ಮಡಿಕೇರಿ ಲಯನ್ಸ್ ಸಂಸ್ಥೆ ನೂತನ ಪದಾಧಿಕಾರಿಗಳ ಪದಗ್ರಹಣ

| Published : Jul 21 2024, 01:16 AM IST

ಮಡಿಕೇರಿ ಲಯನ್ಸ್ ಸಂಸ್ಥೆ ನೂತನ ಪದಾಧಿಕಾರಿಗಳ ಪದಗ್ರಹಣ
Share this Article
  • FB
  • TW
  • Linkdin
  • Email

ಸಾರಾಂಶ

ಲಯನ್ಸ್‌ ಸಂಸ್ಥೆ ಸಮಾಜಮುಖಿ ಕಾರ್ಯಗಳನ್ನು ನಿರಂತರ ಮಾಡುತ್ತಾ ಬಂದಿದೆ. ಲಯನ್ಸ್‌ನ ಮುಖ್ಯ ಗುರಿ ಸೇವೆ ಮತ್ತು ಸಾಂಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ಲಯನ್ಸ್ ಸಂಸ್ಥೆಯ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಲಯನ್ಸ್ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ನಟರಾಜು ಕೆಸ್ತೂರು ಎಂಜೆಎಫ್, ಕಾರ್ಯದರ್ಶಿ ಮದನ್ ಮಾದಯ್ಯ ಹಾಗೂ ಕೋಶಾಧಿಕಾರಿಯಾಗಿ ಸೋಮಣ್ಣ ಪಿ.ಪಿ ಎಂಜೆಎಫ್ ಅಧಿಕಾರ ಸ್ವೀಕರಿಸಿದರು. ನಿರ್ದೇಶಕರಾಗಿ ನಿರಂಜನ್ ಎಂ.ಎ, ಮೋಹನ್ ಕುಮಾರ್ ಎಂಜೆ ಎಫ್, ಜೆ.ವಿ.ಕೋಟಿ, ಮುರುಗೇಶ್, ಚಾಮ, ಸಂತೋಷ್ ಅಣ್ವೇಕರ್, ಗೀತಾ ಮಧುಕರ್, ಉಮೇಶ್ ನಾಯಕ್, ರಾಗ ಪ್ರಕೃತಿ, ಕನ್ನಂಡ ಕವಿತಾ, ಅನಿತಾ ಸೋಮಣ್ಣ, ಸಂಜಯ್ ಎಚ್. ಎಲ್. ಹಾಗೂ ನಾಗೇಂದ್ರ ಸೇರ್ಪಡೆಗೊಂಡರು.

ಲಯನ್ಸ್ ಸಂಸ್ಥೆಯ ಮಾಜಿ ರಾಜ್ಯಪಾಲ ಹಾಗೂ ಇಮಿಡಿಯೆಟ್ ಮಲ್ಟಿಪಲ್ ಕೌನ್ಸಿಲ್ ಛೇರ್ಮನ್ ಲಯನ್ ವಸಂತ್ ಕುಮಾರ್ ಶೆಟ್ಟಿ ಪಿಎಂಜೆಎಫ್ ಪದಗ್ರಹಣ ನೆರವೇರಿಸಿಕೊಟ್ಟರು.

ನಂತರ ಮಾತನಾಡಿದ ಅವರು ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ಹಲವು ಕಡೆ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಲಯನ್ಸ್ ನ ಮುಖ್ಯ ಗುರಿ ಸೇವೆ ಮತ್ತು ಸಾಂಗತ್ಯವಾಗಿದೆ. ಮುಂದಿನ ಎರಡು ವರ್ಷದಲ್ಲಿ 1.5 ಮಿಲಿಯನ್ ಸದಸ್ಯತ್ವದ ಗುರಿ ಹೊಂದಿದೆ. ಮಡಿಕೇರಿ ಲಯನ್ಸ್ ಸಂಸ್ಥೆ ಕಳೆದ 59 ವರ್ಷಗಳಿಂದ ಬಡವರ ಹಾಗೂ ಸಾರ್ವಜನಿಕರ ಜನಪರ ಸೇವೆಯನ್ನು ಮಾಡಿಕೊಂಡು ಬಂದಿದೆ ಎಂದರು.

