ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ಜರಗಿದ ಶ್ರೀ ಜಗದ್ಗುರು ಮಧ್ವಾಚಾರ್ಯರ ಜಯಂತಿ
ಮಡಿಕೇರಿ: ಮಧ್ವಾಚಾರ್ಯರ ಜೀವನ ಮತ್ತು ಬೋಧನೆಯು ಅಸಂಖ್ಯಾತ ಅನುಯಾಯಿಗಳಿಗೆ ಸ್ಫೂರ್ತಿದಾಯಕ ಎಂದು ಶ್ರೀ ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಿ.ರಾಜೇಂದ್ರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ಜರಗಿದ ಶ್ರೀ ಜಗದ್ಗುರು ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಧ್ವಾಚಾರ್ಯರ ಪರಂಪರೆಯು ಹಲವಾರು ಮಠಗಳು, ದಾಸ ಸಾಹಿತ್ಯದ ಭಕ್ತಿಪಂಥ ಮತ್ತು ಬೋಧನೆಗಳ ಮೂಲಕ ಅಭಿವೃದ್ಧಿ ಹೊಂದಿದೆ. ಆ ದಿಸೆಯಲ್ಲಿ ಅಧ್ಯಾತ್ಮಿಕ ಅನ್ವೇಷಕರಿಗೆ ದೈವಿಕತೆ ಅರಿತುಕೊಳ್ಳುವ ಹಾದಿಯಲ್ಲಿ ಮಾರ್ಗದರ್ಶನ ನೀಡಿದ್ದಾರೆ ಎಂದು ರಾಜೇಂದ್ರ ತಿಳಿಸಿದರು.
ಕೊಡಗು ವಿಪ್ರ ಸಂಘದ ಸ್ಥಾಪಕಾಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಮಾತನಾಡಿ 13 ನೇ ಶತಮಾನದ ದ್ವೈತ ವೇದಾಂತ ಸಿದ್ದಾಂತದ ಪ್ರತಿಪಾದಕರಾದ ಮಧ್ವಾಚಾರ್ಯರರು ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸದಸ್ಯರಾದ ಎಸ್.ಎಸ್.ಸಂಪತ್ ಕುಮಾರ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಮಡಿಕೇರಿ ನಗರ ಸಹಕಾರ ಬ್ಯಾಂಕ್ನ ಅಧ್ಯಕ್ಷ ಜಗದೀಶ್ ಸೋಮಯಾಜಿ, ಗೋಣಿಕೊಪ್ಪ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ರಾಧಾಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಇದ್ದರು.
ವಂದೇ ಮಾತರಂ ಹಾಗೂ ನಾಡಗೀತೆಯನ್ನು ಕೆ.ಜಯಲಕ್ಷ್ಮಿ, ಶಾಂತಿ ಅಚ್ಚಯ್ಯ, ರಾಜೇಶ್ವರಿ ವೀಣಾ ಹೊಳ್ಳ ಮತ್ತು ಗೀತಾ ಸಂಪತ್ ಹಾಡಿದರು. ಮಧ್ವಾಚಾರ್ಯರ ಕುರಿತ ಹಾಡುಗಳನ್ನು ತನುಶ್ರೀ, ಸ್ವಾತಿ ಅರುಣ್ ಹಾಡಿದರು, ಕುಮಾರ ವಂದಿಸಿದರು.