ಮಾದಹಳ್ಳಿ ಡೇರಿಗೆ ಜೆಡಿಎಸ್ ಬೆಂಬಲಿತರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆ

| Published : May 28 2024, 01:04 AM IST

ಮಾದಹಳ್ಳಿ ಡೇರಿಗೆ ಜೆಡಿಎಸ್ ಬೆಂಬಲಿತರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಹಲವು ವರ್ಷಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿ ಎಲ್ಲರ ಸಹಕಾರದೊಂದಿಗೆ ದುಡಿಯುತ್ತಿದ್ದೇವೆ. ಸದಸ್ಯರಿಗೆ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಮಾದರಿ ಸಹಕಾರ ಸಂಘವನ್ನಾಗಿ ರೂಪಿಸಲು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರರು ಶ್ರಮಿಸಲಿ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಮಾದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಂ.ವಿ. ಗೀತಾ ಬಸವರಾಜು ಹಾಗೂ ಉಪಾಧ್ಯಕ್ಷರಾಗಿ ಚಿಕ್ಕಣ್ಣ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ಸೋಮವಾರ ನಿಗದಿಯಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಎಂ.ವಿ.ಗೀತಾ ಬಸವರಾಜು ಹಾಗೂ ಚಿಕ್ಕಣ್ಣ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಜಿ.ರಾಮಕೃಷ್ಣ ಘೋಷಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಗ್ರಾಪಂ ಮಾಜಿ ಸದಸ್ಯ ಎಂ.ಜಿ.ರಮೇಶ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿ ಎಲ್ಲರ ಸಹಕಾರದೊಂದಿಗೆ ದುಡಿಯುತ್ತಿದ್ದೇವೆ. ಸದಸ್ಯರಿಗೆ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಮಾದರಿ ಸಹಕಾರ ಸಂಘವನ್ನಾಗಿ ರೂಪಿಸಲು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರರು ಶ್ರಮಿಸಲಿ ಎಂದರು.

ತಳಮಟ್ಟದಿಂದ ಜೆಡಿಎಸ್ ಪಕ್ಷವನ್ನು ಸಂಘಟಿಸಿ ಮುಂಬರುವ ಜಿಲ್ಲಾ ಮತ್ತು ತಾಪಂ ಚುನಾವಣೆಗೆ ಸಿದ್ದತೆ ನಡೆಸಲಾಗುತ್ತಿದೆ ಎಂದರು.

ಅಧ್ಯಕ್ಷೆ ಎಂ.ವಿ.ಗೀತಾ ಮಾತನಾಡಿ, ಎಲ್ಲ ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದು, ಗ್ರಾಮದ ಮುಖಂಡರು ಹಾಗೂ ಸದಸ್ಯರ ಸಲಹೆ ಪಡೆದು ಸಂಘದ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸಲು ಮುಂದಾಗುತ್ತೇವೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ಹೊಸ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗುವುದು ಎಂದರು.

ಈ ವೇಳೆ ನಿರ್ದೇಶಕರಾದ ರಾಮಕೃಷ್ಣ, ಎಂ.ಪಿ.ಕೃಷ್ಣೇಗೌಡ, ಎಂ.ಎಸ್.ಪ್ರಸನ್ನ, ಎಂ.ಆರ್.ಅಭಿಲಾಷ್ ಗೌಡ, ಎಚ್.ವಿ.ವೆಂಕಟೇಶ್, ಪವಿತ್ರಾ, ಶೀಲಾ, ಟಿ.ಎಸ್.ರಂಜಿತ್ ಕುಮಾರ್, ಸಿಇಒ ಎಂ.ವಿ.ಕೆಂಪೇಗೌಡ, ಮುಖಂಡರಾದ ಪವನ್, ಅಶ್ವಥ್ ಸ್ವಾಮಿ, ಉಮೇಶ್, ಬಸವರಾಜು ಇದ್ದರು.