ಮಡಿವಾಳ ಮಾಚಿದೇವರು ಸಾಮಾಜಿಕ ಕ್ರಾಂತಿಯನ್ನೇ ನಡೆಸಿದವರು: ಕೆ.ಪ್ರತಾಪಸಿಂಹ ನಾಯಕ್

| Published : Feb 02 2025, 01:01 AM IST

ಮಡಿವಾಳ ಮಾಚಿದೇವರು ಸಾಮಾಜಿಕ ಕ್ರಾಂತಿಯನ್ನೇ ನಡೆಸಿದವರು: ಕೆ.ಪ್ರತಾಪಸಿಂಹ ನಾಯಕ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನ ಭಾಷಣಕಾರರಾಗಿ ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಶಿಕ್ಷಕ ಅರವಿಂದ ಚೊಕ್ಕಾಡಿ ಮಾತನಾಡಿ, ಭಾರತದ ಸಾಮಾಜಿಕ ರಚನಾ ಕ್ರಮದಲ್ಲಿ ವರ್ಣಗಳ ರಚನೆ ಧಾರ್ಮಿಕವಾದುದು. ವರ್ಣ ಒಂದೇ ಇದ್ದರೆ ಜಾತಿ 6 ಸಾವಿರವಿದೆ. ಹಾಗಾಗಿ ಭಕ್ತಿ ಆಚರಣೆಗೆ ಸೀಮಿತವಾಗದೆ ಅನುಸರಿಸುವಂತಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶತಮಾನಗಳಾಚೆ ದುರ್ಬಲರ ಶೋಷಣೆ, ಶಿಕ್ಷಣದಲ್ಲಿ ಅವಕಾಶ, ಮೂಢ ನಂಬಿಕೆ ಸೇರಿದಂತೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಸರ್ವರಿಗೂ ಸಮಪಾಲು, ಸಮಬಾಳು ಒದಗಿಸಲು ಮಡಿವಾಳ ಮಾಚಿದೇವರು ಸಾಮಾಜಿಕ ಕ್ರಾಂತಿಯನ್ನೇ ನಡೆಸಿರುವರು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬೆಳ್ತಂಗಡಿ ತಾಲೂಕು ಆಡಳಿತದ ವತಿಯಿಂದ ಫೆ.1ರಂದು ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಹಮ್ಮಿಕೊಂಡ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಪ್ರಧಾನ ಭಾಷಣಕಾರರಾಗಿ ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಶಿಕ್ಷಕ ಅರವಿಂದ ಚೊಕ್ಕಾಡಿ ಮಾತನಾಡಿ, ಭಾರತದ ಸಾಮಾಜಿಕ ರಚನಾ ಕ್ರಮದಲ್ಲಿ ವರ್ಣಗಳ ರಚನೆ ಧಾರ್ಮಿಕವಾದುದು. ವರ್ಣ ಒಂದೇ ಇದ್ದರೆ ಜಾತಿ 6 ಸಾವಿರವಿದೆ. ಹಾಗಾಗಿ ಭಕ್ತಿ ಆಚರಣೆಗೆ ಸೀಮಿತವಾಗದೆ ಅನುಸರಿಸುವಂತಾಗಬೇಕು ಎಂದರು.ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆ ವಹಿಸಿದ್ದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಬೆಳ್ತಂಗಡಿ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಮಡಿವಾಳ, ಶಶಿಧರ್ ಕಲ್ಮಂಜ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ನಿರೂಪಿಸಿ, ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಹೇಮಾ ವಂದಿಸಿದರು.