ಮಂಡ್ಯ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷರಾಗಿ ಎಂ.ಪ್ರಕಾಶ್ ಆಯ್ಕೆ

| Published : May 17 2024, 12:30 AM IST

ಮಂಡ್ಯ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷರಾಗಿ ಎಂ.ಪ್ರಕಾಶ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅರವಿಂದ್ ಚಿಕ್ಕಬಳ್ಳಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದಿನ ಅವಧಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ಎಂ.ದೊಡ್ಡ ಕೊತ್ತಗೆರೆ ಅವರನ್ನು ಬಿಟ್ಟು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ರವಿ ಅವರು ಅವಿರೋಧವಾಗಿ ಆಯ್ಕೆ ಮಾಡದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಾಥಮಿಕ ಸಹಕಾರ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಉಪಾಧ್ಯಕ್ಷರಾಗಿ ಪ್ರಕಾಶ್ ಎಂ.ದೊಡ್ಡ ಕೊತ್ತಗೆರೆ ಅವಿರೋಧವಾಗಿ ಆಯ್ಕೆಗೊಂಡರು.

ಅರವಿಂದ್ ಚಿಕ್ಕಬಳ್ಳಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದಿನ ಅವಧಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ಎಂ.ದೊಡ್ಡ ಕೊತ್ತಗೆರೆ ಅವರನ್ನು ಬಿಟ್ಟು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ರವಿ ಅವರು ಅವಿರೋಧವಾಗಿ ಆಯ್ಕೆ ಮಾಡದರು.

ನಂತರ ಆಡಳಿತ ಮಂಡಳಿಯಿಂದ ಪ್ರಕಾಶ್ ಎಂ.ದೊಡ್ಡ ಕೊತ್ತಗೆರೆ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ನಂತರ ಮಾತನಾಡಿ, ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಎಂದರು. ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷೆ ಸುನಂದಾ ಸಿದ್ದರಾಮು, ನಿರ್ದೇಶಕರಾದ ಬೇಲೂರು ಸೋಮಶೇಖರ್ ಅರವಿಂದ್ ಚಿಕ್ಕಬಳ್ಳಿ, ಎಚ್.ಸಿ.ಶಿವಲಿಂಗೇಗೌಡ, ಹೊಸಹಳ್ಳಿ ಬಿ ಎಲ್ ಬೋರೇಗೌಡ, ಟಿ.ಬಿ.ಶಿವಲಿಂಗೇಗೌಡ, ಮರೀಗೌಡ, ಎಂ.ಯೋಗೇಶ್, ಬಿ.ಕೆ.ರಾಮೇಗೌಡ, ಚಿಕ್ಕ ಬೆಟ್ಟಯ್ಯ, ಬಿ.ಸವಿತಾ, ಸರಸ್ವತಿ, ಶಿವಾರ ನಂಜುಂಡ, ಎಂ.ಕೃಷ್ಣೇಗೌಡ, ಹಾಜರಿದ್ದರು.

ಅನೆಗೊಳ ಡೇರಿ ಉಪಾಧ್ಯಕ್ಷೆಯಾಗಿ ರುಕ್ಮಿಣಿ ಆಯ್ಕೆ

ಕಿಕ್ಕೇರಿ:ಆನೆಗೊಳ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಉಪಾಧ್ಯಕ್ಷೆಯಾಗಿ ರುಕ್ಮಿಣಿ ದೇವರಾಜು ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಉಪಾಧ್ಯಕ್ಷ ಮಂಜುನಾಥ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚುನಾವಣೆ ನಡೆದು ರುಕ್ಮಿಣಿ ದೇವರಾಜು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿ ಭರತ್‌ಕುಮಾರ್ ಘೋಷಿಸಿದರು.ಚಾಮುಂಡೇಶ್ವರಿ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಎ.ಆರ್.ಮಂಜುನಾಥ್ ಮಾತನಾಡಿ, ಹೈನುಗಾರಿಕೆ ಗ್ರಾಮೀಣ ಜನರಿಗೆ ಆಸರೆಯಾಗಿದೆ.ಸಮಗ್ರಅಭಿವೃದ್ಧಿಗೆ ನಿರ್ದೇಶಕರೊಂದಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.

ನೂತನ ಉಪಾಧ್ಯಕ್ಷರಿಗೆ ಪುಷ್ಪಮಾಲೆ ಹಾಕಿ, ಸಿಹಿ ತಿನಿಸಿ, ಪಟಾಕಿ ಹೊಡೆದು ಅಭಿಮಾನಿಗಳು ಸಂಭ್ರಮಿಸಿದರು. ಡೇರಿ ಅಧ್ಯಕ್ಷ ರಕ್ಷಿತ್, ನಿರ್ದೇಶಕರಾದ ನಾಗಣ್ಣ, ನಾಗರಾಜು, ಮಂಜುನಾಥ್, ಜಗದೀಶ್, ಚನ್ನಕೇಶವ, ಸಂತೋಷ, ಪಟ್ಟರಾಜು, ಕೆಂಗಮ್ಮಗ್ರಾಮ ಮುಖಂಡರು ಹಾಜರಿದ್ದರು.