ಮಡಿಕೇರಿ ದಸರಾಜನೋತ್ಸವದಲ್ಲಿ ಅ.13 ಮತ್ತು 14 ರಂದು 3 ನೇ ವರ್ಷದ ಕಾಫಿ ದಸರಾ ಆಯೋಜಿತವಾಗಿದ್ದು ಕಾಫಿಗೆ ಸಂಬಂದಿಸಿದ ವೈವಿಧ್ಯಮಯ 50 ಮಳಿಗೆಗಳು ಮೇಳೈಸಲಿವೆ. ಕಾಫಿ ದಸರಾದಲ್ಲಿ 13 ಸಾಧಕ ಕೃಷಿಕರಿಗೆ ಗೌರವ ಸನ್ಮಾನ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ದಸರಾಜನೋತ್ಸವದಲ್ಲಿ ಅ.13 ಮತ್ತು 14 ರಂದು 3 ನೇ ವರ್ಷದ ಕಾಫಿ ದಸರಾ ಆಯೋಜಿತವಾಗಿದ್ದು ಕಾಫಿಗೆ ಸಂಬಂದಿಸಿದ ವೈವಿಧ್ಯಮಯ 50 ಮಳಿಗೆಗಳು ಮೇಳೈಸಲಿವೆ. ಕಾಫಿ ದಸರಾದಲ್ಲಿ 13 ಸಾಧಕ ಕೃಷಿಕರಿಗೆ ಗೌರವ ಸನ್ಮಾನ ನಡೆಯಲಿದೆ.ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಪರಿಕಲ್ಪನೆಯಲ್ಲಿ ಕೂರ್ಗ್ ಕಾಫಿ ಪ್ಲಾಂಟರ್ಸ್ಅಸೋಸಿಯೇಷನ್ ಸಹಯೋಗದಲ್ಲಿ ಮಡಿಕೇರಿ ದಸರಾ ಪ್ರಯುಕ್ತ 3 ನೇ ವರ್ಷಕೂಡ ಕಾಫಿ ದಸರಾವು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿಸಲ್ಪಟ್ಟಿದೆ. ಮಂಗಳವಾರ ಸಂಜೆ 4 ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಕಾಫಿ ಸಂಬಂಧಿತ 50 ಮಳಿಗೆಗಳನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಲಿದ್ದಾರೆ.ಬುಧವಾರ ಬೆಳಗ್ಗೆ 10 ಗಂಟೆಗೆ ಕಲಾಸಂಭ್ರಮ ಸಭಾಂಗಣದಲ್ಲಿ ಕರ್ನಾಟಕದ ಮೊದಲ ಮಹಿಳಾ ಕಾಫಿ ಉದ್ಯಮಿ ದಿ.ಸಾಕಮ್ಮ ವೇದಿಕೆಯಲ್ಲಿ ಕಾಫಿ ದಸರಾ ಸಭಾ ಕಾರ್ಯಕ್ರಮವನ್ನು. ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್‌ ಉದ್ಘಾಟಿಸಲಿದ್ದಾರೆ.ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಅಧ್ಯಕ್ಷತೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್‌ ಕೃಷ್ಣದತ್ತ ಒಡೆಯರ್, ಭಾರತೀಯ ಕಾಫಿ ಮಂಡಳಿ ಕಾರ್ಯದರ್ಶಿ ಕೂರ್ಮಾರಾವ್, ರಾಜ್ಯಸಭಾ ಸದಸ್ಯ ಅಜಯ್‌ಮಖಾನ್ ವಿಧಾನಪರಿಷತ್‌ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ, ಬೋಜೇಗೌಡ, ಡಾ.ಧನಂಜಯ್ ಸರ್ಜಿ, ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್. ಆರ್. ಮೆಹರೋಜ್‌ಖಾನ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್ ಅರುಣ್ ಮಾಚಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಕೊಡಗು ಜಿಲ್ಲಾಧಿಕಾರಿ ಎಸ್.ಜಿ.ಸೋಮಶೇಖರ್, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಕೊಡಗು ಜಿಲ್ಲಾ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್, ಕೂರ್ಗ್‌ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಾರ್ಯಪ್ಪ, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್‌ ಕುಮಾರ್, ಮಡಿಕೇರಿ ನಗರಸಭೆ ಉಪಾಧ್ಯಕ್ಷ ಮಹೇಶ್‌ಜೈನಿ, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಉಪಸ್ಥಿತರಿರುತ್ತಾರೆ. ಮಧ್ಯಾಹ್ನ 11 ಗಂಟೆಯಿಂದ ಆಯೋಜಿತ ಕಾಫಿ ಕೃಷಿ ಸಂಬಂಧಿತ ವಿವಿಧ ವಿಚಾರಗೋಷ್ಠಿ ಮತ್ತು ಸಂವಾದದಲ್ಲಿ ಕಾಫಿ, ನಿಸರ್ಗ ಮತ್ತು ಪ್ರವಾಸೋದ್ಯಮ ಕುರಿತಂತೆ ವಿರಾಜಪೇಟೆ ಪ್ರವಾಸೋದ್ಯಮಿ ಭಜನ್ ಬೋಪಣ್ಣ, ಕೃಷಿಕರ ಆತಂಕಕ್ಕೆ ಕಾರಣವಾಗಿರುವ ಇ .