10ರಂದು ಮಹಾದೇವ ಕೋಟ ಈಶ್ವರ ದೇವಾಲಯ ವಾರ್ಷಿಕೋತ್ಸವ

| Published : May 07 2025, 12:47 AM IST

ಸಾರಾಂಶ

ಇಲ್ಲಿಗೆ ಸಮೀಪದ ಈಸ್ಟ್‌ ಕೊಳಕೇರಿ ಶ್ರೀ ಮಹಾದೇವ ಕೋಟ ಈಶ್ವರ ದೇವಾಲಯದ ವಾರ್ಷಿಕೋತ್ಸವ ಮೇ 10 ರಂದು ಶನಿವಾರ ನಡೆಸಲು ತೀರ್ಮಾನಿಸಲಾಗಿದೆ.

ನಾಪೋಕ್ಲು :ಇಲ್ಲಿಗೆ ಸಮೀಪದ ಈಸ್ಟ್‌ ಕೊಳಕೇರಿ ಶ್ರೀ ಮಹಾದೇವ ಕೋಟ ಈಶ್ವರ ದೇವಾಲಯದ ವಾರ್ಷಿಕೋತ್ಸವ ಮೇ 10 ಶನಿವಾರ ನಡೆಸಲು ತೀರ್ಮಾನಿಸಲಾಗಿದೆ .

ಬಿದ್ಧಾಟಂಡ ವಾಡೆ ನಡೆಸಲು ತೀರ್ಮಾನಿಸಲಾಗಿದೆ. ಶ್ರೀ ಮಹಾದೇವ ಕೋಟ ಈಶ್ವರ ದೇವಾಲಯದ ವಾರ್ಷಿಕೋತ್ಸವ ಪ್ರಯುಕ್ತ ಶನಿವಾರ ಬೆಳಗ್ಗೆ 7 ಗಂಟೆಯಿಂದ 8 ಗಂಟೆ ವರೆಗೆ ಗಣ ಹೋಮ, 9 ಗಂಟೆಯಿಂದ 12ಗಂಟೆ ವರೆಗೆ ಶತ ರುದ್ರಾಭಿಷೇಕ, ಹಾಗೂ ರುದ್ರಾಭಿಷೇಕ ಪೂಜೆ 12 ಗಂಟೆ ಮಹಾ ಪೂಜೆ ನಡೆಯಲಿದೆ. ನಂತರ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.