ಮದ್ದೂರು ತಾಲೂಕು ಮಟ್ಟದ ಕ್ರೀಡಾಕೂಟ: ಭಾರತೀ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

| Published : Sep 30 2025, 12:00 AM IST

ಮದ್ದೂರು ತಾಲೂಕು ಮಟ್ಟದ ಕ್ರೀಡಾಕೂಟ: ಭಾರತೀ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಹೊನ್ನಲಗೆರೆ ಆರ್.ಕೆ.ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಮದ್ದೂರು ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಭಾರತೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಮಗ್ರ ಪಶಸ್ತಿ ಗಳಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮದ್ದೂರು ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಭಾರತೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಮಗ್ರ ಪಶಸ್ತಿ ಗಳಿಸಿದೆ.

ಕೆ.ಹೊನ್ನಲಗೆರೆ ಆರ್.ಕೆ.ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿ ನವೀನ್ ರಾಜ್ ಉದ್ದ ಜಿಗಿತ ಪ್ರಥಮ, ವೈ.ಎಸ್ ಜೀವನ್ ಗೌಡ 800 ಮೀಟರ್ ಓಟ ಪ್ರಥಮ, ಸಚಿನ್ ಎಂ.ಎಸ್ 3000 ಮೀ ಓಟ ಪ್ರಥಮ , 1500 ಮೀ & 100 ಮೀಟರ್ ಓಟ ಮತ್ತು ಹರ್ಡಲ್ಸ್ (ಹೃಷಿಕೇಶ್ ) ತೃತಿಯ ಮತ್ತು ಪ್ರಥಮ ಸ್ಥಾನ, ಶರ್ಟ್ ಪುಟ್ ಅರ್ಜುನ್ ತೃತೀಯ ಸ್ಥಾನ ಮತ್ತು ಹ್ಯಾಮರ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.

4*400 ಮೀ ರಿಲೇ ವಿ. ಮೋಹನ್ ಕುಮಾರ್, ಡಿ.ಎಂ.ಸಂಜು, ಜಿ. ವಿ.ಪವನ, ಕೆ.ಎಸ್.ತರುಣ್ ದ್ವಿತೀಯ ಸ್ಥಾನ, ಸಚಿನ್ ಮತ್ತು ಕುಶಾಲ್ 4*100 ಮೀ ರಿಲೇ ಪ್ರಥಮ ಸ್ಥಾನ, ಬಾಲಕರ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಥ್ರೋಬಾಲ್, ಖೋ ಖೋ , ಬಾಲ್ ಬ್ಯಾಡ್ಮಿಂಟನ್ , ವಾಲಿಬಾಲ್, ಕಬಡ್ಡಿ ತಂಡಗಳು.

ಬಾಲಕಿಯರ ವಿಭಾಗದಲ್ಲಿ:

ರಂಜು 1500 ಮೀಟರ್ ಓಟ ಮೂರನೇ ಸ್ಥಾನ, ಸಾನಿಕ ಪ್ರಥಮ ಲಾಂಗ್ ಜಂಪ್, ನಿಮಿಷ ದ್ವಿತೀಯ, ಎಂ.ಕೆ.ಶಿಲ್ಪಾ ಟ್ರಿಪಲ್ ಜಂಪ್ ಪ್ರಥಮ, ಬಿ. ಸಾನಿಕ 100 ಮೀಟರ್ ಓಟ ಪ್ರಥಮ, ಶಾರ್ಟ್ ಪುಟ್ ಕೀರ್ತನ ಪ್ರಥಮ, 4*400 ರಿಲೇ ಪ್ರಥಮ ಸ್ಥಾನ ರಂಜು, ನಿತ್ಯ, ಕುಶಾಲ, ಶಿಲ್ಪ, ಡಿಸ್ಕಸ್ ಎಸೆತ ದ್ವಿತೀಯ ಸ್ಥಾನ ಕೀರ್ತನ, ನಿಮಿಷ 400 ಮತ್ತು 200 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 800 ಮೀಟರ್ ಓಟ ಅನನ್ಯ ದ್ವಿತೀಯ ಸ್ಥಾನ, 4*400 ಮೀಟರ್ ರಿಲೇ, ಪ್ರಥಮ ಸ್ಥಾನ ಸಾನಿಕ. ಅನನ್ಯ, ನಿಮಿಷ ಸ್ಥಾನಗಳಿಸಿದ್ದಾರೆ.

ಕ್ರಾಸ್ ಕಂಟ್ರಿ ಗುಣಶ್ರೀ, ಅನನ್ಯ, ರಂಜು, ಗುಣವತಿ ಪ್ರಥಮ ಸ್ಥಾನ, 1500 ಮೀಟರ್ ಓಟ ಮೂರನೇ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಭಾರತೀ ವಿದ್ಯಾ ಸಂಸ್ಥೆಯ ಚೇರ್‍ಮನ್, ವಿಧಾನ ಪರಿಷತ್ ಮಧು ಜಿ.ಮಾದೇಗೌಡ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.

ನಂತರ ಮಾತನಾಡಿದ ಶಾಸಕರು, ಶಾಲಾ ಹಂತದಿಂದಲೇ ಕ್ರೀಡಾ ಪಟುಗಳನ್ನು ತಯಾರು ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ಪ್ರೇರೇಪಿಸಲು 4 ಕೋಟಿ ರೂ ವೆಚ್ಚದಲ್ಲಿ ಒಳಾಂಗಣ ಸ್ಟೇಡಿಯಂ ನಿರ್ಮಾಣ ಹಂತದಲ್ಲಿದ್ದು, ಹೊರಾಂಗಣ ಸ್ಟೇಡಿಯಂ ನಿರ್ಮಾಣಕ್ಕೂ ನೀಲಿ ನಕ್ಷ ತಯಾರಾಗಿದೆ ಎಂದರು.

ನಗರ ಪ್ರದೇಶದ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಮತ್ತು ಕ್ರೀಡೆಗೆ ನೀಡುವ ಒತ್ತುವಷ್ಟು ನಮ್ಮ ಗ್ರಾಮೀಣ ಭಾಗದ ಮಕ್ಕಳಿಗೂ ನೀಡುತ್ತಿದ್ದೇವೆ, ಹೀಗಾಗಿ ಗ್ರಾಮೀಣ ಪ್ರದೇಶಗಳಿಂದ ಕ್ರೀಡಾ ಪಟುಗಳು ಹುಟ್ಟುಹಾಕಲು ಕಾರಣವಾಗುತ್ತಿದೆ ಎಂದರು. ಮುಂದಿನ ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಶುಭ ಕೋರಿದರು.

ಈ ವೇಳೆ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೆಗೌಡ, ಸಿಇಒ ಆಶಯ್ ಜಿ. ಮಧು, ಭಾರತಿ ಪದವಿ ಪೂರ್ವ ಕಾಲೇಜಿನ ಆಡಳಿತ ಅಧಿಕಾರಿ ಜವರೇಗೌಡ, ಪ್ರಾಂಶುಪಾಲ ಜಿ.ಬಿ.ಪಲ್ಲವಿ ಅಧ್ಯಾಪಕರು ಮತ್ತು ಅಧ್ಯಾಪಕೇತರ ವೃಂದ ಕ್ರೀಡಾಪಟುಗಳನ್ನು ಅಭಿನಂದಿಸಿದರು.