ಕುಮಾರಸ್ವಾಮಿ ಹೆಸರಿನಲ್ಲಿ ಮಹಾ ಮೃತ್ಯುಂಜಯ ಹೋಮ

| Published : Mar 22 2024, 01:01 AM IST / Updated: Mar 22 2024, 12:44 PM IST

ಸಾರಾಂಶ

ಜಿಲ್ಲಾ ಜೆಡಿಎಸ್ ವತಿಯಿಂದ ಹರಕೆರೆ ಶ್ರೀರಾಮೇಶ್ವರ ದೇವರಿಗೆ ರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಜೆಡಿಎಸ್ ಉಪಾಧ್ಯಕ್ಷ, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ್ ಪೂಜೆ ಸಲ್ಸಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಹೃದಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು,ಚಿಕಿತ್ಸೆ ಫಲಕಾರಿಯಾಗಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಗುರುವಾರ ತಾಲೂಕಿನ ಪಿಳ್ಳಂಗಿರಿಯ ಲಕ್ಷ್ಮೀರಂಗನಾಥ ದೇವಾಲಯದಲ್ಲಿ ಕುಮಾರಸ್ವಾಮಿ ಹೆಸರಿನಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಿದರು.

ಜಿಲ್ಲಾ ಜೆಡಿಎಸ್ ವತಿಯಿಂದ ಹರಕೆರೆ ಶ್ರೀರಾಮೇಶ್ವರ ದೇವರಿಗೆ ರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಉಪಾಧ್ಯಕ್ಷ, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ್, ನಗರಪಾಲಿಕೆ ಮಾಜಿ ಸದಸ್ಯ ರಘು, ಬೊಮ್ಮಕಟ್ಟೆ ಮಂಜುನಾಥ್, ಜೆಡಿಎಸ್ ಮುಖಂಡರುಗಳಾದ ರಮೇಶ್ ನಾಯಕ್, ಸಂಗಯ್ಯ ನರಸಿಂಹ ಗಂಧದಮನೆ, ಶ್ರೀಮತಿ ಭವಾನಿ ನರಸಿಂಹ, ದಯಾನಂದ್, ಸಂಜಯ್ ಕಶ್ಯಪ್, ಅರುಣ್ ರಾವ್, ಶ್ಯಾಮ್, ಪ್ರಪುಲ್, ಲೋಹಿತ್, ಮಂಜುನಾಥ್ ಗೌಡ, ಸಂತೋಷ್, ಸುನಿಲ್ ಗೌಡ, ವಿನಯ್, ರವಿ, ಯಶವಂತ, ಅರುಣ್ ಮತ್ತೂರು ಹಾಗೂ ಇನ್ನಿತರರಿದ್ದರು.