ಸಾರಾಂಶ
ಮಡಿವಾಳೇಶ್ವರ ಮಠದ 33ನೇ ಜಾತ್ರಾ ಮಹೋತ್ಸವ ಹಾಗೂ ಶಿವಶರಣೆ ತಂಗೆಮ್ಮ ತಾಯಿಯವರ 78ನೇ ಜಯಂತಿ ಮಹೋತ್ಸವ ನಿಮಿತ್ತ ಶ್ರೀಮಠದ ಪೀಠಾಧಿಪತಿ ಮಡಿವಾಳೇಶ್ವರ ಮಹಾಸ್ವಾಮಿಗಳ ಹಾಗೂ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಜ.8ರ ಸಂಜೆ 4ಕ್ಕೆ ಪಟ್ಟಣದ ಜವಳಿ ಕೂಟದಿಂದ ಗಜಪಡೆಗಳೊಂದಿಗೆ ಮಹಾರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಜಗದ್ಗುರು ಶ್ರೀ ಮಡಿವಾಳೇಶ್ವರ ಮಠದ 33ನೇ ಜಾತ್ರಾ ಮಹೋತ್ಸವ ಹಾಗೂ ಶಿವಶರಣೆ ತಂಗೆಮ್ಮ ತಾಯಿಯವರ 78ನೇ ಜಯಂತಿ ಮಹೋತ್ಸವ ನಿಮಿತ್ತ ಶ್ರೀಮಠದ ಪೀಠಾಧಿಪತಿ ಮಡಿವಾಳೇಶ್ವರ ಮಹಾಸ್ವಾಮಿಗಳ ಹಾಗೂ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಜ.8ರ ಸಂಜೆ 4ಕ್ಕೆ ಪಟ್ಟಣದ ಜವಳಿ ಕೂಟದಿಂದ ಗಜಪಡೆಗಳೊಂದಿಗೆ ಮಹಾರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ.ನಾಡಿನ ಮಹಾತಪಸ್ವಿಗಳಲ್ಲಿ ಶ್ರೀಗುರು ಮಡಿವಾಳೇಶ್ವರರು ತಮ್ಮ ಪವಾಡಗಳ ಮೂಲಕ ಸಮಾಜ ಉದ್ಧರಿಸಿದ ಮಹಾಯೋಗಿಗಳು. ಪಟ್ಟಣದ ಶ್ರೀಗುರು ಮಡಿವಾಳೇಶ್ವರ ಮಠದಲ್ಲಿ ಅವರ ವೈಭವವನ್ನು ಧಾರ್ಮಿಕ ಕಾರ್ಯಗಳ ಮೂಲಕ ಜನತೆಗೆ ಮುಟ್ಟಿಸಲಾಗುತ್ತಿದೆ. 1986ರಲ್ಲಿ ಮೊದಲ ಜಾತ್ರೆ ಮಾಡಲಾಯಿತು. ಶ್ರೀ ಮಠ ಸ್ಥಾಪನೆಯಾಗಿ ನಾಲ್ಕು ವರ್ಷದ ನಂತರ ಈಗೀನ ಪೀಠಾಧಿಕಾರಿ ಮಡಿವಾಳೇಶ್ವರ ಸ್ವಾಮೀಜಿ ಜನಿಸಿದ ವರ್ಷದಂದು ರಥ ನಿರ್ಮಿಸಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಶ್ರೀ ಗುರು ಮಡಿವಾಳೇಶ್ವರ ರಥೋತ್ಸವ ಗಜಪಡೆಗಳೊಂದಿಗೆ ನಡೆಯುತ್ತಿದೆ. ಜಗದ್ಗುರು ಮಡಿವಾಳೇಶ್ವರರ ಜಾತ್ರೆಯನ್ನು ಉತ್ತರ ಕರ್ನಾಟಕದ ದಸರಾ ಎಂದು ಕರೆಯುವರು. ಪಟ್ಟಣದ ಪುರಸಭೆ ಆಡಳಿತ ಮಂಡಳಿ ಸುಮಾರು 9 ಗುಂಟೆ ಜಾಗೆ ನೀಡಿದ್ದು, ಆ ಸ್ಥಳದಲ್ಲಿ ಈಗ ಶಂಭೋಲಿಂಗ ದೇವಸ್ಥಾನ ನಿರ್ಮಾಣವಾಗಿದ್ದು, ಶಂಭೋಲಿಂಗ, ಗಂಗಾಮಾತಾ, ಈಶ್ವರ, ನಾಗದೇವರ ವಿಗ್ರಹಗಳನ್ನು ನಿರ್ಮಿಸಲಾಗಿದೆ.
ನೂತನ ಮಠದ ನಿರ್ಮಾಣ : ಭಕ್ತರ ತನು, ಮನ, ಧನದಿಂದ ಅರಭಾಂವಿ ಕಲ್ಲಿನಲ್ಲಿ ವಿಭಿನ್ನ ಆಕರ್ಷಕ ಚಿತ್ತಾರಗಳಲ್ಲಿ ಸುಮಾರು ₹2 ಕೋಟಿ ವೆಚ್ಚದ ಶ್ರೀ ಮಠದ ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಮುಂದಿನ ದಿನಮಾನಗಳಲ್ಲಿ ಭಕ್ತರ ಆದ್ಯಾತ್ಮ ಕೇಂದ್ರವಾಗಲಿದೆ. ಶ್ರೀ ಮಠದ ಕಟ್ಟಡಕ್ಕೆ ದೇಣಿಗೆ ಸಲ್ಲಿಸುವವ ಭಕ್ತರು Axis Bank branch Bailhongal account no. 913010016807114 IFSC Code-UTIB0002009 ಇಲ್ಲಿ ಸಲ್ಲಿಸಲು ಕೋರಲಾಗಿದೆ. ಮಾಹಿತಿಗಾಗಿ 9663453666 ಸಂಪರ್ಕಿಸಬಹುದು.