ಸಾರಾಂಶ
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಪಟ್ಟಣದ ಶ್ರೀ ಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರರ ಮಠದ ಮಹಾ ಕಾರ್ತಿಕೋತ್ಸವ ಗುರುವಾರ ರಾತ್ರಿ ಭಕ್ತಿ-ಭಾವದಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಗುತ್ತಲ
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಪಟ್ಟಣದ ಶ್ರೀ ಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರರ ಮಠದ ಮಹಾ ಕಾರ್ತಿಕೋತ್ಸವ ಗುರುವಾರ ರಾತ್ರಿ ಭಕ್ತಿ-ಭಾವದಿಂದ ನಡೆಯಿತು.ಕಾರ್ತಿಕೋತ್ಸವದ ಅಂಗವಾಗಿ ಮಠದಿಂದ ಪಟ್ಟಣದ ಬಸ್ ನಿಲ್ದಾಣ, ಅಂಗ್ಲಾಪುರ ಓಣಿ, ಪಂಚಾಯಿತಿ ಹಾಗೂ ಪೇಟೆಯವರೆಗೂ ರಸ್ತೆಗಳ ಇಕ್ಕೆಲ್ಲಗಳಲ್ಲಿ ಇಟ್ಟಿದ್ದ ಸಾಲು ಸಾಲು ದೀಪಗಳನ್ನು ಪೂಜೆ ವೇಳೆ ನೆರೆದ ಸಹಸ್ರಾರು ಭಕ್ತರು ಭಕ್ತಿಯಿಂದ ಹಚ್ಚಿದರು.
ಹತ್ತಿ ಕಾಳಿನಿಂದ ಮಾಡಲಾದ ಹಣತೆಗಳು ಹೆಚ್ಚು ಪ್ರಕಾಶಮಾನವಾಗಿ ಬೆಳಗಿದವು.ಮಠದ ಎದುರುಗಡೆ ಇರುವ ಕಲ್ಯಾಣ ಮಂಟಪದಲ್ಲಿ ತಿರುಗುತ್ತಿದ್ದ ೫೦೮ ದೀಪಗಳನ್ನು ಹೊಂದಿರುವ ದೀಪದ ಸ್ತಂಭ ದೃಶ್ಯ ಎಲ್ಲರ ಗಮನ ಸೆಳೆಯಿತು. ಅಲ್ಲದೆ ಅತ್ಯಾಕರ್ಷಕ ನೂರಾರು ಹಣತೆಗೆಳು ಎಲ್ಲರ ಆರ್ಕಷಣೆಯಾಗಿದ್ದರೆ, ಸಾಲಕೃಂತ ದೀಪಗಳು ಎಲ್ಲರ ಗಮನ ಸೆಳೆದವು. ಶ್ರೀಮಠದ ನಗಾರಿ ಖಾನಿ ದೀಪಗಳಿಂದ ಅಕ್ಷರ ಸಹ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ದೃಶ್ಯ ಎಲ್ಲರನ್ನು ಆಕರ್ಷಿಸುತ್ತಿತ್ತು.
ಪಟ್ಟಣದಲ್ಲಿ ಹಲವರು ತಮ್ಮ ಮನೆಯ ಮುಂದೆ ಹಣತೆಗಳನ್ನು ಹಚ್ಚಿದ್ದರು. ಹಣತೆಗಳನ್ನು ಹಚ್ಚುತ್ತಿದಂತೆಯೇ ಎಲ್ಲೆಡೆ ಹರ ಹರ ಮಹಾದೇವ...ಎಂಬ ಜೈಘೋಷ ಮುಗಿಲು ಮುಟ್ಟಿತ್ತು. ನಿರ್ಮಾಣ ಹಂತದಲ್ಲಿರುವ ನೂತನ ಶಿಲಾ ಮಠ ವಿದ್ಯುತ್ ಅಲಂಕಾರದಿಂದ ಕಂಗಳೊಸುತ್ತಿತ್ತು.