ಮಹದೇಶ್ವರಪುರ ಗ್ರಾಮದ ಡೇರಿಯ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಾದ ಎಂ.ಆರ್.ದೇವರಾಜ್, ಎಂ.ಎಚ್.ಲಕ್ಷ್ಮೇಗೌಡ, ಎಂ.ಎಸ್.ಜಯರಾಮು, ಎಂ.ಎಸ್.ಕೃಷ್ಣ, ಎಂ.ಎಚ್.ವಿಜಯಕುಮಾರ್, ನಾಗಮ್ಮ, ಚೇತನಕುಮಾರಿ ನಿರ್ದೇಶಕರಾಗಿ ಆಯ್ಕೆಯಾದರು. ಒಂದು ಸ್ಥಾನದಲ್ಲಿ ರೈತಸಂಘ ಬೆಂಬಲಿತ ಅಭ್ಯರ್ಥಿ ಎಂ.ಪಿ.ಕುಮಾರ್ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಮಹದೇಶ್ವರಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 8 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 7 ಮಂದಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.

ಗ್ರಾಮದ ಡೇರಿಯ 10 ನಿರ್ದೇಶಕ ಸ್ಥಾನಗಳ ಪೈಕಿ ಲಕ್ಷ್ಮಿ ಹಾಗೂ ಹೊನ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಾದ ಎಂ.ಆರ್.ದೇವರಾಜ್, ಎಂ.ಎಚ್.ಲಕ್ಷ್ಮೇಗೌಡ, ಎಂ.ಎಸ್.ಜಯರಾಮು, ಎಂ.ಎಸ್.ಕೃಷ್ಣ, ಎಂ.ಎಚ್.ವಿಜಯಕುಮಾರ್, ನಾಗಮ್ಮ, ಚೇತನಕುಮಾರಿ ನಿರ್ದೇಶಕರಾಗಿ ಆಯ್ಕೆಯಾದರು. ಒಂದು ಸ್ಥಾನದಲ್ಲಿ ರೈತಸಂಘ ಬೆಂಬಲಿತ ಅಭ್ಯರ್ಥಿ ಎಂ.ಪಿ.ಕುಮಾರ್ ಅವರು ಆಯ್ಕೆಯಾದರು.

ಡೇರಿಗೆ ಆಯ್ಕೆಯಾದ ಎಲ್ಲಾ ಜೆಡಿಎಸ್ ಬೆಂಬಲಿತ ನೂತನ ನಿರ್ದೇಶಕರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿ ಮಾತನಾಡಿ, ಡೇರಿ ಸಂಘಗಳು ರೈತರ ಬೆನ್ನೆಲುಬಾಗಿದ್ದು, ಆಯ್ಕೆಯಾದ ನಿರ್ದೇಶಕರು ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಮುಂಖಡರಾದ ಸಿ.ನಾಗರಾಜು, ಮಂಜುನಾಥ್, ಶ್ರೀಕಂಠಪ್ಪ, ಕುಮಾರ್, ಎಲ್‌ಐಸಿ.ಗಿರೀಶ್, ಉಮೇಶ್, ಕೆಚ್ಚೇಗೌಡ, ಬೆಣ್ಣೆಜಯರಾಮ್, ಲೋಕೇಶ್, ಎಂ.ಆರ್.ಸತೀಶ್ ಸೇರಿದಂತೆ ಹಲವರು ಇದ್ದರು.

ಗ್ರಾಪಂ ಅಧ್ಯಕ್ಷರಾಗಿ ಶೋಭಕುಮಾರಿ ಆಯ್ಕೆ

ಮಳವಳ್ಳಿ:

ತಾಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಪಂ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮಾರ್ಕಾಲು ಗ್ರಾಮದ ಶೋಭಾಕುಮಾರಿ ಎಂ.ಪ್ರಭುಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಹಿಟ್ಟನಹಳ್ಳಿಕೊಪ್ಪಲು ಗ್ರಾಮದ ಎಚ್.ಬಿ.ಪ್ರದೀಪ್ ಅವಿರೋಧವಾಗಿ ಆಯ್ಕೆಯಾದರು. ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ವೀರೇಶ್ ಗೌಡ, ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ಮುಖಂಡರಾದ ಪ್ರಮೋದ್ ಕುಮಾರ್, ನಟರಾಜು ಹಾಗೂ ಗ್ರಾಪಂ ಸದಸ್ಯರು ಇದ್ದರು.