ಜನಮನ ಗೆದ್ದ ಮದಾಲಸಿ ವಾದನ

| Published : Jan 02 2024, 02:15 AM IST

ಸಾರಾಂಶ

ರಬಕವಿ-ಬನಹಟ್ಟಿ: ನಾವಲಗಿ ಗ್ರಾಮದ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ಸಮಾರಂಭದಲ್ಲಿ ಪಲ್ಲಕ್ಕಿ ಉತ್ಸವದ ಬಳಿಕ ವಿವಿಧ ಕಲಾ ತಂಡಗಳು ಮಧ್ಯಾಹ್ನ 2ರಿಂದ ರಾತ್ರಿ 9 ರವರೆಗೆ ತಮ್ಮ ಕಲಾನೈಪುಣ್ಯತೆ ಪ್ರದರ್ಶಿಸಿ ನೆರೆದ ಸಹಸ್ರಾರು ಕಲಾರಸಿಕರ ಮನತಣಿಸಿದವು.

ರಬಕವಿ-ಬನಹಟ್ಟಿ: ನಾವಲಗಿ ಗ್ರಾಮದ ಶ್ರೀಮಾರುತೇಶ್ವರ ಕಾರ್ತಿಕೋತ್ಸವ ಸಮಾರಂಭದಲ್ಲಿ ಪಲ್ಲಕ್ಕಿ ಉತ್ಸವದ ಬಳಿಕ ವಿವಿಧ ಕಲಾ ತಂಡಗಳು ಮಧ್ಯಾಹ್ನ 2ರಿಂದ ರಾತ್ರಿ 9 ರವರೆಗೆ ತಮ್ಮ ಕಲಾನೈಪುಣ್ಯತೆ ಪ್ರದರ್ಶಿಸಿ ನೆರೆದ ಸಹಸ್ರಾರು ಕಲಾರಸಿಕರ ಮನತಣಿಸಿದವು.

ದೇವಸ್ಥಾನದ ಆವರಣದಲ್ಲಿ ಜರುಗಿದ ಕಲಾ ತಂಡಗಳ ಮದಾಲಸಿ ಕಾರ್ಯಕ್ರಮ ಜರುಗಿತು. ಬಾಳು ಹೂಗಾರ ನೇತೃತ್ವದ ಸಂಬಾಳ ವಾದನ ತಂಡ ಸೇರಿದಂತೆ ಅನೇಕ ಕಲಾಮೇಳಗಳ ಪ್ರದರ್ಶನಕ್ಕೆ ಜನರು ಮನಸೋತರು. ಮದಾಲಸಿ ಕಾರ್ಯಕ್ರಮ ಕಣ್ಮನ ತುಂಬಿಕೊಳ್ಳಲು ಜಿಲ್ಲೆ ಹಾಗೂ ತಾಲೂಕಿನ ಸುತ್ತಲಿನ ಕಲಾಸಕ್ತರು ಆಗಮಿಸಿದ್ದರು.