ಮಾಡೂರು ಸರ್ಕಾರಿ ಶಾಲೆ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಸ್ಪೀಕರ್ ಖಾದರ್ ಅಸ್ತು

| Published : Apr 03 2025, 12:31 AM IST

ಮಾಡೂರು ಸರ್ಕಾರಿ ಶಾಲೆ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಸ್ಪೀಕರ್ ಖಾದರ್ ಅಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ಮಾಡೂರಿನ ಸರ್ಕಾರಿ ಶಾಲೆಯನ್ನು ಆಂಗ್ಲಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸುವ ಯೋಜನೆಗೆ ಶಾಸಕರು ಹಾಗೂ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಗ್ರೀನ್ ಸಿಗ್ನಲ್ ನೀಡಿದ್ದು, ಸರ್ಕಾರದಿಂದ ಅನುದಾನ ಬರುವವರೆಗೆ ತನ್ನ ವೇತನದಿಂದ ರು.1 ಲಕ್ಷ ವನ್ನು ಆಂಗ್ಲಮಾಧ್ಯಮ ಶಾಲೆಯ ಕಾರ್ಯಾಚರಣೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಮಾಡೂರಿನ ಜನತೆಯ ಬಹುಬೇಡಿಕೆಯ ಸರ್ಕಾರಿ ಶಾಲೆಯನ್ನು ಆಂಗ್ಲಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸುವ ಯೋಜನೆಗೆ ಶಾಸಕರು ಹಾಗೂ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಗ್ರೀನ್ ಸಿಗ್ನಲ್ ನೀಡಿದ್ದು, ಸರ್ಕಾರದಿಂದ ಅನುದಾನ ಬರುವವರೆಗೆ ತನ್ನ ವೇತನದಿಂದ ರು.1 ಲಕ್ಷ ವನ್ನು ಆಂಗ್ಲಮಾಧ್ಯಮ ಶಾಲೆಯ ಕಾರ್ಯಾಚರಣೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸರ್ಕಾರಿ ಶಾಲೆ ಉನ್ನತೀಕರಣದ ಪ್ರಸ್ತಾವ ಕೇಳಿಬಂದ ಹಿನ್ನೆಲೆಯಲ್ಲಿ ಮಾಡೂರು ಶಾಲೆಯಲ್ಲಿ, ಅಭಿವೃದ್ಧಿ ಸಮಿತಿಯೊಂದಿಗೆ ಎರಡನೇ ಬಾರಿ ಸಭೆ ನಡೆಸಿದ ಅವರು ಶಿಕ್ಷಣಾಧಿಕಾರಿಗಳಿಗೆ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವಂತೆ ಸೂಚಿಸಿದ್ದಾರೆ. ಪೂರಕ ದಾಖಲೆಗಳೆಲ್ಲವನ್ನೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಸಿದ್ಧಪಡಿಸುವುದಾಗಿ ತಿಳಿಸಿದ ಅವರು

ಎಲ್ ಕೆ.ಜಿ ಯುಕೆಜಿ ಒಂದನೇ ತರಗತಿಗೆ ದಾಖಲಾತಿಗಳನ್ನು ಆರಂಭಿಸುವಂತೆ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಸಮಿತಿ, ಶಿಕ್ಷಕ ವೃಂದದೊಂದಿಗೆ ಸೇರಿಕೊಂಡು ನಡೆಸಬೇಕು. ಎಲ್ ಕೆ.ಜಿ , ಯುಕೆಜಿಯಲ್ಲಿ ಒಟ್ಟು 15 ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಲೇಬೇಕು ಎಂದು ಸೂಚಿಸಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೊಳಿಯಾರ್‌, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ದುಲ್ ಅಜೀಝ್ ಮಾಡೂರು, ಕಾಂಗ್ರೆಸ್ ಕೋಟೆಕಾರು ಸಮಿತಿ ಅಧ್ಯಕ್ಷ ಸುಕುಮಾರ್ ಗಟ್ಟಿ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಸುರೇಖ ಚಂದ್ರಹಾಸ್, ಚಂದ್ರಿಕಾ ರೈ, ಕೌನ್ಸಿಲಾರಾದ‌ ಸುಜೀತ್ ಮಾಡೂರು, ಬಶೀರ್, ಅಹಮ್ಮದ್ ಭಾವ, ಇಶಾಕ್ , ಮೊಹಮ್ಮದ್ ದೇರಳಕಟ್ಟೆ , ಮಾಜಿ ಕೌನ್ಸಿಲರಾದ ಹಮೀದ್ ಹಸನ್, ನಾಮ‌ ನಿದೇರ್ಶಿತ ಸದಸ್ಯರಾದ ಸಫಿಯಾ, ಗಫೂರು ಮಾಡೂರು , ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಈಶ್ವರ್ , ಕ್ಷೇತ್ರ ಸಮನ್ವಯ ಅಧಿಕಾರಿ ಸುಶ್ಮಾ ವಿ ಕಿಣಿ, ಶಿಕ್ಷಣ ಸಂಯೋಜಕಿ ಅನ್ನಪೂರ್ಣ ಬುಚ್ಚಾನ್‌ ಇದ್ದರು.