ಸಾರಾಂಶ
ಮಡಿಕೇರಿ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಸಮುದಾಯದ ಆಸಕ್ತ ಕ್ರೀಡಾಪಟುಗಳು ಜ.20 ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಹಾಗೂ ಜಿಲ್ಲೆಯ ವಿವಿಧ ಬ್ರಾಹ್ಮಣ ಸಮಾಜಗಳ ಸಹಯೋಗದೊಂದಿಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ದ್ವಿತೀಯ ವರ್ಷದ ‘''''ವಿಪ್ರ ಕ್ರೀಡೋತ್ಸವವನ್ನು’ ಆಯೋಜಿಸುತ್ತಿದ್ದು, ಆಸಕ್ತ ಕ್ರೀಡಾಪಟುಗಳು ತಮ್ಮ ಹೆಸರನ್ನು ನಿಗದಿತ ದಿನಾಂಕದೊಳಗೆ ನೊಂದಾಯಿಸಿಕೊಳ್ಳುವಂತೆ ನಿಧಿಯ ಕ್ರೀಡಾ ಸಮಿತಿಯ ಸಂಚಾಲಕ ಬಿ.ಕೆ.ಅರುಣ್ ಕುಮಾರ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ವಿಪ್ರ ಕ್ರೀಡೋತ್ಸವದ ಭಾಗವಾಗಿ ಫೆ.4 ರಂದು ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಸಮುದಾಯದ ಆಸಕ್ತ ಕ್ರೀಡಾಪಟುಗಳು ಜ.20 ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಶಿವಶಂಕರ್ 9480083272, ಭರತೇಶ್ ಖಂಡಿಗೆ 9448647174 ಇವರನ್ನು ಸಂಪರ್ಕಿಸಬಹುದು ಎಂದರು. ಫೆ.11 ರಂದು ಬೆಳಗ್ಗೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಮಧ್ಯಾಹ್ನ ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಆಸಕ್ತ ತಂಡಗಳು ಹೆಸರನ್ನು ಜ.20 ರ ಒಳಗೆ ನೋಂದಾಯಿಸಿಕೊಳ್ಳಬೇಕಾಗಿದೆ ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಬಿ.ಕೆ. ಅರುಣ್ ಕುಮಾರ್ 9448000446, ಶಿವ ಶಂಕರ್ 9480083272 ಇವರನ್ನು ಸಂಪರ್ಕಿಸುವಂತೆ ತಿಳಿಸಿದರು. ತಾಲೂಕು ಮಟ್ಟದ ವಿಪ್ರ ಕ್ರೀಡಾಕೂಟವು ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಗೋಣಿಕೊಪ್ಪಪದ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ, ಕೈಕೇರಿ ವಿಪ್ರಸಭಾ ಭವನದಿಂದ ಆಯೋಜಿಸುವ ತಾಲೂಕು ಕ್ರೀಡಾ ಕೂಟದ ಮಾಹಿತಿಗಾಗಿ ರಾಘವೇಂದ್ರ ವೈಲಾಯ 9448720515, ಕುಶಾಲನಗರ ರಥ ಬೀದಿಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕ್ರೀಡಾಕೂಟದ ಬಗ್ಗೆ ರಾಜಶೇಖರ 9448074226, ಮಡಿಕೇರಿಯ ಶ್ರೀ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಆಯೋಜಿತವಾಗುವ ತಾಲೂಕು ಕ್ರೀಡಾಕೂಟದ ಬಗ್ಗೆ ಲಲಿತಾ ರಾಘವನ್ 9448976838, ಸವಿತಾ ಭಟ್ 9448895895, ಸೋಮವಾರಪೇಟೆ ಸೋಮೇಶ್ವರ ದೇವಾಲಯದ ಬ್ರಾಹ್ಮಣ ಸಂಘದ ಸೋಮೇಶ್ 7406376065 ಇವರುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳ ಬಹುದಾಗಿದೆ ಎಂದು ಹೇಳಿದರು.ನಿಧಿಯ ಅಧ್ಯಕ್ಷೆ ಗೀತಾ ಗಿರೀಶ್ ಮಾತನಾಡಿ ಶತಮಾನೋತ್ಸವ ಭವನದ ಮೇಲ್ಭಾಗ ಮತ್ತೊಂದು ಭವನ ನಿರ್ಮಿಸಲು ಎಲ್ಲರೂ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.ಪ್ರತಿಭಾ ಪುರಸ್ಕಾರ: ಫೆ.25 ರಂದು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಕ್ರೀಡಾ ಕೂಟದ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ನಿಧಿಯ ಗೌರವ ಕಾರ್ಯದರ್ಶಿ ಬಿ.ಕೆ. ಜಗದೀಶ್ ಮಾಹಿತಿ ನೀಡಿದರು.
ನಿರ್ದೇಶಕರಾದ ಶಿವಶಂಕರ್ ಹಾಗೂ ಲಲಿತಾ ರಾಘವನ್ ಸುದ್ದಿಗೋಷ್ಠಿಯಲ್ಲಿ ಇದ್ದರು.