ಗುರುಸಿದ್ದಾಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ಮಾಗಡಿ ಗುರುಸ್ವಾಮಿ

| Published : May 16 2025, 02:16 AM IST

ಗುರುಸಿದ್ದಾಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ಮಾಗಡಿ ಗುರುಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಗುರುಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಾಗಡಿ ಗ್ರಾಪಂ ಸದಸ್ಯ ಗುರುಸ್ವಾಮಿ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಗುರುಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಾಗಡಿ ಗ್ರಾಪಂ ಸದಸ್ಯ ಗುರುಸ್ವಾಮಿ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯೆಯಾಗಿದ್ದಾರೆ.

ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 15 ಸದಸ್ಯರಿದ್ದಾರೆ. 2ನೇ ಅವಧಿಯಲ್ಲಿ ಒಡಂಬಡಿಕೆಯಂತೆ ಈ ಹಿಂದೆ ಅಧ್ಯಕ್ಷರಾಗಿದ್ದ ಮಾಗಡಿ ಮಂಜಣ್ಣ ರಾಜೀನಾಮೆ ನೀಡಿದ್ದರು. ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗುರುಸ್ವಾಮಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಆಗಿದ್ದ ಜಿಪಂ ಎಇಇ ಶಿವಮೂರ್ತಿ ಘೋಷಿಸಿದರು.

ಶಾಸಕ ಬಿ.ದೇವೇಂದ್ರಪ್ಪ ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ 15ನೇ ಹಣಕಾಸು ಯೋಜನೆಗಳು ಜಾರಿಯಲ್ಲಿವೆ. ಗುಣಮಟ್ಟದ ಕಾಮಗಾರಿಗಳ ನಿರ್ವಹಣೆಗೆ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳ ನಿಗಾ ವಹಿಸಬೇಕು. ಪರಿಣಾಕಾರಿ ಕಾಮಗಾರಿಗೆ ಎಚ್ಚರಿಕೆ ವಹಿಸಬೇಕು. ನನ್ನ ವ್ಯಾಪ್ತಿಯಲ್ಲಿ ಏನು ಸಹಕಾರ ಮಾಡಲು ಸಾಧ್ಯವಿದೆಯೋ ಖಂಡಿತಾ ಕೈಗೊಳ್ಳಲು ಬದ್ಧ ಎಂದರು.

ಈ ಸಂದರ್ಭ ಕೆಪಿಸಿಸಿ ಎಸ್‌ಟಿ ಘಟಕ ಮಾಜಿ ಅಧ್ಯಕ್ಷ ಕೆ.ಪಿ.ಪಾಲಯ್ಯ, ಗ್ರಾಪಂ ಉಪಾಧ್ಯಕ್ಷೆ ಪದ್ಮ, ಸದಸ್ಯರಾದ ರಮೇಶ್, ಪ್ರಮೀಳಮ್ಮ, ಗಂಗಮ್ಮ,ಹಳ್ಳಿ ಚೌಡಪ್ಪ, ಬಸಮ್ಮ, ಮಂಜಮ್ಮ, ಚಂದ್ರಮ್ಮ, ಆನಂದ, ಮಾರಕ್ಕ, ಸತೀಶ್ ನಾಯ್ಕ, ಬೊಮ್ಮಕ್ಕ, ಮಂಜಪ್ಪ ,ಕರಿಬಸಮ್ಮ, ಮುಖಂಡರಾದ ಪ್ರಕಾಶ್, ಮಾಗಡಿ ನಾಗರಾಜ್, ಮಲ್ಲೇಶ್, ಉದ್ದಬೋರನಹಳ್ಳಿ ಕೊಟ್ರೇಶ್, ಪೂಜಾರ ಸಿದ್ದೇಶ್, ಮಾರಪ್ಪ, ವೆಂಕಟೇಶ್ ಪುರ ಮಲ್ಲಿಕಾರ್ಜುನ್, ಮಡ್ರಹಳ್ಳಿ ಗಿರೀಶ್, ಗೌಡಿಕಟ್ಟೆ ಹನುಮಂತಪ್ಪ, ಮಾಗಡಿ ಹನುಮಂತಪ್ಪ, ಬಿ.ಮಹೇಶ್ವರಪ್ಪ, ಚೌಡಪ್ಪ, ಪಿಡಿಒ ವಾಸುದೇವ, ಕಾರ್ಯದರ್ಶಿ ಕರಿಯಪ್ಪ ಮತ್ತಿತರರು ಇದ್ದರು.

- - -

-12ಜೆ.ಜಿ.ಎಲ್.1.ಜೆಪಿಜಿ:

ಜಗಳೂರು ತಾಲೂಕಿನ ಗುರುಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗುರುಸ್ವಾಮಿ ಚುನಾವಣೆಯಲ್ಲಿ ಅವಿರೋಧ ಆಯೆಯಾಗಿದ್ದು, ಅಭಿನಂದಿಸಲಾಯಿತು.