ಮಾದಾಪುರದ ಸಾರ್ವಜನಿಕ ಆಯುಧಾಪೂಜಾ ಸಮಿತಿವತಿಯಿಂದ 6ನೇ ವರ್ಷದ ಅದ್ಧೂರಿ ಆಯುಧಪೂಜಾ ಸಮಾರಂಭವನ್ನು ಬಸ್‌ನಿಲ್ಧಾಣದಲ್ಲಿ ಅಯೋಜಿಸಲಾಗಿದೆ ಎಂದು ಆಚರಣಾ ಸಮಿತಿ ತಿಳಿಸಿದೆ.

ಸುಂಟಿಕೊಪ್ಪ : ಮಾದಾಪುರದ ಸಾರ್ವಜನಿಕ ಆಯುಧಾಪೂಜಾ ಸಮಿತಿವತಿಯಿಂದ 6ನೇ ವರ್ಷದ ಅದ್ಧೂರಿ ಆಯುಧಪೂಜಾ ಸಮಾರಂಭವನ್ನು ಬಸ್‌ನಿಲ್ಧಾಣದಲ್ಲಿ ಅಯೋಜಿಸಲಾಗಿದೆ ಎಂದು ಆಚರಣಾ ಸಮಿತಿ ತಿಳಿಸಿದೆ.

ಕಳೆದ 5 ವರ್ಷ ಗಳಿಂದ ಸಾರ್ವಜನಿಕ ಆಯುಧಾಪೂಜಾ ಆಚರಣಾ ಸಮಿತಿಯು ಸತತವಾಗಿ ಮನೋರಂಜನಾ ಕಾರ್ಯಕ್ರಮ ಮತ್ತು ಆಯುಧ ಪೂಜೆ ಸಮಾರಂಭವನ್ನು ನಡೆಸಿಕೊಂಡು ಬರಲಾಗುತ್ತಿದೆ. 6ನೇ ವರ್ಷದ ಆಚರಣೆಯ ಅಂಗವಾಗಿ ಇಂದು ಮಾದಾಪುರ ಗ್ರಾಮ ಪಂಚಾಯಿತಿ ಆವರಣದ ಬಸ್‌ನಿಲ್ದಾಣದಲ್ಲಿ 12 ಗಂಟೆಯಿಂದ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ, ಅಂತರಾಷ್ಟ್ರೀಯ ಮಟ್ಟದ ಮಂಗಳೂರಿನ ವಿಶ್ವಾಸ್ ಮ್ಯೂಸಿಕ್ ಗಾಯಕ ಗಾಯಕಿಯರಿಂದ ಸಂಗೀತ ರಸ ಸಂಜೆ ಮತ್ತು ವಿವಿಧ ವಾಹನಗಳ ಅಲಂಕಾರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ಜಿಲ್ಲಾ ಮಟ್ಟದ ಡ್ಯಾನ್ಸ್ ಸ್ಪರ್ಧೆ ಸಮಾರಂಭದ ಅಧ್ಯಕ್ಷತೆಯನ್ನು ಸಾರ್ವಜನಿಕ ಆಯುಧಾಪೂಜಾ ಆಚರಣಾ ಸಮಿತಿಯ ಅಧ್ಯಕ್ಷ ವಿ. ಕುಮಾರ ವಹಿಸಿಲಿದ್ದಾರೆ. ಉದ್ಘಾಟನೆಯನ್ನು ಮಡಿಕೇರಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರು, ಮಾದಾಪುರ ಪ್ರಾ.ಕೃ.ಪ.ಸ.ಸಂ.ನಿ.ಅಧ್ಯಕ್ಷ ಉಮೇಶ್ ಉತ್ತಪ್ಪ ಮತ್ತು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಪಿ.ಸಂದೇಶ್ ನೇರವೇರಿಸಲಿದ್ದಾರೆ. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಾದಾಪುರ ಗ್ರಾ.ಪಂ. ಆಡಳಿತಾಧಿಕಾರಿ ಹೇಮಂತ್‌ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಕೆ.ನಾಯರ್ ಕೊಡಗು ಜಿ.ಪಂ. ಮಾಜಿ ಸದಸ್ಯ ಪಿ.ಎಂ.ಲತೀಫ್ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ. ಅದ್ಧೂರಿ ಆಯುಧ ಪೂಜಾ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರ ಶಾಸಕರಾದ ಡಾ.ಮಂತರ್‌ಗೌಡ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ನೇರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಾರ್ವಜನಿಕ ಆಯುಧಾಪೂಜಾ ಆಚರಣಾ ಸಮಿತಿಯ ಅಧ್ಯಕ್ಷ ವಿ. ಕುಮಾರ ವಹಿಸಿಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಬಾಬಸ್ ಪಾಳ್ಯದ ಲಲ್ಲೇಶ್ ರೆಡ್ಡಿ, ಸೋಮವಾರಪೇಟೆ ತಾಲೂಕು ತಹಶೀಲ್ಧಾರ್ ಕೃಷ್ಣಮೂರ್ತಿ, ಕರ್ನಾಟಕ ಒಕ್ಕಲಿಗ ಸಂಘ, ಖರೀದಿ ಸಮಿತಿ, ಕಾರ್ಯಾಧ್ಯಕ್ಷ ಹಾಗೂ ಅಧ್ಯಕ್ಷರು ಹರಪಳ್ಳಿ ರವೀಂದ್ರ, ಮಡಿಕೇರಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರು, ಮಾದಾಪುರ ಪ್ರಾ.ಕೃ.ಪ.ಸ.ಸಂ.ನಿ.ಅಧ್ಯಕ್ಷ ಉಮೇಶ್ ಉತ್ತಪ್ಪ, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಟಿ.ಪಿ.ಸಂದೇಶ್, ಬಿ.ಬಿಭಾರತೀಶ್, ಜಿಲ್ಲಾಡಳಿತ ಕಾನೂನು ಸಲಹೆಗಾರರಾದ ಎ.ಲೋಕೇಶ್ ಕುಮಾರ್, ಮಾದಾಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ.ಕೆ.ನಾಯರ್, ಉದ್ಯಮಿ ಎಡಿಕೇರಿ ಪ್ರಸನ್ನ, ಕೊಡಗು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಠೋ, ಕೆದಕಲ್ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎಂ.ಸAಜುಪೊನ್ನಪ್ಪ, ನಿರ್ಮಾಪಕರು ಹಾಗೂ ಚಲನಚಿತ್ರ ನಟ ಆದ್ಯ ತಿಮ್ಮಯ್ಯ, ಕಾಫಿ ಬೆಳೆಗಾರರು ಸೂರ್ಯ ಕಿರಣ ತೋಟದ ಮಾಲೀಕರಾದ ನಂದಬೆಳ್ಳಿಯಪ್ಪ, ಉದಯ್ ಈಶ್ವರನ್, ಕೊಡಗು ಜಿಲ್ಲಾ ಹಿಂದು ಮಾಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯನ್, ಸಮಾಜ ಸೇವಕರಾದ ನಾಪಂಡ ಮುತ್ತಪ್ಪ, ಮನು ಮುದ್ದಪ್ಪ, ಮತ್ತಿತರರು ಆಗಮಿಸಲಿದ್ದಾರೆ ಎಂದು ಸಂಘದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.