ಸಾರಾಂಶ
ಹುಚ್ಚುನಾಯಿ ಕಡಿತದ ಪರಿಣಾಮ ಸುಮಾರು 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿ ಹುಚ್ಚುನಾಯಿಯೊಂದು ಸಂಜೆ ಸಂಚಾರ ಮಾಡುತ್ತಿರುವ ಜನರಿಗೆ ಕೈ, ಕಾಲು, ಮುಖ ನೋಡದೇ ಎಲ್ಲೆಂದರಲ್ಲಿ ಕಚ್ಚಿದೆ. ಸಾರ್ವಜನಿಕರು ನಾಯಿಯನ್ನು ಬೆನ್ನಟ್ಟಿ ಕೊಂದು ಹಾಕಿದ್ದಾರೆ. ಈ ಮೂಲಕ ಇನ್ನಷ್ಟು ಜನರಿಗೆ ನಾಯಿ ಕಡಿಯುವುದನ್ನು ತಪ್ಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣದಲ್ಲಿ ಹುಚ್ಚುನಾಯಿ ಕಡಿತದ ಪರಿಣಾಮ ಸುಮಾರು 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿ ಹುಚ್ಚುನಾಯಿಯೊಂದು ಸಂಜೆ ಸಂಚಾರ ಮಾಡುತ್ತಿರುವ ಜನರಿಗೆ ಕೈ, ಕಾಲು, ಮುಖ ನೋಡದೇ ಎಲ್ಲೆಂದರಲ್ಲಿ ಕಚ್ಚಿದೆ. ಸಾರ್ವಜನಿಕರು ನಾಯಿಯನ್ನು ಬೆನ್ನಟ್ಟಿ ಕೊಂದು ಹಾಕಿದ್ದಾರೆ. ಈ ಮೂಲಕ ಇನ್ನಷ್ಟು ಜನರಿಗೆ ನಾಯಿ ಕಡಿಯುವುದನ್ನು ತಪ್ಪಿಸಿದ್ದಾರೆ.ನಿಯಂತ್ರಿಸಿ:ಪಟ್ಟಣದಲ್ಲಿ ಬೀದಿ ನಾಯಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವುಗಳ ನಿಯಂತ್ರಿಸದೇ ಇರುವುದು ಇಂತಹ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಹುಚ್ಚು ನಾಯಿಯ ಕಡಿತಕ್ಕೆ ಒಳಗಾದ ಗಾಯಾಳುಗಳ ಪಾಲಕರು ಸಂಬಂದಿಕರು ಈ ಘಟನೆಯಿಂದ ವಿಚಲಿತರಾಗಿದ್ದು, ಹುಚ್ಚು ನಾಯಿ ಕಡಿತದಿಂದ ಆಗಬಹುದಾದ ಪರಿಣಾಮ ತಡೆಗಟ್ಟಲು ವೈದ್ಯರು ಹೆಚ್ವಿನ ವಹಿಸಿ ಚಿಕಿತ್ಸೆ ನೀಡಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.14ಕೆಎಸಟಿ3ಹುಚ್ಚು ನಾಯಿಯ ಕಡಿತಕ್ಕೊಳಗಾದ ಬಾಲಕ