ಅರಸಿನಕುಪ್ಪೆ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಜಾತ್ರೋತ್ಸವ

| Published : Mar 09 2024, 01:32 AM IST

ಅರಸಿನಕುಪ್ಪೆ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಜಾತ್ರೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಎಂಟು ಯಾಮಗಳಲ್ಲಿ ಶಿವರಾತ್ರಿ ಪೂಜೆ ನಡೆಯುವ ಜಿಲ್ಲೆಯ ಅಪರೂಪದ ಕ್ಷೇತ್ರಗಳಲ್ಲೊಂದಾದ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಬೆಳಗ್ಗೆ ೬ ಗಂಟೆಗೆ ಹಾಲಿನ ಅಭಿಷೇಕ, ನಂತರ ಎರಡನೆ ಯಾಮದಲ್ಲಿ ೧೧೦೮ ಎಳನೀರು ಅಭಿಷೇಕವನ್ನು ದೇವರಿಗೆ ಮಾಡಲಾಯಿತು. ಮೂರನೆ ಯಾಮದಲ್ಲಿ ಕಬ್ಬಿನ ಹಾಲಿನ ಅಭಿಷೇಕ, ನಾಲ್ಕನೆ ಯಾಮದಲ್ಲಿ ಕಲಶಾಭಿಷೇಕ, ಐದನೆ ಯಾಮದಲ್ಲಿ ಪಂಚಾಮೃತ ಅಭಿಷೇಕ, ಆರನೇ ಯಾಮದಲ್ಲಿ ಜೇನುತುಪ್ಪದ ಅಭಿಷೇಕ, ಏಳನೆ ಯಾಮದಲ್ಲಿ ಜಲಾಭಿಷೇಕ ಮತ್ತು ಎಂಟನೆ ಹಾಗೂ ಕೊನೆಯ ಯಾಮದಲ್ಲಿ ವಿಶೇಷವಾಗಿ ಭಸ್ಮಾಭಿಷೇಕ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಅರಸಿನಕುಪ್ಪೆಯ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರೋತ್ಸವ ಶೃದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆ ೫ ಗಂಟೆಗೆ ಮಹಾಗಣಪತಿ ಹೋಮದೊಂದಿಗೆ ಶಿವರಾತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಂಟು ಯಾಮಗಳಲ್ಲಿ ಶಿವರಾತ್ರಿ ಪೂಜೆ ನಡೆಯುವ ಜಿಲ್ಲೆಯ ಅಪರೂಪದ ಕ್ಷೇತ್ರಗಳಲ್ಲೊಂದಾದ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಬೆಳಗ್ಗೆ ೬ ಗಂಟೆಗೆ ಹಾಲಿನ ಅಭಿಷೇಕ, ನಂತರ ಎರಡನೆ ಯಾಮದಲ್ಲಿ ೧೧೦೮ ಎಳನೀರು ಅಭಿಷೇಕವನ್ನು ದೇವರಿಗೆ ಮಾಡಲಾಯಿತು. ಮೂರನೆ ಯಾಮದಲ್ಲಿ ಕಬ್ಬಿನ ಹಾಲಿನ ಅಭಿಷೇಕ, ನಾಲ್ಕನೆ ಯಾಮದಲ್ಲಿ ಕಲಶಾಭಿಷೇಕ, ಐದನೆ ಯಾಮದಲ್ಲಿ ಪಂಚಾಮೃತ ಅಭಿಷೇಕ, ಆರನೇ ಯಾಮದಲ್ಲಿ ಜೇನುತುಪ್ಪದ ಅಭಿಷೇಕ, ಏಳನೆ ಯಾಮದಲ್ಲಿ ಜಲಾಭಿಷೇಕ ಮತ್ತು ಎಂಟನೆ ಹಾಗೂ ಕೊನೆಯ ಯಾಮದಲ್ಲಿ ವಿಶೇಷವಾಗಿ ಭಸ್ಮಾಭಿಷೇಕ ನೆರವೇರಿಸಲಾಯಿತು.

ಕ್ಷೇತ್ರದ ಶ್ರೀರಾಜೇಶ್‌ನಾಥ್‌ ಗುರೂಜಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಪ್ರಧಾನ ಅರ್ಚಕ ಜಗದೀಶ್‌ ಉಡುಪ ಅವರ ಪೌರೋಹಿತ್ಯದಲ್ಲಿ ಯಾಮದ ಪೂಜೆಗಳು ಸಾಂಗವಾಗಿ ನೆರವೇರಿದವು. ಅರ್ಚಕರಾದ ಹರಿ ಭಟ್‌, ವೆಂಕಟೇಶ್‌ ಹೊಳ್ಳ, ವಾದಿ ಭಟ್‌, ರಂಗ ಭಟ್‌, ದೇವಾಲಯದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಕಾರ್ಯದರ್ಶಿ ಪ್ರಕಾಶ್‌, ದೇವಾಲಯ ಸಮಿತಿ ಅಧ್ಯಕ್ಷ ಎಂ.ಸಿ.ಮೋಹನ್‌, ಬಜೆಗುಂಡಿ ಮಣಿ ಮತ್ತಿತರರು ಇದ್ದರು.