ಗಂಗಾವತಿಯ ವಿವಿಧೆಡೆ ಮಧ್ವನವಮಿ ಆಚರಣೆ

| Published : Feb 06 2025, 11:48 PM IST

ಸಾರಾಂಶ

ನಗರದ ವಿವಿಧ ದೇವಸ್ಥಾನಗಳಲ್ಲಿ ಮಧ್ವ ನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪಲ್ಲಕ್ಕಿಯಲ್ಲಿ ಮಧ್ವಾಚಾರ್ಯರ ಮೂರ್ತಿ ಇಟ್ಟು ನಗರ ಪ್ರದಕ್ಷಿಣೆಕನ್ನಡಪ್ರಭ ವಾರ್ತೆ ಗಂಗಾವತಿ

ನಗರದ ವಿವಿಧ ದೇವಸ್ಥಾನಗಳಲ್ಲಿ ಮಧ್ವ ನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಧ್ವನವಮಿ ಆಚರಿಸಲಾಯಿತು. ಬೆಳಗ್ಗೆ ಮಧ್ವಾಚಾರ್ಯರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಗ್ರಾಮ ಪ್ರದಕ್ಷಿಣೆ ಮಾಡಲಾಯಿತು. ಆನಂತರ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ, ಸಾಮವೇದ ಗುರುರಾಜ ಆಚಾರ್, ವಾಮನಮೂರ್ತಿ ಮುಕ್ತೇದಾರ, ಪ್ರಹ್ಲಾದರಾವ್‌ ನವಲಿ, ನಗರಸಭಾ ಸದಸ್ಯ ವಾಸುದೇವ ನವಲಿ, ಪ್ರಹ್ಲಾದರಾವ್ ಹೇರೂರು, ಪ್ರಸನ್ನ ದೇಸಾಯಿ, ರಾಮಕೃಷ್ಣ ಜಾಹಗೀರದಾರ್, ಅಪ್ಪಣ್ಣಿ ದೇಶಪಾಂಡೆ, ಗುರುರಾಜ ಅಯೋಧ್ಯೆ, ನಾಗರಾಜ ಜೋಷಿ, ಶ್ಯಾಮರಾವ್ ಮುಕ್ತೇದಾರ್, ಜಗನ್ನಾಥ ಮುಕ್ತೇದಾರ್, ವೀಜೇಂದ್ರ ಆಚಾರ ಆದಾಪುರ ಭಾಗವಹಿಸಿದ್ದರು.

ಯಾಜ್ಞವಲ್ಕ್ಯ ಮಂದಿರ:

ನಗರದ ಯಾಜ್ಞವಲ್ಕ್ಯ ಮಂದಿರದಲ್ಲಿ ಮಧ್ವನವಮಿ ಆಚರಿಸಲಾಯಿತು. ಬೆಳಗ್ಗೆ ಆಂಜನೇಯಸ್ವಾಮಿ ಪಂಚಾಮೃತಾಭಿಷೇಕ, ಮಹರ್ಷಿ ಯಾಜ್ಞವಲ್ಕ್ಯರ ಅಷ್ಟೋತ್ತರ ಪಾರಾಯಣ, ಮಾಧವತೀರ್ಥರ ಅಷ್ಟೋತ್ತರ, ಮಧ್ವ ನಾಮಸ್ಮರಣೆ ಇತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ವೇ. ಪ್ರದೀಪ ಆಚಾರ್, ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಆಚಾರ್, ದೇವಸ್ಥಾನ ಸಮಿತಿ ಅಧ್ಯಕ್ಷ ಮುರಳೀಧರ ಕುಲಕರ್ಣಿ, ನಾರಾಯಣ ರಾವ್‌, ವೈದ್ಯ ಗೋಪಿನಾಥ ದಿನ್ನಿ, ರಾಘವೇಂದ್ರ ಲೆಕ್ಕಿಹಾಳ, ತಿರುಮಲ ರಾವ್ ಅಲಂಪಲ್ಲಿ, ವೆಂಕಟೇಶ ಲೆಕ್ಕಿಹಾಳ, ಮೋಹನ, ಇತರರು ಇದ್ದರು.

ಸತ್ಯನಾರಾಯಣ ದೇವಸ್ಥಾನ:

ಇಲ್ಲಿಯ ಸತ್ಯನಾರಾಯಣ ದೇವಸ್ಥಾನದಲ್ಲಿ ಮಧ್ವ ನವಮಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆ ರಥೋತ್ಸವ ಶ್ರದ್ಧಾ-ಭಕ್ತಿಯಿಂದ ಜರುಗಿತು. ಅರುಣಾಚಾರ, ವಾಗೀಶಚಾರ ಗೊರೆಬಾಳ, ವಾದಿರಾಜಚಾರ ಕಲ್ಮಂಗಿ, ಶ್ರೀಧರ ಆಚಾರ, ವೆಂಕಟೇಶಚಾರ ಭಾಗವಹಿಸಿದ್ದರು. ಸತ್ಯಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಧ್ವನವಮಿ ಆಚರಿಸಲಾಯಿತು.

ನವಲಿ:

ಇಲ್ಲಿಗೆ ಸಮೀಪದ ನವಲಿ ಗ್ರಾಮದ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ ಮಧ್ವನಮವಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಆನಂತರ ಮಧ್ವಚಾರ್ಯರ ಮೂಲಗ್ರಂಥಗಳು ಹಾಗೂ ಮಧ್ವಚಾರ್ಯ ಭಾವಚಿತ್ರದ ಮೆರವಣಿಗೆ ಜರುಗಿತು. ಅರ್ಚಕರಾದ ಅಚ್ಯುತಾಚಾರ, ಮರುಳೀಧರಾಚಾರ, ಗುರುರಾಜಾಚಾರ ಜಾಹಗೀರದಾರ ಭಾಗವಹಿಸಿದ್ದರು.