ಸಾರಾಂಶ
ಮಾಚಿದೇವರು ಗುರು ಬಸವೇಶ್ವರರು ಸಮಕಾಲೀನ ಶರಣರಾಗಿದ್ದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಶ್ರೀ ಮಡಿವಾಳ ಮಾಚಿದೇವರ ಆದರ್ಶ, ತತ್ವ, ಆಚಾರ - ವಿಚಾರಗಳನ್ನು ಪ್ರತಿಯೊಬ್ಬರು ಅರಿತುಕೊಂಡು ಯುವ ಪಿಳಿಗೆಗೆ ತತ್ವವನ್ನು ತಿಳಿಸಿಕೊಡಬೇಕು. ಎಲ್ಲ ಸಮುದಾಯದ ಜನರು ಶ್ರೀ ಮಡಿವಾಳ ಮಾಚಿದೇವರಂತೆ ದ್ವೇಷ, ಅಸೂಯೆ, ಜಾತಿ, ಮತ ಬಿಟ್ಟು ಎಲ್ಲರೂ ಆದರ್ಶಪ್ರಾಯವಾಗಿ ಬದುಕಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ವೇಳೆ ಯರಗಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಮಾತನಾಡಿ, ಮಾಚಿದೇವರು ಗುರು ಬಸವೇಶ್ವರರು ಸಮಕಾಲೀನ ಶರಣರಾಗಿದ್ದರು. ೧೨ನೇ ಶತಮಾನದಲ್ಲಿ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪ್ರಶ್ಯತೆ, ಮೂಢನಂಬಿಕೆಗಳಂತಹ ಅನೇಕ ಸಾಮಾಜಿಕ ಅಸಮಾನತೆಯಿಂದ ಬಳಲಿದ ಬಡವರು, ದೀನ ದಲಿತರು, ನಿರಾಶೆ - ಹತಾಶೆಗೊಂಡವರ ಬದುಕಿಗೆ ಸಮಪಾಲು ಸಮಬಾಳು ಒದಗಿಸಲು ಶ್ರೀ ಮಡಿವಾಳ ಮಾಚಿದೇವರು ನಿರಂತರ ಶ್ರಮಿಸಿದ್ದಾರೆ ಎಂದರು.ಡಾ. ರಾಜಶೇಖರ ಬಿರಾದಾರ, ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಶಿವಾನಂದ ಮಡಿವಾಳರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಸಮಾಜದ ಮುಖಂಡರು, ಮತ್ತಿತರು ಕಾರ್ಯಕ್ರಮದಲ್ಲಿ ಇದ್ದರು.