ಮಧುಗಿರಿ ಜಿಲ್ಲೆಯಾಗಿ ಸಮಗ್ರ ಅಭಿವೃದ್ಧಿ ಹೊಂದಲಿದೆ

| Published : Aug 01 2025, 12:00 AM IST

ಮಧುಗಿರಿ ಜಿಲ್ಲೆಯಾಗಿ ಸಮಗ್ರ ಅಭಿವೃದ್ಧಿ ಹೊಂದಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಮಧುಗಿರಿ ಜಿಲ್ಲೆಯಾದರೆ ಈ ಪ್ರದೇಶ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿದೆ ಇದರಿಂದ ಸ್ಥಳೀಯ ಜನತೆಗೆ ಉದ್ಯೋಗವಕಾಶಗಳು ಸಿಕ್ಕಿ ಜೀವನ ಮಟ್ಟ ಸುಧಾರಣೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಮಧುಗಿರಿ ಜಿಲ್ಲೆಯಾದರೆ ಈ ಪ್ರದೇಶ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿದೆ ಇದರಿಂದ ಸ್ಥಳೀಯ ಜನತೆಗೆ ಉದ್ಯೋಗವಕಾಶಗಳು ಸಿಕ್ಕಿ ಜೀವನ ಮಟ್ಟ ಸುಧಾರಣೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ತಿಳಿಸಿದರು.

ಗುರುವಾರ ಲೋಕೋಪಯೋಗಿ ಇಲಾಖೆಯಿಂದ ಏರ್ಪಡಿಸಿದ್ದ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ದೊಡ್ಡಯಲ್ಕೂರು , ದಾದಗೊಂಡನಹಳ್ಳಿ, ತಿಪ್ಪಾಪುರ, ಅಡವಿನಾಗೇನಹಳ್ಳಿ, ಸಿಂಗನಹಳ್ಳಿ, ತೆರಿಯೂರು, ಹಾಗೂ ಕಡಗತ್ತೂರು ಆಂಧ್ರ ಗಡಿ ಸೇರುವ 5 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಮತ್ತು ಕೊಡಿಗೇನಹಳ್ಳಿ ಗ್ರಾಮದಲ್ಲಿ 3 ಕೋಟಿ ರು.ವೆಚ್ಚದ ಜೆಜೆಎಂ ಕಾಮಗಾರಿ ಅಡವಿನಾಗೇನಹಳ್ಳಿಯಿಂದ -ಸುದ್ದೇಕುಂಟೆ ಸಂಪರ್ಕಿಸುವ ರಸ್ತೆ 5 ಕೋಟಿ ರು.ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಮಧುಗಿರಿ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶ, ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಚಿವರು ಪ್ರಮಾಣಿಕವಾಗಿ ಶ್ರಮಿಸುತ್ತಿದ್ದು, ನಿಮ್ಮಗಳ ಸಹಕಾರ ಅತಿ ಮುಖ್ಯ, ಮುಂಬರುವ ದಿನಗಳಲ್ಲಿ ಮಧುಗಿರಿ ಜಿಲ್ಲೆಯಾಗುವ ಎಲ್ಲ ಲಕ್ಷಣಗಳಿದ್ದು, ಜಿಲ್ಲೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮಾಡಿದ್ದು , ಕ್ಷೇತ್ರದ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದುಳಿದ ಪ್ರದೇಶದ ಜನರಿಗೆ ಏನೇನೂ ಸೌಲಭ್ಯಗಳು ಬೇಕು ಅದನ್ನು ಹಂತ ಹಂತವಾಗಿ ಸಚಿವರು ಮಾಡುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ನಿವೇಶನ, ವಸತಿ ಸೌಲಭ್ಯಗಳನ್ನು ಕಲ್ಪಿಸಲು ಸಚಿವರ ಗಮನಕ್ಕೆ ತಂದು ಎಲ್ಲರಿಗೂ ಅನುಕೂಲ ಮಾಡಲಾಗುವುದು ಎಂದರು.

