ಮಡಿಕೇರಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ 34 ನೇ ವಾರ್ಷಿಕೋತ್ಸವ

| Published : Dec 05 2024, 12:30 AM IST

ಮಡಿಕೇರಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ 34 ನೇ ವಾರ್ಷಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಶ್ರೀರಾಮಾಂಜನೇಯ ಭಜನಾ ಮಂಡಳಿಯ 34 ನೇ ವಾಷಿ೯ಕೋತ್ಸವ ಅಂಗವಾಗಿ ಅಖಂಡ ಏಕಾಹ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದೇವರ ಆರಾಧನೆಯ ಪ್ರಮುಖ ಅಂಗವಾಗಿ ಕಂಗೊಳಿಸಿರುವ ಭಜನಾ ಪದ್ಧತಿ ಸಮುದಾಯದ ಒಗ್ಗಟ್ಟಿಗೆ ಸಹಕಾರಿ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಅಭಿಪ್ರಾಯಪಟ್ಟಿದ್ದಾರೆ.

ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಶ್ರೀರಾಮಾಂಜನೇಯ ಭಜನಾ ಮಂಡಳಿಯ 34 ನೇ ವಾಷಿ೯ಕೋತ್ಸವ ಅಂಗವಾಗಿ ಆಯೋಜಿತ ಅಖಂಡ ಏಕಾಹ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದೂ ಸಂಸ್ಕೃತಿಯ ಅತೀ ಮುಖ್ಯ ಪ್ರಾರ್ಥನಾ ವಿಧಾನವಾಗಿರುವ ಭಜನೆ, ದೇವರ ಮೇಲಿನ ಭಕ್ತಿ, ನಂಬಿಕೆಗಳ ಅಭಿವ್ಯಕ್ತಿಯ ದ್ಯೋತಕವಾಗಿ ಪರಿಗಣಿಸಲ್ಪಟ್ಟಿದೆ, ಭಜನೆಯ ಮೂಲಕ ದೇವರಿಗೆ ನಮ್ಮ ಧಾರ್ಮಿಕ ಶ್ರದ್ಧೆ ಸಮರ್ಪಿಸಬಹುದು ಎಂದರು.ಶ್ರೀರಾಮಾಂಜನೇಯ ಭಜನಾ ಮಂಡಳಿ ಸ್ಥಾಪಕರಲ್ಲೊಬ್ಬರಾದ ಡಾ.ಎಂ.ಜಿ. ಪಾಟ್ಕರ್, ಡಾ ಜಯಲಕ್ಷ್ಮಿ ಪಾಟ್ಕರ್ ಅವರನ್ನು ಗೌರವಿಸಲಾಯಿತು.

ಭಜನಾಕಾರರಾದ ವಿಠಲ್ ಭಟ್, ಕುಮಾರಸುಬ್ರಹ್ಮಣ್ಯ, ರಂಜಿತ್ ಜಯರಾಮ್, ರವಿ ಭೂತನಕಾಡು, ಓಂಕಾರ ಯುವ ವೇದಿಕೆಯ ಹೇಮರಾಜ್ ಅವರನ್ನು ಗೌರವಿಸಲಾಯಿತು.

ಅಮೃತ್ ರಾಜ್ ವಾರ್ಷಿಕ ವರದಿ ವಾಚಿಸಿದರು. ಅನಿತಾ ಸುಧಾಕರ್ ನಿರೂಪಿಸಿದರು. ಚಂದ್ರಾವತಿ ವಂದಿಸಿದರು. ಕೆ.ಕೆ.ಮಹೇಶ್‌ ಕುಮಾರ್‌, ಪವನ್ ವಸಿಷ್ಠ, ಕೆ ಕೆ ದಾಮೋದರ್, ಸುನಿತಾ ಮಲ್ಲಿನಾಥ, ಸಂಧ್ಯಾ ನವೀನ್ , ಸುಧಾಕರ್, ಡಿ ಕೆ ಬಾಬೂಜಿ, ಗೌರಮ್ಮ ಮಾದಮ್ಮಯ್ಯ ನಿರ್ವಹಿಸಿದರು.

ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ 16 ತಂಡಗಳಿಂದ ಅಖಂಡ ಏಕಾಹ ಭಜನೆ ನಡೆಯಿತು. ರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಶ್ರೀ ಸತ್ಯಸಾಯಿ ಭಜನಾ ಸಮಿತಿ, ಮಡಿಕೇರಿ ಮೇಘಾ ಭಟ್ ಮತ್ತು ತಂಡ, ಮಡಿಕೇರಿ ಶ್ರೀ ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿ, ಮಡಿಕೇರಿ, ಶ್ರೀ ವಿಜಯ ವಿನಾಯಕ ಭಜನಾ ಮಂಡಳಿ, ಮಡಿಕೇರಿ ಶ್ರೀಸನಾತನ ಭಜನಾ ಮಂಡಳಿ, ಕಗ್ಗೋಡ್ಲು, ಶ್ರೀದೇವಿ ಭಜನಾ ಮಂಡಳಿ ಜೋಡುಪಾಲ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, 2 ನೇ ಮೊಣ್ಣಂಗೇರಿ ಶ್ರೀ ವಿನಾಯಕ ಸೇವಾ ಸಮಿತಿ, ಟ್ರಸ್ಟ್, ಕತ್ತಲೆಕಾಡು, ಶ್ರೀ ಓಂಶಕ್ತಿ ಭಜನಾ ಮಂಡಳಿ, ಭೂತನಕಾಡು ಶ್ರೀ ವಿನಾಯಕ ಸೇವಾ ಸಮಿತಿ, ತೊಂಬತ್ತುಮನೆ, ಶ್ರೀಕೋದಂಡ ರಾಮ ಭಜನಾ ಮಂಡಳಿ, ಮಡಿಕೇ ಇಸ್ಕಾನ್ ತಂಡ ಮಡಿಕೇರಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ದೇವರಕೊಲ್ಲಿ, ಶ್ರೀ ಶೃತಿಲಯ ಭಜನಾ ಮಂಡಳಿ, ಮಡಿಕೇರಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಮಡಿಕೇರಿಯ ಭಜನಾ ತಂಡಗಳು ಪಾಲ್ಗೊಂಡಿದ್ದವು.