ನೂತನ ಅಧ್ಯಕ್ಷ ನಟರಾಜು ಕೆಸ್ತೂರು ಅವರು ಮಾತನಾಡಿ, ಲಯನ್ಸ್ ಕುಟುಂಬದ ಸಹಕಾರದಿಂದ ನಾನು ಈ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ಮುಂಬರುವ ದಿನಗಳ ಕಾರ್ಯ ಚಟುವಟಿಕೆಗಳಿಗೆ ಸರ್ವ ಸದಸ್ಯರ ಸಂಪೂರ್ಣ ಬೆಂಬಲ ಬೇಕು ಎಂದು ಮನವಿ ಮಾಡಿದರು.

ನಿರ್ಗಮಿತ ಅಧ್ಯಕ್ಷ ಲಯನ್ ಮಧುಕರ್ ಶೇಟ್ ಮಾತನಾಡಿ, ಕಳೆದ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ಸೇವೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ಅನುವು ಮಾಡಿಕೊಟ್ಟ ಪ್ರತಿಯೊಬ್ಬ ಸದಸ್ಯರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

2023-24 ರಲ್ಲಿ ಉತ್ತಮ ಸೇವೆಗಾಗಿ ಲಯನ್ಸ್ ಜಿಲ್ಲೆ 317ಡಿ ನಿಂದ ದೊರೆತ ಪ್ರಶಸ್ತಿಯನ್ನು ಪ್ರಾಂತೀಯ ಮಾಜಿ ಅಧ್ಯಕ್ಷ ನವೀನ್ ಅಂಬೆಕಲ್ ಎಂಜೆಎಫ್ ಹಾಗೂ ಮುಖ್ಯ ಅತಿಥಿಗಳು ಸಂಸ್ಥೆಗೆ ಹಸ್ತಾಂತರಿಸಿದರು.

ವೇದಿಕೆಯಲ್ಲಿ ಲಯನ್ಸ್ ಪ್ರಾಂತೀಯ ರಾಯಭಾರಿ ಲಯನ್ ಬಿ.ವಿ.ಮೋಹನ್ ದಾಸ್ ಪಿಎಂಜೆಎಫ್, ಪ್ರಾಂತೀಯ ಅಧ್ಯಕ್ಷ ಕನ್ನಿಕ ಅಯ್ಯಪ್ಪ, ವಲಯಾಧ್ಯಕ್ಷ ಕನ್ನಂಡ ಬೊಳ್ಳಪ್ಪ, ವಲಯಾಧ್ಯಕ್ಷ ಸುಮನ್ ಬಾಲಚಂದ್ರ ಎಂಜಿಎಪ್, ಮಹದೇವಪ್ಪ ಎಂಜೆಎಫ್, ಎಂ.ಬಿ.ರವಿ ಹಾಗೂ ಕೋಶಾಧಿಕಾರಿ ಪಿ.ಪಿ.ಸೋಮಣ್ಣ ಎಂಜೆಎಫ್ ಉಪಸ್ಥಿತರಿದ್ದರು.

ಮಧುಕರ್ ಶೇಟ್ ಸ್ವಾಗತಿಸಿ, ಮುಖ್ಯ ಅತಿಥಿಗಳ ಪರಿಚಯವನ್ನು ಮಧುಕರ್ ಕೆ. ಅವರು ಮಾಡಿದರು. ದಾಮೋದರ್ ಅವರು ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಪ್ರತಿಭಾ ಮಧುಕರ್ ಪ್ರಾರ್ಥಿಸಿ ಲಯನ್ ರಂಜು ವಂದಿಸಿದರು. ಕಿಶೋರ್ ಧ್ವಜ ವಂದನೆ ಹಾಗೂ ಅನಿತಾ ಸೋಮಣ್ಣ ನೀತಿ ಸಂಹಿತೆ ಓದಿದರು.

ಇದೇ ಸಂದರ್ಭ ಲಯನ್ಸ್ ಸಂಸ್ಥೆ ವತಿಯಿಂದ ನಗರದ ಅಶ್ವಿನಿ ಆಸ್ಪತ್ರೆಗೆ 15 ಸಾವಿರ ರೂ. ಮೌಲ್ಯದ 2ವೀಲ್ ಚೇರ್ ಗಳನ್ನು ಕೊಡುಗೆಯಾಗಿ ನೀಡಿದರು.