ಮಂಡಳಿ ಸಹ ಕಾರ್ಯದರ್ಶಿ ವಾಸುದೇವ ಧನ್ಯ ಮಾತನಾಡಿ, ನಮ್ಮ ಸನಾತನ ಧರ್ಮ ದಲ್ಲಿ ಮಧ್ವ ಪರಂಪರೆ ತನ್ನದೇ ಆದ ವೈಶಷ್ಟ್ಯವಿದೆ. ರಾಮಾಯಣ ಕಾಲದಿಂದ ಹನುಮನಿಂದ ಉದಿಸಿದ ಪರಂಪರೆ ಮಹಾಭಾರತದ ಭೀಮನಿಂದ ಪ್ರಖರಗೊಂಡು ಕಲಿಯುಗದಲ್ಲಿ ಶ್ರೀ ಮಧ್ವಾಚಾರ್ಯರಿಂದ ಶಿಷ್ಟ ಸಂಪ್ರದಾಯವಾಗಿ ಬೆಳೆದಿರುವ ಮತವಾಗಿದೆ. ಜಯಂತಿ ಆಚರಣೆಗೆ ಸರ್ಕಾರ ಮುಂದಾಗಿ ನಡೆಸುತ್ತಿರುವುದು ಶ್ಲಾಘನೀಯ ಎಂದು ತಮ್ಮ ಸಮುದಾಯದ ಪರವಾಗಿ ಕೃತಜ್ಞಯನ್ನೂ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರುಜನಸಾಮಾನ್ಯರಲ್ಲೂ ಭಗವದ್ ಪಜ್ಞೆ ಮೂಡಿಸಿದ ಮಹಾನ್ ದಾರ್ಶನಿಕರು, ಮಧ್ವ ಮತೋದ್ಧಾರಕರಾದ ಮಧ್ವಾಚಾರ್ಯರು ಎಂದು ಮಾಧ್ವ ಮಂಡಳಿಯ ಸಂಘಟನಾ ಕಾರ್ಯದರ್ಶಿ ರಘೋತ್ತಮ ತಿಳಿಸಿದರು.ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಸಿದ ಶ್ರೀ ಮಧ್ವಾಚಾರ್ಯ ಜಯಂತಿ ಹಾಗೂ ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಧ್ವಾಚಾರ್ಯರನ್ನು ಆನಂದ ತೀರ್ಥ, ಪೂರ್ಣಪ್ರಜ್ಞರೆಂದೂ ಸ್ಮರಿಸಲಾಗುತ್ತದೆ. ಬಾಲ್ಯಾವಸ್ಥೆಯಲ್ಲಿಯೇ ತಮ್ಮ ಸುಜ್ಞಾನ ಪ್ರೌಢಿಮೆ ತೋರಿದವರು. ಅಂದು ಸಮಾಜದಲ್ಲಿ ಪ್ರಚಲಿತದಲ್ಲಿದ್ದ ಹಲವಾರು ಶಾಸ್ತ್ರ, ಪುರಾಣೇತಿಹಾಸ ಮತ್ತಿತರ ವಿಷಯ ವಿಚಾರಗಳನ್ನು ಸಂಗ್ರಹಿಸಿ, ಮಥಿಸಿ,ಇದುವೇ ನೈಜ ತತ್ವ ಎಂದು ಸಿದ್ಧಾಂತವನ್ನು ಪ್ರತಿಪಾದಿಸಿ, ಆಧ್ಯಾತ್ಮಿಕ ಸಂಚಲನ ಮೂಡಿಸಿದರು ತಿಳಿಸಿದರು.