ತಾವುಗಳು ಎಂದೆಂದಿಗೂ ತಾಲೂಕಿನ ಜನತೆ ಎಲ್ಲರೂ ಸಚಿವ ರಾಜಣ್ಣರವರ ಜೊತೆಗೆ ಇರಿ, ಹಿಂದೆ ಐದು ವರ್ಷ ನೀವುಗಳು ಅನುಭವಿಸಿದ ನೋವು ಇನ್ನೂ ನಮ್ಮ ಕೈಲಿ ತಡೆಯಾಕ್ಕಾಗಿಲ್ಲ, ನಾವು 2013 ರಿಂದ 2018ರವರೆಗೆ ಮಾಡಿದ ಅಭಿವೃದ್ಧಿ ಕಾರ್ಯಗಳೇ ಹೊರತು ಬೇರೆ ಯಾರು ಅಭಿವೃದ್ಧಿ ಮಾಡಲಿಲ್ಲ. ಮತ್ತೆ ತಾಲೂಕಿನ ಸಮಗ್ರ ಅಭಿವೃದ್ಧಿ ಪಡಿಸಲು ರಾಜಣ್ಣನವರೇ ಬರಬೇಕಾಯಿತು. ಆದ್ದರಿಂದ ನಿಮ್ಮೆಲ್ಲರ ಅಭಿವೃದ್ಧಿಗೆ ಮತ್ತು ಕ್ಷೇತ್ರದ ಪ್ರಗತಿಗೆ ಎಲ್ಲರ ಬೆಂಬಲ ಸಚಿವ ರಾಜಣ್ಣನವರಿಗೆ ಇರಬೇಕು ಎಂದರು.

ಕೊಡಿಗೇನಹಳ್ಳಿಯಲ್ಲಿ ಜೆಜೆಎಂ ಕಾಮಗಾರಿ ಮಾಡಬೇಕಾದರೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮಾಡಬೇಕು ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಇಇ ಹನುಮಂತರಾವ್‌,ಎಇಇ ಸಂಪತ್‌ ,ಕುಡಿವ ನೀರು ಸರಬರಾಜು ಎಇಇ ಲೋಕೇಶ್‌,ಅರಣ್ಯ ಇಲಾಖೆ ಅಧಿಕಾರಿ ಸುರೇಶ್‌,ಇಓ ಲಕ್ಷ್ಮಣ್‌, ಮಧುಸೂದನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆದಿನಾರಾಯಣರೆಡ್ಡಿ,ಕೆಎಂಎಫ್‌ ನಿರ್ದೇಶಕ ಮೈದನಹಳ್ಳಿ ಕಾಂತರಾಜು,.ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದರು.

ಫೋಟೋ : ಮಧುಗರಿ ವಿಧಾನಸಭಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಚಾಲನೆ ನೀಡಿದರು.ಕೋಟ್‌...

ಮಧುಗಿರಿ ಜಿಲ್ಲೆಯಾದರೆ ಹಿಂದುಳಿದ ತಾಲೂಕುಗಳಿಗೆ ವರದಾನವಾಗಲಿದೆ. ಇದರಿಂದ ಮಧುಗಿರಿ ಪಟ್ಟಣ ಮಾತ್ರವಲ್ಲ ಅಕ್ಕಪಕ್ಕದ ತಾಲೂಕುಗಳು ಸಹ ಅಭಿವೃದ್ಧಿಹೊಂದಲಿವೆ. ಸಹಕಾರ ಸಚಿವರಾಗಿ ಈಗಾಗಲೇ ಸಾಕಷ್ಟು ಕೆಲಸ ಮಾಡಿರುವ ರಾಜಣ್ಣ ಮಧುಗಿರಿ ಜಿಲ್ಲೆ ಘೋಷಣೆಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಜನ ಗಮನಿಸಬೇಕು- ಶಾಂತಲಾ ರಾಜಣ್ಣ, ಮಾಜಿ ಅಧ್ಯಕ್ಷರು, ಜಿಪಂ ತುಮಕೂರು.