ಸಾರಾಂಶ
12ನೇ ಶತಮಾನದಲ್ಲಿ ತಾಂಡವಾಡುತ್ತಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದ್ದ ಬಸವಾದಿ ಶಿವರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಮೊಳಕಾಲ್ಮುರು: 12ನೇ ಶತಮಾನದಲ್ಲಿ ತಾಂಡವಾಡುತ್ತಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದ್ದ ಬಸವಾದಿ ಶಿವರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಜಗದೀಶ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.12ನೇ ಶತಮಾನದಲ್ಲಿ ತಾಂಡವಾಡುತ್ತಿದ್ದ ಅಸಮಾನತೆಯನ್ನು ಬಲವಾಗಿ ವಿರೋಧಿಸಿದ್ದ ಮಡಿವಾಳ ಮಾಚಿದೇವರು ಜಾತಿಯತೆಯನ್ನು ಧಿಕ್ಕರಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಮೂಢ ನಂಬಿಕೆ ಕಂದಚಾರಗಳನ್ನು ದೂರ ಸರಿಸಿ ಎಲ್ಲರೂ ಸಮಾನರು ಎನ್ನುವುದನ್ನು ಸಾರಿದರು. ಬಸವಾದಿ ಶರಣರ ಹಾದಿಯಲ್ಲಿ ಸಾಗಿದ್ದ ಮಾಚಿದೇವರು ಸಮಾಜವನ್ನು ಜಾಗೃತರನ್ನಾಗಿಸುವ ಕಾರ್ಯ ಮಾಡಿದರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅರಿತುಕೊಂಡು ಬಾಳಬೇಕೆಂದು ತಿಳಿಸಿದರು.
ಶಿರೆಸ್ತೆದಾರ್ 7 ಕೋಟಿ ರು. ಮಡಿವಾಳ ಮಾಚಿದೇವ ಸಂಘದ ಗೌರವ ಅಧ್ಯಕ್ಷ ಬಸವರಾಜ, ಅಧ್ಯಕ್ಷ ನಾಗರಾಜ, ಉಪಾಧ್ಯಕ್ಷೆ ಸರೋಜಮ್ಮ, ರಾಂಪುರ ನಾಗರಾಜ, ನಾಗಸಮುದ್ರ ನಿಂಗರಾಜ ಅಂಜಿನಪ್ಪ, ಕೃಷ್ಣಪ್ಪ, ರಾಜಣ್ನ, ತಿಪ್ಪೇಸ್ವಾಮಿ, ವೆಂಕಟೇಶ, ಕರಿಬಸಪ್ಪ, ತಿಪ್ಪೇಸ್ವಾಮಿ, ತಿಮ್ಮಣ್ಣ, ಜನಸಂಸ್ಥಾನ ಸಂಸ್ಥೆಯ ವಿರುಪಾಕ್ಷಪ್ಪ ಇದ್ದರು.