ಮಂಡಳಿ ಸಹ ಕಾರ್ಯದರ್ಶಿ ವಾಸುದೇವ ಧನ್ಯ ಮಾತನಾಡಿ, ನಮ್ಮ ಸನಾತನ ಧರ್ಮ ದಲ್ಲಿ ಮಧ್ವ ಪರಂಪರೆ ತನ್ನದೇ ಆದ ವೈಶಷ್ಟ್ಯವಿದೆ. ರಾಮಾಯಣ ಕಾಲದಿಂದ ಹನುಮನಿಂದ ಉದಿಸಿದ ಪರಂಪರೆ ಮಹಾಭಾರತದ ಭೀಮನಿಂದ ಪ್ರಖರಗೊಂಡು ಕಲಿಯುಗದಲ್ಲಿ ಶ್ರೀ ಮಧ್ವಾಚಾರ್ಯರಿಂದ ಶಿಷ್ಟ ಸಂಪ್ರದಾಯವಾಗಿ ಬೆಳೆದಿರುವ ಮತವಾಗಿದೆ. ಜಯಂತಿ ಆಚರಣೆಗೆ ಸರ್ಕಾರ ಮುಂದಾಗಿ ನಡೆಸುತ್ತಿರುವುದು ಶ್ಲಾಘನೀಯ ಎಂದು ತಮ್ಮ ಸಮುದಾಯದ ಪರವಾಗಿ ಕೃತಜ್ಞಯನ್ನೂ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಅಖಿಲ ಬಾರತ ಮಾಧ್ವಪರಿಷತ್ ಪ್ರಚುರ ಪಡಿಸಿದ ‘ಮಧ್ವಾಚಾರ್ಯ ಸಂದೇಶ’ ಕಿರು ಹೊತ್ತಿಗೆ ಯನ್ನು ಶಿರಸ್ತೇದಾರ್‌ ತನ್ವೀರರವರು, ಬೇಲೂರು ಮಾಧ್ವ ಮಂಡಳಿ ಅಧ್ಯಕ್ಷ ರಘುಕುಮಾರ್, ತಾಲೂಕು ಮಾಹಾಸಭಾದ ಗೌ. ಅಧ್ಯಕ್ಷ ಮಂಜುನಾಥ ಜಂಟಿಯಾಗಿ ಬಿಡುಗಡೆ ಮಾಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಣೆ ಮಾಡಿದ ಶಿಕ್ಷಕ ಶಿವಗಂಗಯ್ಯ, ಚನ್ನಮ್ಮರಾಣಿ ನಾಡಿನ ಹೆಮ್ಮೆಯ ಸ್ತ್ರೀರತ್ನ. ಪುರುಷ ಪ್ರಧಾನ ಮೆರೆಯುತ್ತಿದ್ದ ಅಂದಿನ ದಿನಗಳಲ್ಲಿ ತನ್ನ ಬಲ, ಛಲ ಮತ್ತು ಸಾಹಸದಿಂದ ಆಂಗ್ಲರ ವಿರುದ್ಧ ಹೋರಾಟ ನಡೆಸಿದ ವೀರ ಮಹಿಳೆ. ಸ್ತ್ರೀಶಕ್ತಿಯನ್ನ ಸಮರ್ಥವಾಗಿ ಬಿಂಬಿಸಿದ ಚನ್ನಮ್ಮ ಆದರ್ಶ ಸಾಹಸಗಾಥೆ ಎಲ್ಲರಿಗೂ ಆದರ್ಶವಾಗಿದೆ ಎಂದು ನುಡಿದರು. ಮಾಧ್ವ ಪ್ರಮುಖರಾದ ಸುಧೀಂದ್ರ, ಶ್ರೀ ರಾಘವೇಂದ್ರ ಸನ್ನಿಧಾನ ಮಠದ ವ್ಯವಸ್ಥಾಪಕ ಸುಧೀಂದ್ರಾಚಾರ್, ಮಂಡಳಿ ಉಪಾಧ್ಯಕ್ಷ ರಾಘವೇಂದ್ರ ಹತ್ವಾರ್, ಕಾರ್ಯದರ್ಶಿ ಕೇಶವ ಹತ್ವಾರ್, ಮುರಳಿ ಹತ್ವಾರ್, ಕೃಪಾಕರ, ಆಶಾ ಮತ್ತಿತರರು ಪಾಲ್ಗೊಂಡಿದ್ದರು.

=====

ಫೋಟೋ:ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಸಿದ ಶ್ರೀ ಮಧ್ವಾಚಾರ್ಯ ಜಯಂತಿ ಹಾಗೂ ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.