ಅಧಿಕಾರ ಅವಧಿ ಮುಗಿದ ಮದ್ದೂರು ತಾಲೂಕಿನ ವಿವಿಧ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.
ಮದ್ದೂರು:
ಅವಧಿ ಮುಗಿದ ತಾಲೂಕಿನ ವಿವಿಧ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.ತಾಲೂಕಿನ ಕೌಡ್ಲೆ, ಬೆಕ್ಕಳಲೆ ಗ್ರಾಪಂ ಆಡಳಿತಾಧಿಕಾರಿಯಾಗಿ ಕಾವೇರಿ ನೀರಾವರಿ ನಿಗಮದ ಕೊಪ್ಪ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್. ಹೊಸಗಾವಿ, ಆಬಲವಾಡಿ ಗ್ರಾಪಂಗಳಿಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಮದ್ದೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ. ತಗ್ಗಹಳ್ಳಿ, ಹೂತಗೆರೆ ಗ್ರಾಪಂಗಳಿಗೆ ಮದ್ದೂರು ಸಹಾಯಕ ಕೃಷಿ ನಿರ್ದೇಶಕ. ಮಲ್ಲನಕುಪ್ಪೆ, ಕೆಸ್ತೂರು ಗ್ರಾಪಂಗಳಿಗೆ ಮದ್ದೂರು ಬಿಇಒ. ಕೊಪ್ಪ, ಬಿದರಕೋಟೆ ಗ್ರಾಪಂಗಳಿಗೆ ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಅಭಿಯಂತರ. ಮರಳಿಗ, ನಿಲುವಾಗಿಲು ಗ್ರಾಪಂಗಳಿಗೆ ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕರು. ಆತಗೂರು, ಕದಲೂರು ಗ್ರಾಪಂಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು. ಹೆಮ್ಮನಹಳ್ಳಿ, ಹೊಸಕೆರೆ ಗ್ರಾಪಂಗಳಿಗೆ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.
ತಾಲೂಕಿನ ಬೆಸಗರಹಳ್ಳಿ, ವಳಗೆರಹಳ್ಳಿ ಗ್ರಾಪಂಗಳಿಗೆ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ. ನಿಡಘಟ್ಟ, ಕೆ.ಹೊನ್ನಲಗೆರೆ ಗ್ರಾಪಂಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು. ಆಲೂರು, ನಗರಕೆರೆ ಗ್ರಾಪಂಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ. ಸಾದೊಳಲು, ಚಿಕ್ಕರಸಿನಕೆರೆ ಗ್ರಾಪಂಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ. ಕ್ಯಾತಘಟ್ಟ, ಕೆ.ಬೆಳ್ಳೂರು ಗ್ರಾಪಂಗಳಿಗೆ ಚೆಸ್ಕಾಂ ಮದ್ದೂರು ನಗರ ವಿಭಾಗದ ಸಹಾಕ ಕಾರ್ಯಪಾಲಕ ಅಭಿಯಂತರ. ಕೂಳಗೆರೆ, ಎಸ್.ಐ. ಹೊನ್ನಲಗೆರೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು. ತೊರೆಬೊಮ್ಮನಹಳ್ಳಿ, ಮೆಣಸಗೆರೆ ಗ್ರಾಪಂಗಳಿಗೆ ಕಾವೇರಿ ನೀರಾವರಿ ನಿಗಮ ಭಾರತೀನಗ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರನ್ನು ನೇಮಿಸಲಾಗಿದೆ.ಅಣ್ಣೂರು, ಭಾರತೀನಗರ ಗ್ರಾಪಂಗಳಿಗೆ ಮದ್ದೂರು ತಾಪಂ ತಾಲೂಕು ಯೋಜನಾಧಿಕಾರಿ. ದೊಡ್ಡರಸಿನಕೆರೆ, ಮಾದರಹಳ್ಳಿ ಗ್ರಾಪಂಗಳಿಗೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ. ಕೆ.ಶೆಟ್ಟಹಳ್ಳಿ, ಯಡಗನಹಳ್ಳಿ ಗ್ರಾಪಂಗಳಿಗೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರು. ಕಾಡುಕೊತ್ತನಹಳ್ಳಿ, ಬಿದರಹಳ್ಳಿ ಗ್ರಾಪಂಗಳಿಗೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.