'Madiga History: Glory and Consciousness' event on the 22nd
ಹುಣಸಗಿ: ಮಾದಿಗ ಇತಿಹಾಸ ವೈಭವ ಪ್ರಜ್ಞೆ ಕಾರ್ಯಕ್ರಮ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ನ.22ರಂದು ಭಾನುವಾರ ಬೆಳಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ಸಿದ್ದು ಭಾವಿಮನಿ ಹುಣಸಗಿ ತಿಳಿಸಿದ್ದಾರೆ.
ಶಂಕರಲಿಂಗ ಮಹಾರಾಜರು ಮದಲಿಂಗನಾಳಮಠ ಸಾನಿಧ್ಯ ವಹಿಸಲಿದ್ದರೆ, ಹುಣಸಗಿ ತಹಸೀಲ್ದಾರ್ ಎಂ. ಬಸವರಾಜ ಹಾಗೂ ವಡಗೇರಾ ತಹಸೀಲ್ದಾರ್ ಮಂಗಳಾ ಉದ್ಘಾಟಿಸಲಿದ್ದಾರೆ. ದಲಿತ ಹಿರಿಯ ಮುಖಂಡ ಮಡಿವಾಳಪ್ಪ ಗ್ಯಾಂಗಮ್ಯಾನ್ ಹುಣಸಗಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಹುಣಸಗಿ ದಲಿತ ಮುಖಂಡ ಮಲ್ಲಪ್ಪ ಕಟ್ಟಿಮನಿ, ಅಲೆಮಾರಿ ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ, ಮಾದಿಗ ದಂಡೋರ ರಾಜ್ಯಾಧ್ಯಕ್ಷ ಬಿ.ನರಸಪ್ಪ, ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ ಪಿ.ಕನ್ನೇಳ್ಳಿ, ಹಿರಿಯ ವಕೀಲ ಯಲ್ಲಪ್ಪ ಹುಲಿಕಲ್, ನಿವೃತ್ತಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಲ್ಲಣ್ಣ ದೊಡ್ಡಮನಿ ವಜ್ಜಲ, ಸುರಪುರ ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ ನಿಂಬೂರ, ಗಣಿತ ಶಾಸ್ತ್ರ ಉಪಾನ್ಯಾಸಕ ಭೀಮಣ್ಣ ಎಸ್. ಪೀರಾಪೂರ, ಡಾ. ರಮೇಶ ನಡುವಿನಮನಿ ಅರಕೇರಾ, ವಡಗೇರಾ ಪಿಎಸ್ಐ ಅಯ್ಯಪ್ಪ, ಪಿಎಸ್ಐ ವೀರಭದ್ರಪ್ಪ ಗೆದ್ದಲಮರಿ, ನಿವೃತ್ತ ಬಿ.ಸಿ.ಎಮ್ ತಾಲೂಕ ಅಧಿಕಾರಿ ಶಾಂತಪ್ಪ ಹಗರಟಗಿ, ಯಾದಗಿರಿ ನಗರಸಭೆ ಮಾಜಿ ಸದಸ್ಯ ಗಣೇಶ ದುಪ್ಪಲ್ಲಿ, ಅಂಬಪ್ಪ ಹಳ್ಳಿ, ಶಿವಪ್ಪ ಹಳಿಮನಿ ಸದಬ, ಪ.ಪಂ. ಸದಸ್ಯೆ ಭೀಮವ್ವ ಕಡಿಮನಿ ಇನ್ನಿತರರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಯು.ಪಿ.ಎಸ್.ಸಿ ಸಾಧಕಿ ಡಾ. ಕು. ನಿವೇದಿತಾ ಭಾವಿಮನಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ವಿಶೇಷ ಸನ್ಮಾನ ನೇರವೇರಿಸಲಾಗುವದು.ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಪ್ರಶಾಂತ ದಾನಪ್ಪ ನಿಲೋಗಲ್ ಮಸ್ಕಿ ಆಗಮಿಸಲಿದ್ದಾರೆ.
-21ವೈಡಿಆರ್5 : ಸಿದ್ದು ಭಾವಿಮನಿ, ಹುಣಸಗಿ