ಸಾರಾಂಶ
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಜಾರಿಗೆ ಒತ್ತಾಯಿಸಿ ಮಾದಿಗರ ಮಹಾಯುದ್ಧ ಬೃಹತ್ ಸಮಾವೇಶವನ್ನು ಬರುವ ಆ.18 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದು, ಈ ಹೋರಾಟಕ್ಕೆ ಪದ್ಮಶ್ರೀ ಮಂದಕೃಷ್ಣ ಮಾದಿಗ ಅವರು ಭಾಗವಹಿಸಲಿದ್ದಾರೆ ಎಂದು ಮಾದಿಗ ದಂಡೋರ (ಮಾದಿಗ ಮೀಸಲಾತಿ ಹೊರಾಟ ಸಮಿತಿ) ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಜಾರಿಗೆ ಒತ್ತಾಯಿಸಿ ಮಾದಿಗರ ಮಹಾಯುದ್ಧ ಬೃಹತ್ ಸಮಾವೇಶವನ್ನು ಬರುವ ಆ.18 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದು, ಈ ಹೋರಾಟಕ್ಕೆ ಪದ್ಮಶ್ರೀ ಮಂದಕೃಷ್ಣ ಮಾದಿಗ ಅವರು ಭಾಗವಹಿಸಲಿದ್ದಾರೆ ಎಂದು ಮಾದಿಗ ದಂಡೋರ (ಮಾದಿಗ ಮೀಸಲಾತಿ ಹೊರಾಟ ಸಮಿತಿ) ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ದಶಕಗಳಿಂದ ಒಳ ಮೀಸಲಾತಿ ಹೋರಾಟವನ್ನು ನಡೆಸುತ್ತಾ ಬರಲಾಗಿದ್ದು, ಅದರ ಫಲವಾಗಿ ಕಳೆದ ಆ.1ರಂದು ಸುಪ್ರೀಂ ಕೋರ್ಟ್ ಆಯಾ ರಾಜ್ಯಗಳು ಎಸ್ಸಿಗಳಿಗೆ ಒಳಮೀಸಲು ಕಲ್ಪಿಸಬಹುದು ಎನ್ನುವ ಆದೇಶ ಹೊರಡಿಸಿದೆ ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷದ ಹಿರಿಯ ಮುಖಂಡರು, ಸಚಿವರು ಒಳ ಮೀಸಲಾತಿ ಜಾರಿಯಾಗದಂತೆ ಷಡ್ಯಂತ್ರ ರೂಪಿಸುತ್ತಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ ದಾಸ್ ಆಯೋಗ ಜೂನ್ 30ರಂದೇ ರಾಜ್ಯದಲ್ಲಿ ಮಾಡಿದ ಸಂಪೂರ್ಣ ಸಮೀಕ್ಷೆ ಮುಗಿಸಿ ತಿಂಗಳಾದರೂ ವರದಿ ಸರ್ಕಾರ ಪಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಳೆಗಾಲ ಅಧಿವೇಶನ ಮುಕ್ತಾಯವಾಗುವ ಮುಂಚಿತವಾಗಿಯೇ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಜಾರಿ ಆಗ್ರಹಿಸಿ ಈ ಬೃಹತ್ ಹೋರಾಟದ ಮುಖಾಂತರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಂಡೋರಾದ ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರೀ,ತಾಲೂಕಾಧ್ಯಕ್ಷ ದುಳ್ಳಯ್ಯ ಗುಂಜಳ್ಳಿ, ಮುಖಂಡರಾದ ಸುರೇಶ ದುಗನೂರು,ರಂಜೀತ್ ದಂಡೋರ, ಗೋವಿಂದ ಈಟೇಕರ, ಜಕ್ರಪ್ಪ ಹಂಚಿನಾಳ,ಹನುಮಂತ ಜುಲಮಗೇರಾ,ಭೀಮೇಶ ತುಂಟಾಪುರ,ನರಸಿಂಹ, ದಾವೀಡ ಸೇರಿ ಇತರರು ಇದ್ದರು.