ಸರ್ಕಾರದ ಯೋಜನೆ ಮಾದಿಗ ಸಮಾಜದ ಕುಟುಂಬ ವರ್ಗದವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ನಾವೆಲ್ಲರೂ ಮಾಡಬೇಕು

ಕೊಪ್ಪಳ: ಮಾದಿಗ ಸಮಾಜ ಕಟ್ಟಲು ಮಾದರ ಚನ್ನಯ್ಯ ಸೇವಾ ಸಮಿತಿ ಕಂಕಣಬದ್ಧವಾಗಿದೆ ಎಂದು ಮುಖಂಡ ಗಣೇಶ ಹೊರತಟ್ನಾಳ ಹೇಳಿದರು.

ಸೋಮವಾರ ನಗರದ ಸರ್ಕಿಟ್ ಹೌಸ್‌ನಲ್ಲಿ ಶ್ರೀಮಾದಾರ ಚೆನ್ನಯ್ಯ ಸೇವಾ ಸಮಿತಿ ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲೆಯ ಮುಖಂಡರ ನೇತೃತ್ವದಲ್ಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಾದಿಗ ಸಮಾಜ ಒಗ್ಗಟ್ಟಾಗುವಂತೆ ರಾಜಕೀಯ, ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಮತ್ತು ಸರ್ವಾಂಗಣ ಅಭಿವೃದ್ಧಿಗೆ ಶ್ರೀಮಾದರಾ ಚೆನ್ನಯ್ಯ ಸೇವಾ ಸಮಿತಿ ಕಂಕಣ ಬದ್ಧವಾಗಿದೆ.

ರಾಜ್ಯ ಸಮಿತಿಯ ಆದೇಶದಂತೆ ಜಿಲ್ಲಾ ಪದಾಧಿಕಾರಿಗಳು ಪ್ರತಿ ವಿಧಾನಸಭಾ ಕ್ಷೇತ್ರವಾರು ಸೇವಾ ಸಮಿತಿ ಸದಾ ಸಕ್ರೀಯವಾಗಿರಬೇಕು. ಸರ್ಕಾರದ ಯೋಜನೆ ಮಾದಿಗ ಸಮಾಜದ ಕುಟುಂಬ ವರ್ಗದವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ನಾವೆಲ್ಲರೂ ಮಾಡಬೇಕು.ಹಾಗಾಗಿ ಆದಷ್ಟು ಬೇಗನೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಸೇವಾ ಸಮಿತಿ ರಚನೆ ಮಾಡಿ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ರಾಜ್ಯ ಸಮಿತಿಗೆ ಹಿರಿಯರನ್ನು ಆಯ್ಕೆ ಮಾಡಿ ಕಳುಹಿಸುವಂತೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಸೇವಾ ಸಮಿತಿಯ ರಾಜಕಾರಣಿ ಸದಸ್ಯ ಈರಪ್ಪ ಕೊಡಗುಂಟಿ ಮಾತನಾಡಿ, ಜ. 20 ರಂದು ಬೆಳಗ್ಗೆ 10.30 ಗಂಟೆಗೆ ಮಾದರ ಚೆನ್ನಯ್ಯ ಸೇವಾ ಸಮಿತಿ ಚಿತ್ರದುರ್ಗದ ಮಠದಲ್ಲಿ ಶ್ರೀಮಾತಂಗಿ ದೇವಿ ದೇವಾಲಯ ಅಡಿಗಲ್ಲು ಸಮಾರಂಭ ಇದೆ, ಹಾಗಾಗಿ ಜಿಲ್ಲೆಯಿಂದ ಅತಿ ಹೆಚ್ಚು ಜನ ಸಮುದಾಯದ ಮುಖಂಡರು ಪೂಜಾ ಕಾರ್ಯಕ್ರಮದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕು ಮತ್ತು ಸಮಾಜದ ಸಂಘಟನೆಗೆ ಸದಾ ಸಿದ್ಧರಿರಬೇಕು ನಾವೆಲ್ಲರೂ ಒಗ್ಗಟ್ಟಾಗಿ ಒಂದಾಗಿ ಕೆಲಸ ಮಾಡೋಣ ಎಂದರು.

ಮಲ್ಲಿಕಾರ್ಜುನ್ ಪೂಜಾರಿ ಮಾತನಾಡಿ, ಕೊಪ್ಪಳ ಮಾದಿಗ ಸಮಾಜ ಆರ್ಥಿಕವಾಗಿ ನಾವೆಲ್ಲರೂ ಸಬಲರಾಗಬೇಕು. ಸಮಾಜಕ್ಕಾಗಿ ಏನನ್ನಾದರೂ ಆಸ್ತಿ ಮಾಡಬೇಕು ನಮ್ಮ ಮಕ್ಕಳಿಗೆ ತರಬೇತಿ ಕೇಂದ್ರ ತೆರೆಯಬೇಕು ಉನ್ನತ ಅಭ್ಯಾಸ ಮಾಡಲಿಕ್ಕೆ ಕೋಚಿಂಗ್ ಸೆಂಟರ್ ತೆಗೆಯಬೇಕು. ಸರ್ಕಾರದ ಸೌಲತ್ತು ನಮ್ಮ ಸಮಾಜದ ಯುವಕರಿಗೆ ಮುಟ್ಟಿಸುವಂತಹ ಕೆಲಸ ನಾವೆಲ್ಲರೂ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ನಿಂಗಜ್ಜ ಬಂಡಿ ಅರ್ಲಾಪುರ್, ವಸಂತ್ ಬಾವಿಮನಿ, ಮಲ್ಲಿಕಾರ್ಜುನ ಪೂಜಾರ್, ಲಕ್ಷ್ಮಣ್ ಹೊಸಮನಿ, ಗಾಳೆಪ್ಪ ಹಿಟ್ನಾಳ, ಯಲ್ಲಪ್ಪ ಮುದ್ಲಾಪುರ, ಮಲ್ಲಿಕಾರ್ಜುನ್ ಯರಡೋಣ, ನಾಗರಾಜ್ ತಲ್ಲೂರು, ನಾಗರಾಜ್ ನಂದಾಪುರ್, ಯಮನೂರಪ್ಪ ಕುಷ್ಟಗಿ, ಸಂತೋಷ್ ಬೂದಿಹಾಳ ಸೇರಿದಂತೆ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.