ಸಾರಾಂಶ
ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಶುಕ್ರವಾರ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಮಹದೇವಮ್ಮ ಹಾಗೂ ಉಪಾಧ್ಯಕ್ಷೆ ಲಕ್ಷ್ಮಮ್ಮರನ್ನು ಸಂಘದ ನಿರ್ದೇಶಕರು, ಮುಖಂಡರು ಅಭಿನಂದಿಸಿದರು.
ಕನ್ನಡಪ್ರಭ ವಾರ್ತ ಯಳಂದೂರು
ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಹದೇವಮ್ಮ ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ ಶುಕ್ರವಾರ ಗ್ರಾಮದ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದರು.ಒಟ್ಟು ೯ ಮಂದಿ ನಿರ್ದೇಶಕರಿರುವ ಈ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಹದೇವಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಜಿ.ಜನಾರ್ಧನ್ ಇವರಿಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಘೋಷಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಹದೇವಮ್ಮ, ವೈಕೆ ಮೋಳೆ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಗುಣಮಟ್ಟದ ಹಾಲನ್ನು ಪೂರೈಸುವ ನಿಟ್ಟಿನಲ್ಲಿ ನಾವು ನಮ್ಮ ಸಂಘದ ಸದಸ್ಯರಿಗೆ ಮನವಿ ಮಾಡುತ್ತೇವೆ. ಜಿಲ್ಲೆಯಲ್ಲೇ ಉತ್ತಮ ಸಂಘವಾಗಿ ರೂಪಿಸಲು ಶ್ರಮ ಪಡುತ್ತೇವೆ. ಅಲ್ಲದೆ ಸರ್ಕಾರದಿಂದ ಬರುವ ಸಹಾಯ ಧನ ಹಾಗೂ ಇತರೆ ಸೌಲಭ್ಯಗಳನ್ನು ಕೊಡಿಸಲು ನಾವು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಎಲ್ಲರ ವಿಶ್ವಾಸದೊಂದಿಗೆ ಉತ್ತಮ ಸಂಘವಾಗಿ ರೂಪಿಸಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ನಿರ್ದೇಶಕರಾದ ರಾಜಮ್ಮ, ದೊಡ್ಡತಾಯಮ್ಮ, ಎಂ. ನಾಗರತ್ನ, ನಾಗಮ್ಮ, ಚೆನ್ನಬಸಮ್ಮ, ಲಕ್ಷ್ಮಮ್ಮ, ಮಂಜುಳಾ ಕಾರ್ಯನಿರ್ವಾಹಕ ಅಧಿಕಾರಿ ಶಿವಮ್ಮ ಹಾಲು ಪರೀಕ್ಷಕಿ ಸಾಕಮ್ಮ ಮುಖಂಡರಾದ ಸೋಮಣ್ಣ, ಕೆ. ವೆಂಕಟೇಶ್, ಮಹದೇವಶೆಟ್ಟಿ, ವೈ.ಕೆ.ಮೋಳೆ ನಾಗರಾಜು, ವೆಂಕಟೇಶ್, ಎಂ.ಸ್ವಾಮಿ, ಕೆಂಪರಾಜು, ವೆಂಕಟರಂಗಶೆಟ್ಟಿ, ಮರಿನಂಜಯ್ಯ, ಸಿದ್ದರಾಜು, ವಿಜಯ್ ಸೇರಿದಂತೆ ಅನೇಕರು ಇದ್ದರು.