ಹುಬ್ಬಳ್ಳಿ:

ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀಮನ್ ಮಧ್ವಾಚಾರ್ಯರ ತತ್ವ-ಸಿದ್ಧಾಂತಗಳು ಇಂದಿಗೂ ಅನುಕರಣೀಯವಾದುವು ಎಂದು ಶ್ರೀಪ್ರದ್ಯುಮ್ನಾಚಾರ್ ಜೋಶಿ ಅಭಿಪ್ರಾಯ ಪಟ್ಟರು.

ನಗರದ ತಹಸೀಲ್ದಾರ್‌ ಕಚೇರಿಯ ಪ್ರಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ನಡೆದ ಶ್ರೀಮಧ್ವಾಚಾರ್ಯರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ವೇದಗಳು ಭಾರತೀಯ ಸಂಸ್ಕೃತಿಯ ತಳಹದಿ. ಅವುಗಳಿಂದಲೇ ಭಾರತೀಯ ಸಂಸ್ಕೃತಿ ಇಂದು ಜೀವಂತವಾಗಿ ಉಳಿದಿದೆ. ಒಂದು ಕಾಲದಲ್ಲಿ ವೇದ ಪಠಣ ಮಾಡುತ್ತಿದ್ದವರನ್ನು ಹೊರಗೆಳೆದುಕೊಂಡು ಬಂದು ಶಿಕ್ಷಿಸುತ್ತಿದ್ದ ಕಾಲವಿತ್ತು. ಅಂಥ ಸಂದರ್ಭದಲ್ಲಿ ಆಚಾರ್ಯ ತ್ರಯರು ವೇದಗಳನ್ನು ಸಂರಕ್ಷಿಸಿ ಅವುಗಳ ಸಾರವನ್ನು ಇಡೀ ಲೋಕಕ್ಕೆ ತಿಳಿಸಿಕೊಟ್ಟರು ಎಂದು ವಿವರಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಹಾಗೂ ಧಾರವಾಡ ಜಿಲ್ಲಾ ಚುನಾಯಿತ ಪ್ರತಿನಿಧಿ ಲಕ್ಷ್ಮಣ ಕುಲಕರ್ಣಿ ಮಾತನಾಡಿ, ಈಗಾಗಲೇ ಶ್ರೀ ಶಂಕರರ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಪ್ರಸಕ್ತ ವರ್ಷದಿಂದ ಶ್ರೀಮಧ್ವಾಚಾರ್ಯರ ಜಯಂತಿಯ ಆಚರಣೆಯೂ ಸರ್ಕಾರಿ ಮಟ್ಟದಲ್ಲಿ ಆರಂಭವಾಗಿರುವುದು ಹರ್ಷದ ಸಂಗತಿ. ಅದೇ ರೀತಿ ಶ್ರೀರಾಮಾನುಜಾಚಾರ್ಯರ ಜಯಂತಿಯನ್ನೂ ಕೂಡ ಸರ್ಕಾರದ ಮಟ್ಟದಲ್ಲಿ ಆಚರಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು ಎಂದರು.


ಶ್ರೀ ಸಮೀರಾಚಾರ್ಯ ಕಂಠಪಲ್ಲಿ, ವಿಶ್ವಪ್ರಿಯ ಆಚಾರ್ಯ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಂಜೀವ ಜೋಶಿ, ಜಯತೀರ್ಥ ಕಟ್ಟಿ ಮೊದಲಾದವರು ಮಾತನಾಡಿದರು. ಇದೇ ವೇಳೆ ಮಧ್ವರ ಜಯಂತಿ ಆಚರಿಸಲು ಕ್ರಮಕೈಗೊಂಡಿದ್ದಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅಭಿನಂದಿಸಿದರು.

ಕೇಶ್ವಾಪುರ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಸುನೀಲ್ ಗುಮಾಸ್ತೆ, ಕಾರ್ಯದರ್ಶಿ ವೆಂಕಟೇಶ ದಿವಾಣಜಿ, ಎ.ಸಿ. ಗೋಪಾಲ, ಗುರುರಾಜ ಕೌಜಲಗಿ, ಮನೋಹರ ಪರ್ವತಿ, ಶಂಕರರಾವ್ ಮಾಮಲೆ ದೇಶಪಾಂಡೆ, ಉಷಾ ಮಳಗಿ, ಸಂಧ್ಯಾ ದೀಕ್ಷಿತ್, ಎಸ್.ಡಿ. ಕುಲಕರ್ಣಿ, ಡಾ. ಸಂದೀಪ ಕುಲಕರ್ಣಿ, ಮುರಳೀಧರ ಕರ್ಜಗಿ, ವಾದಿರಾಜ ಕುಲಕರ್ಣಿ, ವಿಷ್ಣು ತಡಸ, ಶ್ರೀಧರ ನಾಗಸಂಪಿಗೆ, ಅಶೋಕ ಕುಲಕರ್ಣಿ, ಸಂಜೀವ ಕುಲಕರ್ಣಿ, ರಾಮಚಂದ್ರ ಇಬ್ರಾಹಿಂಪೂರ, ಧೀರೇಂದ್ರ ಬಾಗಲಕೋಟ, ಜಗನ್ನಾಥ ಕುಲಕರ್ಣಿ, ಕೇಶವ ಬಾದನಹಟ್ಟಿ, ಹಿರಿಯ ಪತ್ರಕರ್ತ ಶ್ರೀಪಾದ ಜೋಶಿ ಮೊದಲಾದವರಿದ್ದರು. ಎಕೆಬಿಎಂಎಸ್‌ನ ರಾಜ್ಯ ಸಹ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ಸಂಜೀವ ಜೋಶಿ ವಂದಿಸಿದರು.