ಯು. ಡಿ ಆರ್. ಮತ್ತು ಇಂಡಿಕಾಫ್‌ ಕುರಿತಂತೆ ಬೆಂಗಳೂರಿನ ಭಾರತೀಯ ಕಾಫಿ ಮಂಡಳಿ ಸಂಶೋಧನಾ ವಿಭಾಗದ ಸಹಾಯಕ ನಿರ್ದೇಶಕ ಡಾ.. ಪ್ರದೀಪ್ ಬಾಬು, ಕೊಡಗು ಕಾಫಿ ಗುಣಮಟ್ಟ ಮತ್ತು ಮಹತ್ವದ ಕುರಿತಾಗಿ ಚಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಡಾ. ರಶ್ಮಿ ಹಾಗೂ ಕಾಫಿ ಕೆಫೆ ಭವಿಷ್ಯದ ಕುರಿತಂತೆ ಹಟ್ಟಿಕಾಫಿ ಸಂಸ್ಥೆಯ ಯತೀಶನ್ ಮಾಹಿತಿ ನೀಡಲಿದ್ದಾರೆ.ಕಾಫಿ ದಸರಾ ಕೃಷಿ ಸಾಧಕರು-ಮಧ್ಯಾಹ್ನ 12.30 ಗಂಟೆಗೆ ಕಲಾಸಂಭ್ರಮ ಸಭಾಂಗಣದ ಸಾಕಮ್ಮ ವೇದಿಕೆಯಲ್ಲಿ, ಜಿಲ್ಲೆಯಾದ್ಯಂತಲಿನ ಕಾಫಿ ಕೃಷಿ ಸಾಧಕರಾದ 13 ಕೃಷಿಕರಿಗೆ ಸನ್ಮಾನ ನೆರವೇರಲಿದೆ.ಚೆಯ್ಯಂಡಾಣೆಯ ಮಕ್ಕಿಮನೆ ಸುಧೀರ್, ಬಗ್ಗನಮನೆ ಸುರೇಂದ್ರ, ಸೋಮವಾರಪೇಟೆಯ ಉದಯ್‌ಈಶ್ವರನ್, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ, ಕಾಫಿ ತಜ್ಞ ಮಡಿಕೇರಿಯ ಕೆ.ಕೆ. ವಿಶ್ವನಾಥ್, ಕಾಫಿ ಪಲ್ಪಿಂಗ್ ನಲ್ಲಿ ಸಹಕಾರ ತತ್ವ ಅಳವಡಿಸಿಕೊಂಡ ತಾಕೇರಿಯ ಕೃಷಿ ಸ್ವಸಹಾಯ ಸಂಘ, ಮಣಜೂರಿನ ಶೇಷಪ್ಪ, ಕಾಫಿ ಬ್ಲಾಗರ್ ಪಟ್ಟಡ ಕಾರ್ತಿಕ್, ನಾಕೂರು ಶಿರಂಗಾಲದ ಪಿ.ಎಂ.ಬಿಜು, ಸುಂಟಿಕೊಪ್ಪ ಪನ್ಯತೋಟದ ಎಸ್.ಬಿ.ಜಯರಾಜ್, ಕೊಡ್ಲಿಪೇಟೆಯ ಕೃಷಿಕ ಮಹಮ್ಮದ್‌ರಾಝ ನೆಲ್ಯಹುದಿಕೇರಿಯ ಇ.ಹೆಚ್.ಹನೀಫ ಹಾಗೂ ನಾವಿನ್ಯತೆಯ ಕೆಫೆಗಾಗಿ ಮಡಿಕೇರಿಯ ವೀಲ್‌ಕೆಫೆ ಈ ಬಾರಿಯಕಾಫಿ ದಸರಾ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಕಾಫಿ ದಸರಾ ವಿಶೇಷವಾಗಿ ಅ. 13 ರಂದು ಸಂಜೆ 6 ಗಂಟೆಗೆ ಕಲಾಸಂಭ್ರಮ ವೇದಿಕೆಯಲ್ಲಿ ಮಡಿಕೇರಿ ನಗರದ ಸ್ವಚ್ಛತೆ ಕಾಪಾಡುವ ನಗರದ 68 ಪೌರಕಾರ್ಮಿಕರನ್ನು ಶಾಸಕ ಡಾ. ಮಂತರ್‌ಗೌಡ ಸನ್ಮಾನಿಸಿ ಪುರಸ್ಕರಿಸಲಿದ್ದಾರೆ.

ಭಾರತದ ಕಾಫಿ ಉತ್ಪಾದನೆಯಲ್ಲಿ ಕೊಡಗಿನ ಪಾಲು ದೊಡ್ಡದಿದೆ. ಇದರಿಂದಾಗಿ ಮಡಿಕೇರಿ ದಸರಾದಲ್ಲಿ ಕಾಫಿ ದಸರಾ ಎಂಬ ವಿನೂತನ ಪ್ರಯತ್ನ ಮಾಡಲಾಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಕಾಫಿ ದಸರಾದಲ್ಲಿ ಕಾಫಿ ಕೃಷಿ ಸಂಬಂಧಿಸಿದ ಮಳಿಗೆಗಳು, ಕೃಷಿ ಮಾಹಿತಿಗಳು, ವಿಚಾರಗೋಷ್ಠಿಗಳು, ಸಾಧಕರಿಗೆ ಸನ್ಮಾನ ಸೇರಿ ಹಲವು ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಕಾಫಿ ಬೆಳೆಗಾರರು ಸೇರಿದಂತೆ ಕಾಫಿ ಪ್ರೇಮಿಗಳು ಈ ಕಾಫಿ ದಸರಾದಲ್ಲಿ ಪಾಲ್ಗೊಳ್ಳಬೇಕು.

-ಡಾ. ಮಂತರ್ ಗೌಡ, ಮಡಿಕೇರಿ ಶಾಸಕ.