ಸಾರಾಂಶ
ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆ ವತಿಯಿಂದ ನಾಲ್ವರು ಶಿಕ್ಷಕರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಡಿಕೇರಿ : ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆ ವತಿಯಿಂದ ನಾಲ್ವರು ಶಿಕ್ಷಕರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಭಾಗಮಂಡಲ ಕೆ.ವಿ.ಜಿ.ಐಟಿಐನ ಪದ್ಮಕುಮಾರ್ ರೈ, ನಾಪೋಕ್ಲು ಪಬ್ಲಿಕ್ ಶಾಲೆಯ ಉಷಾರಾಣಿ, ಪೆರಾಜೆ ಅಮೆಚೂರು ಪ್ರಾಥಮಿಕ ಶಾಲೆಯ ಲಾಲಿ ಮತ್ತು ಚೇರಂಬಾಣೆಯ ಅರುಣಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಅವರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೋಟರಿ ಅಸಿಸ್ಟೆಂಟ್ ಗವರ್ನರ್ ದೇವಣಿರ ಕಿರಣ್, ನೆಶನ್ ಬಿಲ್ಡರ್ ಪ್ರಶಸ್ತಿಯ ಇತಿಹಾಸ ಮತ್ತು ಮಹತ್ವವನ್ನು ವಿವರಿಸಿದರು.
ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ವುಡ್ಸ್ ಸಂಸ್ಥೆಯ ಪ್ರಮುಖ ಕಾರ್ಯಕ್ರಮಗಳನ್ನು ಶ್ಲಾಘಿಸುವ ಜೊತೆಗೆ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರಿಗೆ ಅಭಿನಂದನೆಗಳನ್ನು ತಿಳಿಸಿದರು.
ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲ್ ಮಾತನಾಡಿ, ಅರ್ಹ ಶಿಕ್ಷಕರನ್ನು ಹುಡುಕಿ ರೋಟರಿ ವುಡ್ಸ್ ವತಿಯಿಂದ ಗೌರವಿಸಲಾಗಿದೆ ಎಂದರು.
ಕ್ಲಬ್ ಕಾರ್ಯದರ್ಶಿ ಕಿರಣ್ ಕುಂದರ್, ಸದಸ್ಯರಾದ ಪ್ರವೀಣ್, ರವಿಕುಮಾರ್, ಪ್ರಮಿಳಾ ಶೆಟ್ಟಿ, ವಸಂತ್ ಕುಮಾರ್, ರಂಜಿತ್ ಕಿಗ್ಗಾಲ್, ಪ್ರದೀಪ್ ಕಿಗ್ಗಾಲ್, ದಿವಾಕರ್, ರವಿ ಪಿ.,ವಿಶಾಲಾಕ್ಷಿ, ಪದ್ಮಾ ಗಿರಿ ಜಹೀರ್ ಅಹ್ಮದ್, ಬೋಪಣ್ಣ ಭಾಗವಹಿಸಿದ್ದರು.
ಕ್ಲಬ್ ನ ಶಿಕ್ಷಕರ ದಿನಾಚರಣೆಯ ಪೋಸ್ಟರನ್ನು ಅಸಿಸ್ಟೆಂಟ್ ಗವರ್ನರ್ ದೇವಣಿರ ಕಿರಣ್ ಬಿಡುಗಡೆಗೊಳಿಸಿದರು.
;Resize=(128,128))
;Resize=(128,128))