ಸಮಾಜವು ಸಂಘಟಿತರಾಗಿ ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಪ್ರಗತಿ ಕಾಣುವಂತೆ ಮಾದರ್ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಎಸ್.ಹುಚ್ಚಯ್ಯ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಸಮಾಜವು ಸಂಘಟಿತರಾಗಿ ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಪ್ರಗತಿ ಕಾಣುವಂತೆ ಮಾದರ್ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಎಸ್.ಹುಚ್ಚಯ್ಯ ಕರೆ ನೀಡಿದರು.ತಾಲೂಕು ಮಾದಿಗ ಸಮಾಜದ ಒಕ್ಕೂಟದಿಂದ ಭಾನುವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಮಾದಿಗ ಮಹಾ ಸಂಘಟನೆ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾದಿಗ ಸಮಾಜ ಸಂಘಟಿತರಾಗಬೇಕು. ಹಕ್ಕುಗಳಿಗಾಗಿ ಹೋರಾಟ ನಡೆಸುವ ಮೂಲಕ ಪ್ರಗತಿದತ್ತ ಸಾಗಬೇಕು. ಸಂಘಟನೆಯಿಂದ ಏನಾದರೂ ಸಾಧಿಸಬಹುದು. ಮಾದರ ಸಮಾಜ ತಾಲೂಕು ಹಾಗೂ ರಾಜ್ಯದಲ್ಲಿ ಪ್ರಬಲ ಸಂಘಟನೆಯಾಗಬೇಕು.ಈ ನಿಟ್ಟಿನಲ್ಲಿ ಸಮುದಾಯ ಒಗ್ಗೂಡಿ ಪ್ರಗತಿ ಕಾಣುವಂತೆ ಸಲಹೆ ನೀಡಿದರು.ಮುಂದಿನ ದಿನಗಳಲ್ಲಿ ಇಲ್ಲಿನ ಮಾದರ ಮಹಾ ಸಭಾ ತಾಲೂಕು ಶಾಖೆಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸುವುದಾಗಿ ಹೇಳಿದರು. ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಮಾದಿಗ ಸಮಾಜದ ಉತ್ತಮ ಭವಿಷ್ಯ ಹಾಗೂ ಪ್ರಗತಿಗೆ ಹೆಚ್ಚು ಸಂಘಟಿತರಾಗಬೇಕು. ತತ್ವ ಸಿದ್ದಾಂತಗಳ ಅಡಿಯಲ್ಲಿ ನಮ್ಮ ಬದುಕುಕಟ್ಟಿಕೊಳ್ಳಬೇಕು. ಇಂದು ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕಿದ್ದು, ಪ್ರತಿ ಮನೆಯಲ್ಲಿಯೂ ವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಬಸವಲಿಂಗಪ್ಪ ಸಮುದಾಯದ ಪ್ರಗತಿ ಕುರಿತು ಮಾತನಾಡಿದ್ದು, ತಾಲೂಕು ದಲಿತ ಮುಖಂಡರಾದ ಎಸ್.ಹನುಮಂತರಾಯಪ್ಪ, ಉಗ್ರಪ್ಪ, ನರಸಪ್ಪ, ಪಾವಗಡ ಶ್ರೀರಾಮ್, ರಾಮಾಂಜಿನಪ್ಪ, ರಾಮಾಂಜಿನೇಯ,ಅಂಜಯ್ಯ, ಹನುಮಂತರಾಯಪ್ಪ, ಸಿ.ಕೆ.ತಿಪ್ಪೇಸ್ವಾಮಿ, ಮಂಜುನಾಥ್, ಲಿಂಗಣ್ಣ, ವಿ.ಎಸ್.ನಾಗೇಶ್, ಕನ್ನಮೇಡಿ ಕೃಷ್ಣಮೂರ್ತಿ, ಹನುಮಂತರಾಯಪ್ಪ, ಮಲ್ಲಿಕಾರ್ಜುನ, ಬಿ.ಪಿ.ಪೆದ್ದನ್ನ, ನರಸಿಂಹಪ್ಪ ಮಂಜುನಾಥ್, ಮಾರಪ್ಪ, ನರಸಿಂಹಪ್ಪ, ನಾರಾಯಣಪ್ಪ, ರಾಮಪ್ಪ, ನಾಗರಾಜು, ಮಾರಪ್ಪ ಇತರರಿದ್ದರು.