ಸಿಮಿಕೇರಿಯಲ್ಲಿ ವೈಭವದ ಆಂಜನೇಯನ ಓಕಳಿ

| Published : May 28 2024, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಸಮೀಪದ ಸಿಮಿಕೇರಿ ಗ್ರಾಮದಲ್ಲಿ 28 ವರ್ಷದ ಬಳಿಕ ಆಂಜನೇಯನ ಓಕಳಿ 28 ವರ್ಷದ ಬಳಿಕ ಸಂಭ್ರಮದ ಜರುಗಿ ಗತವೈಭವಕ್ಕೆ ಸಾಕ್ಷಿಯಾಯಿತು. ಗ್ರಾಮದಲ್ಲಿ ಗ್ರಾಮ ದೇವತೆಯ ಉಡಿ ತುಂಬುವ ಕಾರ್ಯಕ್ರಮ ಹಾಗೂ ಹನುಮಂತ ದೇವರ ಓಕುಳಿ ಉತ್ಸವ ಅಂಗವಾಗಿ ಬೆಳಗಿನ ಜಾವ ಆಂಜನೇಯನಿಗೆ ಪಂಚಾಮೃತ ಅಭಿಷೇಕ, ಎಲಿ ಪೂಜೆ, ಶ್ರೀರಾಮನಾಮ ಜಪ, ಹನುಮಾನ್‌ ಚಾಲೀಸ್ ಪಠಣ, ಪುಷ್ಪಾಲಂಕಾರ, ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜಾ ಕೈಕಂರ್ಯಗಳು ಜರುಗಿದವು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಮೀಪದ ಸಿಮಿಕೇರಿ ಗ್ರಾಮದಲ್ಲಿ 28 ವರ್ಷದ ಬಳಿಕ ಆಂಜನೇಯನ ಓಕಳಿ 28 ವರ್ಷದ ಬಳಿಕ ಸಂಭ್ರಮದ ಜರುಗಿ ಗತವೈಭವಕ್ಕೆ ಸಾಕ್ಷಿಯಾಯಿತು. ಗ್ರಾಮದಲ್ಲಿ ಗ್ರಾಮ ದೇವತೆಯ ಉಡಿ ತುಂಬುವ ಕಾರ್ಯಕ್ರಮ ಹಾಗೂ ಹನುಮಂತ ದೇವರ ಓಕುಳಿ ಉತ್ಸವ ಅಂಗವಾಗಿ ಬೆಳಗಿನ ಜಾವ ಆಂಜನೇಯನಿಗೆ ಪಂಚಾಮೃತ ಅಭಿಷೇಕ, ಎಲಿ ಪೂಜೆ, ಶ್ರೀರಾಮನಾಮ ಜಪ, ಹನುಮಾನ್‌ ಚಾಲೀಸ್ ಪಠಣ, ಪುಷ್ಪಾಲಂಕಾರ, ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜಾ ಕೈಕಂರ್ಯಗಳು ಜರುಗಿದವು, ಗ್ರಾಮದ ಜನತೆಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.,

ಬೆಳಗ್ಗೆ ಬರಮಪ್ಪ ಅಂಬ್ಲಿಕೊಪ್ಪ ಅವರು ಬಂಡಿಯ ಮುಖಾಂತರ ಓಕಳಿ ಹೊಂಡವನ್ನು ಭರಮದೇವರ ಗುಡಿ ಹತ್ತಿರವಿರುವ ಐತಿಹಾಸಿಕ ಭಾವಿಯಿಂದ ಬಂಡಿಯಲ್ಲಿ ನೀರನ್ನು ಡೊಳ್ಳು ಹಾಗೂ ಹಲಗೆ ಮೇಳದೊಂದಿಗೆ ಮೆರವಣಿಗೆ ಮೂಲಕ ಬಂದು ತುಂಬಿಸಲಾಯಿತು, ನಂತರ ಸಂಜೆ ಓಕಳಿ ಹೊಂಡದಲ್ಲಿ ತುಂಬಿದ ನೀರಿನಲ್ಲಿ ಯುವಕರು ಮಿಂದೆದ್ದು ನೀರನ್ನು ಏರೆಚುತ್ತಾ ಓಕಳಿ ಆಡಿದ್ದು ನೆರೆದ ಜನರನ್ನು ರಂಜಿಸಿತು,

28 ವರ್ಷಗಳಿಂದ ನಿಂತು ಹೋಗಿದ್ದ ಓಕುಳಿ ಈ ವರ್ಷ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಇತ್ತೀಚೆಗೆ ಮಳೆ ಬೆಳೆ ಭವಿಷ್ಯ ಹೇಳುವ ಅಯ್ಯನವರು ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಗ್ರಾಮದ ಸುತ್ತಮುತ್ತ ಮಳೆ ಆಗದಿರುವ ಬಗ್ಗೆ ಕೇಳಿದಾಗ ಅವರು ಊರಲ್ಲಿ ನಿಂತು ಹೋಗಿರುವ ಓಕುಳಿ ಉತ್ಸವ ಪುನಃ ಆರಂಭಿಸಿ ಎಂದು ಸಲಹೆ ನೀಡಿದ್ದರು. ಕಾಕತಾಲೀಯ ಎಂಬಂತೆ ಓಕುಳಿ ಕೊಂಡ ಅಗೆದ ದಿನವೇ ಸಂಜೆ ಸಾಕಷ್ಟು ಮಳೆಯಾಗಿದ್ದು, ಗ್ರಾಮಸ್ಥರಲ್ಲಿ ಉತ್ಸಾಹ ತಂದಿತ್ತು. ಇದೇ ಸಂದರ್ಭದಲ್ಲಿ ಮಳೆ ಬೆಳೆಗಾಗಿ ಆಂಜನೇಯ ಹಾಗೂ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಮಳೆ ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಗ್ರಾಮದ ಹಿರಿಯರಾದ ಮಹದೇವಪ್ಪ ತಳವಾರ ತಿಳಿಸಿದರು.

ಕಾರ್ಯಕ್ರಮಗಳಲ್ಲಿ ಗ್ರಾಮದ ಹಿರಿಯರಾದ ಮಹದೇವಪ್ಪ ತಳವಾರ, ವೀರಭದ್ರಪ್ಪ ನಾಯಕ, ತಿಪ್ಪಣ್ಣ ಹೊರಕೇರಿ, ಎಚ್.ಐ. ನಾಯಕ, ಬಾಳಪ್ಪ ಹಟ್ಟಿ, ಈರಪ್ಪ ಕವಳ್ಳಿ, ಸಿದ್ದಪ್ಪ ಹೊರಕೇರಿ, ರಾಜು ಸುನಗದ, ಶಿವು ತಳವಾರ ಹಾಗೂ ಗ್ರಾಮದ ಗುರುಹಿರಿಯರು ಸೇರಿದಂತೆ ಸಿಮಿಕೇರಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದ ಜನರು ಪಾಲ್ಗೊಂಡಿದ್ದರು.

ಬಾಕ್ಸ್

ಮಳೆ ಬೆಳೆ ಚೆನ್ನಾಗಿ ಬಂದು ರೈತರ ಬದುಕು ಸಮೃದ್ಧಿಯಾಗಲೆಂದು ಗುರುಗಳ ಸಲಹೆಯಂತೆ 28 ವರ್ಷಗಳ ಬಳಿಕ ಆಂಜನೇಯನ ಓಕಳಿ ಪ್ರಾರಂಭಿಸಿದ್ದೇವೆ-

- ವೀರಭದ್ರಪ್ಪ ನಾಯಕ, ಗ್ರಾಮದ ಮಖಂಡರು, ಸಿಮಿಕೇರಿ