ದಾರೆ.