ಸಾರಾಂಶ
ಬಸವಣ್ಣ, ಮಾಚಿದೇವರು ಸೇರಿದಂತೆ ಅನೇಕ ಶರಣರು 12ನೇ ಶತಮಾನದಲ್ಲಿಯೇ ಸರ್ವರಿಗೂ ಸಮಪಾಲು ಸಮಬಾಳು ಒದಗಿಸಲು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡಿದ್ದರು. ಅಂತಹ ಶರಣರ ಸಾಲಿನಲ್ಲಿದ್ದ ಮಡಿವಾಳ ಮಾಚಿದೇವರು ಅತ್ಯಂತ ಪ್ರಕಾಶಮಾನವಾಗಿ ಕಂಡುಬಂದ ಮಹಾನ್ ವ್ಯಕ್ತಿ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಡಿವಾಳ ಮಾಚಿದೇವರು ಬಸವಣ್ಣನವರ ಕಾಯಕವೇ ಕೈಲಾಸವೆಂಬ ತತ್ವವನ್ನು ಮಾಡಿ ತೋರಿಸಿದ ದಾರ್ಶನಿಕ ವ್ಯಕ್ತಿ ಎಂದು ತಹಸೀಲ್ದಾರ್ ಜಿ.ಆದರ್ಶ ತಿಳಿಸಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಸವಣ್ಣ, ಮಾಚಿದೇವರು ಸೇರಿದಂತೆ ಅನೇಕ ಶರಣರು 12ನೇ ಶತಮಾನದಲ್ಲಿಯೇ ಸರ್ವರಿಗೂ ಸಮಪಾಲು ಸಮಬಾಳು ಒದಗಿಸಲು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡಿದ್ದರು. ಅಂತಹ ಶರಣರ ಸಾಲಿನಲ್ಲಿದ್ದ ಮಡಿವಾಳ ಮಾಚಿದೇವರು ಅತ್ಯಂತ ಪ್ರಕಾಶಮಾನವಾಗಿ ಕಂಡುಬಂದ ಮಹಾನ್ ವ್ಯಕ್ತಿ ಎಂದರು.ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಸಮಾಜದಲ್ಲಿ ಬದುಕುವುದು ಹೇಗೆಂಬುದನ್ನು ತೋರಿಸಿಕೊಟ್ಟಿರುವ ಮಡಿವಾಳ ಮಾಚಿದೇವರ ತತ್ವದಾರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಮಾತ್ರ ಇಂತಹ ಜಯಂತ್ಯುತ್ಸವಗಳು ಸಾರ್ಥಕತೆ ಕಾಣುತ್ತವೆ ಎಂದರು.
ವೀರಭದ್ರನ ಅವತಾರದಲ್ಲಿ ಜನಸಿದ ಅವರು ಶಿವನ ಆಣತಿಯಂತೆ ಮಡಿವಾಳ ಮಾಚಿದೇವರಾಗಿ ಕರ್ತವ್ಯ ಪಾಲನೆಗೋಸ್ಕರ ಶರಣರ ಬಟ್ಟೆ ತೊಳೆಯುವ ಕೆಲಸವನ್ನು ಶ್ರದ್ಧಾಪೂರ್ವಕವಾಗಿ ಮಾಡುವ ಮೂಲಕ, ಸಮಾಜದ ಹಿತಕಾಯುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಇತಿಹಾಸವನ್ನು ಅಧ್ಯಯನ ಮಾಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು.ಮಡಿವಾಳ ಸಮಾಜದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಉಮಾಶಂಕರ್ ಮಾತನಾಡಿ, ಬಸವಣ್ಣನವರ ಕಾಯಕದಲ್ಲಿದ್ದ ಹಲವಾರು ವಚನಕಾರರ ಪೈಕಿ ಮಡಿವಾಳ ಮಾಚಿದೇವರು ಬಹಳ ಶಕ್ತಿಶಾಲಿಯಾಗಿದ್ದರು. ಆದರೆ, ಸಮುದಾಯದಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ ಮಡಿವಾಳ ಮಾಚಿದೇವರ ಜಯಂತ್ಯುತ್ಸವವನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ಕಾರ್ಯಕ್ರಮದಲ್ಲಿ ತಾಲೂಕು ಮಡಿವಾಳ ಸಮಾಜದ ಕಾರ್ಯದರ್ಶಿ ವೈರಮುಡಿ ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್, ನಗರ ಘಟಕದ ಅಧ್ಯಕ್ಷ ಸುರೇಶ್, ಎಡಿಎಲ್‌ಆರ್ ಪ್ರಮೋದ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರತ್‌ರಾಜ್, ಶಿರಸ್ತೆದಾರ್ ಉಮೇಶ್, ಆರೋಗ್ಯ ಇಲಾಖೆಯ ಸಿದ್ದಲಿಂಗಸ್ವಾಮಿ ಸೇರಿದಂತೆ ಸಮುದಾಯದ ಹಲವು ಮುಖಂಡರು ಇದ್ದರು.