ಸಾರಾಂಶ
ಮಡಿಕೇರಿ ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಬಜೆಟ್ ಮಂಡನೆ ಹಾಗೂ ಬಜೆಟ್ ಅನುಮೋದನೆ ವಿಶೇಷ ಸಭೆ ಕರೆಯಲಾಗಿತ್ತು. ಒಟ್ಟು ರು.45 ಕೋಟಿ ಮೊತ್ತದ ಬಜೆಟ್ ನಲ್ಲಿ 1.16 ಕೋಟಿ ರುಪಾಯಿ ಉಳಿತಾಯ ನಿರೀಕ್ಷಿಸಲಾಗಿದೆ. ಒಟ್ಟು 34.29 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ ಎಂದು ಬಜೆಟ್ ಮಂಡಿಸಿದ ಅಧ್ಯಕ್ಷೆ ಅನಿತಾ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ನಗರಸಭೆಯ 2024-25ನೇ ಸಾಲಿನ ಬಜೆಟ್ ಶುಕ್ರವಾರ ಮಂಡಿಸಲಾಗಿದ್ದು, 1.16 ಕೋಟಿ ರುಪಾಯಿ ಉಳಿತಾಯ ನಿರೀಕ್ಷಿತ ಬಜೆಟ್‌ನ್ನು ಅಧ್ಯಕ್ಷೆ ಅನಿತಾ ಪೂವಯ್ಯ ಮಂಡಿಸಿದರು.ಮಡಿಕೇರಿ ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಬಜೆಟ್ ಮಂಡನೆ ಹಾಗೂ ಬಜೆಟ್ ಅನುಮೋದನೆ ವಿಶೇಷ ಸಭೆ ಕರೆಯಲಾಗಿತ್ತು.
ಒಟ್ಟು ರು.45 ಕೋಟಿ ಮೊತ್ತದ ಬಜೆಟ್ ನಲ್ಲಿ 1.16 ಕೋಟಿ ರುಪಾಯಿ ಉಳಿತಾಯ ನಿರೀಕ್ಷಿಸಲಾಗಿದೆ. ಒಟ್ಟು 34.29 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷೆ ಅನಿತಾ ತಿಳಿಸಿದರು.ಆಸ್ತಿ ತೆರಿಗೆ ಮತ್ತು ದಂಡದಿಂದ ರು.3.92 ಕೋಟಿ, ನೀರಿನ ಶುಲ್ಕ ಮತ್ತು ಠೇವಣಿ ರು.94 ಲಕ್ಷ, ಮಳಿಗೆಗಳ ಬಾಡಿಗೆ ಮತ್ತು ದಂಡ ರು.11.6 ಕೋಟಿ, ನೌಕರರಿಂದ ವಸೂಲಾತಿ ರು.1.25 ಕೋಟಿ, ಉದ್ದಿಮೆ ಹಾಗೂ ಇತರೆ ಪರವಾನಗಿ ಶುಲ್ಕದಿಂದ ರು.71 ಲಕ್ಷ, ಕಟ್ಟಡ ಪರವಾನಗಿ ಹಾಗೂ ಅಭಿವೃದ್ಧಿ ಶುಲ್ಕದಿಂದ ರು.43.5 ಲಕ್ಷ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಆಡಳಿತ ಪಕ್ಷದವರಿಲ್ಲದೆ ಬಜೆಟ್ ಮಂಡನೆ : 16 ಮಂದಿ ಸದಸ್ಯ ಸ್ಥಾನ ಇದ್ದರೂ ಕೂಡ ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಬಹುತೇಕ ಮಂದಿ ಆಡಳಿತ ಪಕ್ಷದವರಿಲ್ಲದೆ ಮಡಿಕೇರಿ ನಗರಸಭೆಯ ಬಜೆಟ್ ಮಂಡಿಸಿದರು.ನಗರಸಭೆಯ ಆಯುಕ್ತರನ್ನು ವರ್ಗಾವಣೆ ಮಾಡಲು ನಗರಸಭೆಯಿಂದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ಆಯುಕ್ತರು ವರ್ಗಾವಣೆಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಬಹುತೇಕ ಸದಸ್ಯರು ಸಭೆಯಲ್ಲಿ ಇರುವುದಿಲ್ಲ ಎಂದು ಹೊರ ನಡೆದರು.
ಆಡಳಿತ ಪಕ್ಷದ ಸದಸ್ಯರೇ ಇಲ್ಲದೆ ಬಜೆಟ್ ಮಂಡನೆ ಮಾಡುತ್ತಿರುವುದರ ಬಗ್ಗೆ ಎಸ್ ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಟೀಕಿಸಿದರು.