ವೈಭವದ ಪುರಿ ಜಗನ್ನಾಥಸ್ವಾಮಿ ರಥೋತ್ಸವ

| Published : Jul 08 2024, 12:31 AM IST

ವೈಭವದ ಪುರಿ ಜಗನ್ನಾಥಸ್ವಾಮಿ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ ಪಟ್ಟಣದಲ್ಲಿ ಪುರಿ ಶ್ರೀ ಜಗನ್ನಾಥ ಸ್ವಾಮಿ ದೇವರ ರಥೋತ್ಸವ ಭಾನುವಾರ ಸಡಗರ, ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದಲ್ಲಿ ಪುರಿ ಶ್ರೀ ಜಗನ್ನಾಥ ಸ್ವಾಮಿ ದೇವರ ರಥೋತ್ಸವ ಭಾನುವಾರ ಸಡಗರ, ಸಂಭ್ರಮದಿಂದ ಜರುಗಿತು.

ಪಟ್ಟಣದ ಜಗದೀಶ ರಾಧಾಕೃಷ್ಣ ಮಂದಿರದಿಂದ ಆರಂಭಗೊಂಡ ರಥೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಮಾರ್ವಾಡಿ ಸಮಾಜದ ಮಹಿಳೆಯರು, ಯುವಕ, ಯುವತಿಯರು ದಾಂಡಿಯಾ ನೃತ್ಯ ಹಾಗೂ ದೇವರ ಭಜನೆ ಮಾಡಿ ಸಂಭ್ರಮಿಸಿದರು.

ಇಚಲಕರಂಜಿ, ಪುಣಾ, ನಾಸಿಕ, ಬಾಗಲಕೋಟೆ, ಹುಬ್ಬಳ್ಳಿ, ಸಾಂಗ್ಲಿ, ಇಳಕಲ್ಲ, ಅಮೀನಗಡ, ಧಾರವಾಡ ಸೇರಿದಂತೆ ಅನೇಕ ನಗರ, ಪಟ್ಟಣಗಳ ಅಪಾರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಮಂದಿರದ ಪೂಜಾರಿಗಳಾದ ಜಗದೀಶಜೀ ಪುರೋಹಿತ, ಶಾಂಜೀ ಪುರೋಹಿತ, ಮುರಲಿ ತಿವಾರಿ, ಟ್ರಸ್ಟಿನ ಅಧ್ಯಕ್ಷ ನಾರಾಯಣದಾಸ ಮುಂದಡಾ, ಸುರೇಶ ಇನಾನಿ, ಸುರಜ ದರಕ, ಸತ್ಯನಾರಾಯಣ ರಾಠಿ, ಪಂಕಜ ಜಂವರ್, ಘನಶಾಂದಾಸ ಇನಾನಿ, ಗೋಪಾಲ ಭಟ್ಟಡ, ಅಶೋಕ ಕಾಬ್ರಾ, ಜುಗಲ್ ಮರ್ದಾ, ವೇಣುಗೋಪಾಲ ಸೋನಿ, ರಾಜೇಶಾಂ ಮುಂದಡಾ, ಶ್ರೀಕಾಂತ ಸೋನಿ, ಗೋಪಾಲ ಮಾಲಪಾಣಿ, ಶಾಂ ಮಾಲಪಾಣಿ, ಗೋವಿಂದ ಮುಂದಡಾ, ಅನುಪ ತಾಪಡಿಯಾ, ಜುಗಲ್ ವರ್ಮಾ, ಜಗದೀಶ ರಾಠಿ ಸೇರಿದಂತೆ ಸಮಾಜದ ಮುಖಂಡರಾದ ಪಾಲ್ಗೊಂಡಿದ್ದರು.