ಸಾರಾಂಶ
ಹೊಸಪೇಟೆ: ಮಾದಿಗ ಸಮಾಜ ಬಾಂಧವರು ಆದಿ ಕರ್ನಾಟಕ, ಹರಿಜನ, ಮಾದಿಗ ಎಂದು ಜಾತಿ ಪ್ರಮಾಣಪತ್ರ ಪಡೆದಿದ್ದು, ದತ್ತಾಂಶ ನೀಡುವಾಗ ಇವರೆಲ್ಲರೂ ಮಾದಿಗ ಸಮಾಜಕ್ಕೆ ಸೇರಿದವರು ಎಂದು ದಾಖಲಿಸಿ ದೃಢೀಕರಣ ಪ್ರಮಾಣಪತ್ರ ನೀಡಬೇಕು ಎಂದು ವಿಜಯನಗರ ಜಿಲ್ಲಾ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರನ್ನು ಬುಧವಾರ ಒತ್ತಾಯಿಸಿದರು.ವಿಜಯನಗರ ಜಿಲ್ಲಾದ್ಯಂತ ಮಾದಿಗ ಸಮಾಜದವರಿಗೆ ಜಾತಿ ಪ್ರಮಾಣ ಪತ್ರವನ್ನು ಆದಿ ಕರ್ನಾಟಕ, ಹರಿಜನ, ಮಾದಿಗ ಎಂದು ನೀಡಲಾಗುತ್ತಿದೆ. ಹಾಗಾಗಿ, ಈ ಪ್ರಮಾಣಪತ್ರ ಪಡೆದವರು ಎಲ್ಲರೂ ಮಾದಿಗ ಸಮಾಜಕ್ಕೆ ಸೇರಿದವರು ಎಂದು ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗಕ್ಕೆ ದತ್ತಾಂಶ ಸಲ್ಲಿಕೆ ಮಾಡುವಾಗ ದೃಢೀಕರಣ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಅಧಿಕಾರಿ, ನೌಕರರ ಹಾಗೂ ಫಲಾನುಭವಿಗಳ ಉಪಜಾತಿಯ ಮಾಹಿತಿಯನ್ನು ಆದಷ್ಟು ಬೇಗ ಸರ್ಕಾರಕ್ಕೆ ಸಲ್ಲಿಸಬೇಕು. ಆಯೋಗಕ್ಕೆ ದತ್ತಾಂಶ ಮಾಹಿತಿ ಶೀಘ್ರ ಸಲ್ಲಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಗೌರಾವಾಧ್ಯಕ್ಷ ಎಂ.ಸಿ. ವೀರಸ್ವಾಮಿ, ಕಾರ್ಯಾಧ್ಯಕ್ಷ ಬಿ.ಮಾರೆಣ್ಣ, ಉಪಾಧ್ಯಕ್ಷ ಸೇಲ್ವಂ, ಕಾರ್ಯದರ್ಶಿ ವೆಂಕಟೇಶಲು, ಮಾದಿಗ ಸಮಾಜದ ಮುಖಂಡರಾದ ಎ. ಬಸವರಾಜ, ಶೇಷು, ಶ್ರೀನಿವಾಸ್, ಹನುಮಂತಪ್ಪ, ಮರಿದಾಸ, ಎಚ್.ಬಿ. ಶ್ರೀನಿವಾಸ್, ಭರತ್ ಕುಮಾರ್ ಸಿ.ಆರ್., ವಿಜಯ್ ಕುಮಾರ್, ಶೇಕ್ಷಾವಲಿ, ಪಂಪಾಪತಿ, ಅಂಜಿನಿ, ಸಣ್ಣ ಈರಣ್ಣ, ಬಂದೇಣ್ಣ, ನಾಗರಾಜ, ಹನುಮೇಶ, ಯರಿಸ್ವಾಮ, ,ಹನುಮಂತಪ್ಪ,ಹೊನ್ನುರಸ್ವಾಮಿ, ದುರುಗಪ್ಪ ಮತ್ತಿತರರಿದ್ದರು.