ಮಾದಯ್ಯನವರ ಕಾಯಕ ನಿಷ್ಠೆ ಸಮಾಜಕ್ಕೆ ದಾರಿದೀಪ: ಕಾಳಹಸ್ತೇಂದ್ರ ಸ್ವಾಮೀಜಿ

| Published : Oct 01 2024, 01:19 AM IST

ಮಾದಯ್ಯನವರ ಕಾಯಕ ನಿಷ್ಠೆ ಸಮಾಜಕ್ಕೆ ದಾರಿದೀಪ: ಕಾಳಹಸ್ತೇಂದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

Madaiya's Kayaka Nishte is a beacon for society: Kalahastendra Swamiji

-ಹೂಗಾರ ಮಾದಯ್ಯನವರ ಜಯಂತಿ ಪ್ರಯುಕ್ತ ಮಾದಯ್ಯನವರ ಭಾವಚಿತ್ರದ ಮೆರವಣಿಗೆ

----

ಕನ್ನಡಪ್ರಭ ವಾರ್ತೆ ಶಹಾಪುರ

ಕಾಯಕ ಜೀವಿಯಾಗಿದ್ದ ಶರಣ ಮಾದಯ್ಯ ಯಾರ ಮನಸ್ಸಿಗೂ ನೋವು ಮಾಡಿದವರಲ್ಲ. ಸಮಾಜಕ್ಕೆ ಅವರು ನೀಡಿದ ಸಂದೇಶಗಳು ಸದಾ ಸ್ಮರಣೀಯವಾಗಿದ್ದು, ಕಾಯಕದಲ್ಲಿ ಮುಕ್ತಿ ಮಾರ್ಗವಿದೆ ಎಂದು ಜಗತ್ತಿಗೆ ಸಾರಿದ ಶರಣ. ಅವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯ ಮಾಡಬೇಕು ಹಾಗೂ ಮಾದಯ್ಯನವರ ಕುರಿತು ಹೆಚ್ಚು ಸಂಶೋಧನೆ ಅಗತ್ಯವಿದೆ ಎಂದು ಏಕದಂಡಗಿ ಮಠದ ಪೀಠಾಧಿಪತಿ ಕಾಳಹಸ್ತೇಂದ್ರ ಮಹಾಸ್ವಾಮೀಜಿ ತಿಳಿಸಿದರು.

ನಗರದಲ್ಲಿ ತಾಲೂಕು ಹಾಗೂ ಜಿಲ್ಲಾ ಹೂಗಾರ ಸಮಾಜದ ವತಿಯಿಂದ ಆಯೋಜಿಸಿದ್ದ ಶರಣ ಹೂಗಾರ ಮಾದಯ್ಯನವರ ಜಯಂತಿ ಅಂಗವಾಗಿ ಮಾದಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ಮಾಡಲಾಯಿತು. ಬಳಿಕ ಇಲ್ಲಿನ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ ಹೂಗಾರ ಮಾದಯ್ಯ ದಂಪತಿ ವಿಶ್ವಗುರು ಬಸವಣ್ಣನವರ ನಿತ್ಯ ಇಷ್ಟಲಿಂಗ ಪೂಜೆಗೆ ಪತ್ರೆ ಹಾಗೂ ಪುಷ್ಪಗಳನ್ನು ತರುತ್ತಿದ್ದರು. ನಿತ್ಯ ಕಾಯಕ ಮಾಡುವಾಗ ಸಮಾನತೆಯ ವಚನಗಳನ್ನು ಓದುವುದು, ಕಾಯಕ, ದಾಸೋಹ, ಲಿಂಗಾಂಗಯೋಗ, ಪ್ರಸಾದ ಮತ್ತು ಧರ್ಮಗಳ ಬಗ್ಗೆ ಚಿಂತನೆ ನಡೆಸುತ್ತಿದ್ದರು. 12ನೇ ಶತಮಾನದಲ್ಲಿ ಶರಣರು ಸೋಮಾರಿಗಳಾಗಿರದೆ ಕಾಯಕದಲ್ಲಿ ನಿರತರಾಗಿ ಕಾಯಕದ ಮಹತ್ವ, ನಿಷ್ಠೆ, ಪ್ರಮಾಣಿಕತೆ ಹಾಗೂ ತತ್ವಾದರ್ಶಗಳೊಂದಿಗೆ ಬದುಕಿ ತೋರಿಸಿದ್ದಾರೆ. ಅವರ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ಖ್ಯಾತ ವೈದ್ಯ ಡಾ. ಚಂದ್ರಶೇಖರ್ ಸುಬೇದಾರ್ ಮಾತಾನಾಡಿ, ಸಮಾಜದ ಎಲ್ಲಾ ಸಮುದಾಯದೊಂದಿಗೆ ಪ್ರೀತಿ, ವಿಶ್ವಾಸ ಅನನ್ಯತೆಯಿಂದ ಹೂಗಾರ ಸಮಾಜ ವಿರುವುದು ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಸಾಧಕರಿಗೆ ಹಾಗೂ ಎಸ್.ಎಸ್. ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಕೀರ್ತಿ ತಂದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಗುಂಬಳಾಪುರ ಮಠದ ಪೀಠಾಧಿಪತಿ ಸಿದ್ದೇಶ್ವರ ಮಹಾ ಸ್ವಾಮೀಜಿ, ನದಿ ಹೆಣ್ಣೂರು ಮಠದ ಪೀಠಾಧಿಪತಿ ಗುರುದೇವ ಮಹಾ ಸ್ವಾಮೀಜಿ, ಚರಬಸ್ವೇಶ್ವರ ಗದ್ದುಗೆಯ ಪೀಠಾಧಿಪತಿ ವೇದ ಮೂರ್ತಿ ಬಸವಯ್ಯ ಶರಣರು ಉಂಡೆಕಲ್ ಬಸವಣ್ಣ ಗುಡಿಯ ಪಟ್ಟದ ಪೂಜಾರಿ ಡಾ. ಚನ್ನಬಸಪ್ಪ ಹೂಗಾರ ಸಾನಿಧ್ಯ ವಹಿಸಿದ್ದರು.

ಸಮಾಜದ ಜಿಲ್ಲಾಧ್ಯಕ್ಷ ಭೀಮಣ್ಣ ಹೊತಪೇಟ, ತಾಲೂಕಾಧ್ಯಕ್ಷ ನಾಗರಾಜ್ ಹೂಗಾರ, ಗೌರವಾಧ್ಯಕ್ಷ ಶಿವರಾಜ ಹೂಗಾರ, ಕಾರ್ಯದರ್ಶಿ ಶಾಂತಪ್ಪ ಹೂಗಾರ, ನಗರ ಆಶ್ರಯ ಸಮಿತಿ ಮಾಜಿ ಸದಸ್ಯ ಅಮೃತ ಹೂಗಾರ ಸೇರಿದಂತೆ ಇತರರಿದ್ದರು.

-----

30ವೈಡಿಆರ್7: ಶಹಾಪುರ ನಗರದಲ್ಲಿ ತಾಲೂಕು ಹೂಗಾರ ಸಮಾಜದ ವತಿಯಿಂದ ನಡೆದ ಹೂಗಾರ ಮಾದಯ್ಯನವರ ಜಯಂತಿ ಅಂಗವಾಗಿ ಮಾದಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.