ಮಡಿಕೇರಿ: ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡಾಕೂಟ ಬಿಡ್ಡಿಂಗ್‌

| Published : Feb 24 2024, 02:33 AM IST

ಸಾರಾಂಶ

ಕೊಡಗು ಗೌಡ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಎರಡನೇ ವರ್ಷದ 10 ಕುಟುಂಬ 18 ಗೋತ್ರದ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಎರಡು ಹಂತಗಳಲ್ಲಿ ಬಿಡ್ಡಿಂಗ್ ನಡೆಸಲಾಯಿತು. ಏಪ್ರಿಲ್ 18 ರಿಂದ 28 ರವರೆಗೆ ನಡೆಯುವ ಕ್ರೀಡಾಕೂಟದಲ್ಲಿ ಹತ್ತು ಫ್ರಾಂಚೈಸಿಗಳ 150 ಆಟಗಾರರು ಮುಖಾಮುಖಿಯಾಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಗೌಡ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಎರಡನೇ ವರ್ಷದ 10 ಕುಟುಂಬ 18 ಗೋತ್ರದ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಕ್ರೀಡಾಕೂಟದ ಬಿಡ್ಡಿಂಗ್ ಪ್ರಕ್ರಿಯೆ ಶುಕ್ರವಾರ ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಉದ್ಘಾಟಿಸಿ ಮಾತನಾಡಿ, ಇಂತಹ ಕ್ರೀಡಾಕೂಟಗಳ ಮೂಲಕ ಜನಾಂಗದ ಆಸಕ್ತ ಕಿರಿಯರಿಗೆ ವೃತ್ತಿಪರವಾಗಿ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ ಎಂದರು. ಗೌಡ ಸಮಾಜದ ಖಜಾಂಚಿ ಕುಯ್ಯುಮುಡಿ ವಸಂತ್, ಯುವ ವೇದಿಕೆ ಸ್ಥಾಪಕ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ವೇದಿಕೆಯ ಕಾನೂನು ಸಮಿತಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ್, ಬಿಡ್ಡಿಂಗ್ ನಿರ್ವಾಹಕರಾಗಿ ಕಟ್ಟೆಮನೆ ಸೋನಾಜಿತ್ ಇದ್ದರು. ಪಾಣತ್ತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಪುದಿಯನೆರವನ ರಿಶೀತ್ ಸ್ವಾಗತಿಸಿದರು. ದೇರಳ ನವೀನ್ ವಂದಿಸಿದರು‌. ಕೆದಂಬಾಡಿ ಕಾಂಚನ ಗೌಡ ಪ್ರಾರ್ಥಿಸಿದರು. ಪರಿಚನ ಸತೀಶ್ ನಿರೂಪಿಸಿದರು.

10 ಫ್ರಾಂಚೈಸಿಗಳು: ನಂತರ 10 ಫ್ರಾಂಚೈಸಿಗಳಿಗೆ 180 ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು. ಪೊನ್ನಚ್ಚನ ಮಧುಸೂದನ್, ಬಳಪದ ರೋಶನ್, ಯಶ್ ದೋಳ್ಪಾಡಿ ಮಾಲೀಕತ್ವದ ಕಾಫಿ ಕ್ರಿಕೆಟರ್ಸ್, ರಾಮಣ್ಣ ಸಿದ್ಲಿಂಗಪುರ ಮಾಲೀಕತ್ವದ ಜಿ ಕಿಂಗ್ಸ್ ಸಿದ್ಲಿಂಗಪುರ, ಎಡಿಕೇರಿ ಪ್ರಸನ್ನ ಮಾಲೀಕತ್ವದ ದಿ ಇಲೈಟ್ ಕ್ರಿಕೆಟ್ ಕ್ಲಬ್, ಚೆದುಕಾರ್ ಚೇತನ್ ಮತ್ತು ಎಡಿಕೇರಿ ಪ್ರಸನ್ನ ಮಾಲೀಕತ್ವದ ದಿ ಇಲೈಟ್ ಸ್ಕ್ವಾಡ್, ಕೇಕಡ ದೀಪಕ್, ಭವಿಷ್ ಚೆಟ್ಟಿಮಾಡ, ಕಪಿಲ್ ದುಗ್ಗಳ, ಮಂದ್ರೀರ ಪ್ರತೀಕ್ ಮಾಲೀಕತ್ವದಲ್ಲಿ ಕೂರ್ಗ್ ಹಾಕ್ಸ್, ಡಾ. ಕುಶ್ವಂತ್ ಕೋಳಿಬೈಲು ಮಾಲೀಕತ್ವದ ಮಡಿಕೇರಿ ಚಾಂಪಿಯನ್ ಬಾವಾಸ್ (ಎಂಸಿಬಿ), ಬೇಕಲ್ ದೇವರಾಜ್, ಬೇಕಲ್ ಚಂದನ್ ರಾಜ್ ಮತ್ತು ಬೈಮನ ಹೇಮಂತ್ ಮಾಲೀಕತ್ವದ ಫೀನಿಕ್ಸ್ ಫ್ಲೈಯರ್ಸ್, ಕೇಚಪ್ಪನ ಕುಜಲ್ ಕಾರ್ಯಪ್ಪ, ಅಚ್ಚಾಂಡಿರ ಮೊಣ್ಣಪ್ಪ, ಚಂಡೀರ ಭರತ್, ಕುಡಕಂಡಿ ಪುನೀತ್ ಮಾಲೀಕತ್ವದ ಕೂರ್ಗ್ ವಾರಿಯರ್ಸ್, ಪೂಳಕಂಡ್ರ ಸಂದೀಪ್, ಬೈಮನ ಶರ್ವಿನ್ ಮಾಲೀಕತ್ವದ ದಿ ಮರಗೋಡಿಯನ್ಸ್ ಮತ್ತು ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ಫ್ರಾಂಚೈಸಿಗಳು ಬಿಡ್ಡಿಂಗಿನಲ್ಲಿ ಭಾಗವಹಿಸಿದವು.

ಎರಡು ಹಂತಗಳಲ್ಲಿ ಬಿಡ್ಡಿಂಗ್ ನಡೆಸಲಾಯಿತು. ಏಪ್ರಿಲ್ 18 ರಿಂದ 28 ರವರೆಗೆ ನಡೆಯುವ ಕ್ರೀಡಾಕೂಟದಲ್ಲಿ ಹತ್ತು ಫ್ರಾಂಚೈಸಿಗಳ 150 ಆಟಗಾರರು ಮುಖಾಮುಖಿಯಾಗಲಿದ್ದಾರೆ.