ಸಾರಾಂಶ
ಕನ್ನಡಪ್ರಭ ವಾರ್ತೆ, ಚನ್ನಗಿರಿ
ಚನ್ನಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಧವೀಧರರು ಮತ್ತು ಶಿಕ್ಷಕರು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿದ್ದು, ಈ ಕ್ಷೇತ್ರದಿಂದ ಅಧಿಕವಾದ ಮತಗಳು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ದೊರೆಯುವುದು ಎಂದು ತಾಲೂಕು ಬಿಜೆಪಿ ಪಕ್ಷದ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಹೇಳಿದರು.ಅವರು ಮಂಗಳವಾರ ಸಂಜೆ ಇಲ್ಲಿನ ಆರ್.ಹೆಚ್.ಎಂ.ಸ ಭಾಂಗಣದಲ್ಲಿ ನೈಋತ್ಯ ವಿಧಾನ ಪರಿಷತ್ ಚುನಾವಣೆಯ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ 582ಜನ ಶಿಕ್ಷಕ ಮತದಾರರಿದ್ದರೆ, 3342 ಜನ ಪಧವೀಧರ ಮತದಾರರುಗಳಿದ್ದು, ಇವರಲ್ಲಿ ಹೆಚ್ಚು ಭಾಗ ಮತದಾರರು ಬಿಜೆಪಿ ಪಕ್ಷದ ಮತದಾರರಾಗಿದ್ದಾರೆ ಎಂದು ಹೇಳುತ್ತಾ ಶಿಕ್ಷಕರ ಕ್ಷೇತ್ರದಿಂದ ಸ್ಫರ್ಧಿಸಿರುವ ಭೋಜೇಗೌಡ, ಪದವೀಧರ ಕ್ಷೇತ್ರದಿಂದ ಸ್ಫರ್ಧಿಸಿರುವ ಡಾ.ಧನಂಜಯ ಸರ್ಜಿ ಇವರುಗಳು ಕ್ಷೇತ್ರದಲ್ಲಿ ಜನಪ್ರೀಯತೆಯನ್ನು ಪಡೆದವರಾಗಿದ್ದು, ಈ ಎರಡು ಜನ ಅಭ್ಯರ್ಥಿಗಳ ಗೆಲುವು ಖಚಿತ ಎಂದರು.ಬಿಜೆಪಿ ಮುಖಂಡ ಗೌ.ಹಾಲೇಶ್ ಮಾತನಾಡಿ, ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡ ಮತದಾರರು ತಾಲೂಕಿನಲ್ಲಿ ಸಾಕಷ್ಟು ಜನ ಮತದಾರರಿದ್ದು ಅವರೆಲ್ಲರೂ ಕೂಡ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಲಿದ್ದಾರೆ. ಅದಕ್ಕೆ ಇಲ್ಲಿ ಸೇರಿಸುವಂತಹ ಮತದಾರರೇ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದರು.ಈ ಪ್ರಚಾರದ ಸಭೆಯಲ್ಲಿ ಮುಖಂಡರಾದ ಚ.ಮ.ಗುರುಸಿದ್ದಯ್ಯ, ಎಂ.ಯು.ಚನ್ನಬಸಪ್ಪ, ಲತಾ, ಕಮಲಮ್ಮ. ಬಿ.ಎಂ.ಕುಬೇಂದ್ರೋಜಿರಾವ್, ಲಕ್ಷ್ಮಿದೇವಮ್ಮ, ಚನ್ನಬಸಪ್ಪ ಸರ್ಜಿ, ಮಲ್ಲಿಕಾರ್ಜುನ, ಸಂಗಮೇಶ್ ಉಪಸ್ಥಿತರಿದ್ದರು.